ಗೋಣಿಕೊಪ್ಪ ವರದಿ, ಅ. ೨೬: ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ರಾಯಲ್ಸ್, ಕೂರ್ಗ್ ಚಾಲೆಂಜರ್ಸ್, ಕಾಕೋಟ್ ಸ್ಟೆçöÊಕರ್ಸ್, ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್, ಬೇರಳಿನಾಡ್, ಮಡಿಕೇರಿ ಚಾರ್ಮರ್ಸ್ ಗೆಲುವಿನ ಮುನ್ನಡೆ ಪಡೆದುಕೊಂಡಿತು.
ಬೇರಳಿನಾಡ್ ತಂಡವು ಕ್ಯಾಲ್ಸ್ ವಿರುದ್ಧ ಜಯಿಸಿತು. ಬೇರಳಿನಾಡ್ ಪರ ವಿಶಾಲ್ ೨, ವಿಜಯ್ ಉತ್ತಯ್ಯ, ಎನ್. ಬಿ. ನಾಚಪ್ಪ, ದಿವಿನ್, ಉತ್ತಪ್ಪ ತಲಾ ಒಂದೊAದು ಗೋಲುಗಳ ಕಾಣಿಕೆಯಿಂದ ೬ ಗೋಲು ದಾಖಲಿಸಿತು. ಕ್ಯಾಲ್ಸ್ ಗೋಲು ದಾಖಲಿಸುವಲ್ಲಿ ಎಡವಿತು.
ಅಮ್ಮತ್ತಿ ರಾಯಲ್ಸ್ ತಂಡಕ್ಕೆ ಮೂರ್ನಾಡು ಬ್ಲೇಜ್ ವಿರುದ್ಧ ಜಯ ದೊರೆಯಿತು. ರಾಯಲ್ಸ್ ಆಟಗಾರರಾದ ಜಶಿನ್ ೨, ಮ್ಯಾಕ್, ಹರ್ಷಣ್, ವಿಪುಲ್, ಪ್ರತಿಕ್ ತಲಾ ಒಂದೊAದು ಗೋಲು ಸೇರಿಸಿ ತಂಡಕ್ಕೆ ೭ ಗೋಲುಗಳ ಜಯಕ್ಕೆ ಕಾರಣರಾದರು. ಬ್ಲೇಜ್ ಗೋಲು ದಾಖಲಿಸಲಿಲ್ಲ.
ಮಡಿಕೇರಿ ಚಾರ್ಮರ್ಸ್ ತಂಡವು ಕಕ್ಕಬ್ಬೆ ಮಲ್ಮ (ಬಿ) ವಿರುದ್ಧ ಜಯಿಸಿತು. ಚಾರ್ಮರ್ಸ್ ೨, ಮಲ್ಮ ೧ ಗೋಲು ದಾಖಲಿಸಿತು. ಚಾರ್ಮರ್ಸ್ ಆಟಾರ ವಿಶಾಲ್, ಸುಗುಣ್, ಮಲ್ಮ ಆಟಗಾರ ಗೌತಂ ತಲಾ ಒಂದೊAದು ಗೋಲು ಹೊಡೆದರು.
ಕೂರ್ಗ್ ಚಾಲೆಂಜರ್ಸ್ ತಂಡವು ಕುತ್ತ್ನಾಡ್ ಸ್ಟಿçÃಕರ್ಸ್ ತಂಡವನ್ನು ಮಣಿಸಿತು. ಚಾಲೆಂಜರ್ಸ್ ಪರ ಬೋಪಣ್ಣ ಹ್ಯಾಟ್ರಿಕ್ ಸೇರಿ ೫ ಗೋಲು ಬಾರಿಸಿದರು. ಪ್ರಣವ್ ೧ ಗೋಲು ಬಾರಿಸಿ ತಂಡಕ್ಕೆ ೮ ಗೋಲುಗಳ ಜಯ ತಂದುಕೊಟ್ಟರು. ಕುತ್ತ್ನಾಡ್ ಗೋಲಿನಿಂದ ವಂಚಿತವಾಯಿತು.
ಕಾಕೋಟ್ ಸ್ಟೆçöÊಕರ್ಸ್ ತಂಡವು ವೀರಾಜಪೇಟೆ ಕೊಡವ ಸಮಾಜ (ಎ) ವಿರುದ್ಧ ಅಮೋಘ ಗೆಲುವು ದಾಖಲಿಸಿತು. ಕಾಕೋಟ್ ತಂಡ ೧೦ ಗೋಲು ಪೇರಿಸಿತು. ವೀರಾಜಪೇಟೆ ಗೋಲಿಲ್ಲದೆ ನಿರಾಸೆ ಅನುಭವಿಸಿತು. ಕಾಕೋಟ್ ಪರ ಸುರೇಶ್, ಬಿದ್ದು ಜನಮ್ ನಾಚಪ್ಪ ತಲಾ ೨ ಗೋಲುಗಳ ಕಾಣಿಕೆ ನೀಡಿದರು. ಸಿ.ಎಸ್. ಪೆಮ್ಮಯ್ಯ, ದಿನೇಶ್, ಡೀನ್ ದೇವಯ್ಯ, ವಚನ್ ತಲಾ ಒಂದೊAದು ಗೋಲು ದಾಖಲಿಸಿದರು. ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ವೀರಾಜಪೇಟೆ ಕೊಡವ ಸಮಾಜ (ಬಿ) ವಿರುದ್ಧ ಜಯ ದೊರೆಯಿತು. ಬಲಂಬೇರಿ ೭, ವೀರಾಜಪೇಟೆ ೧ ಗೋಲು ದಾಖಲಿಸಿತು. ಬಲಂಬೇರಿ ಆಟಗಾರರಾದ ಮಯೂರ್ ೪ ಗೋಲು ಬಾರಿಸಿದರು. ಅಪ್ಪಚ್ಚು ೨, ಕಾರ್ತಿಕ್ ಹಾಗೂ ವೀರಾಜಪೇಟೆ ಆಟಗಾರ ಬೆಳ್ಯಪ್ಪ ತಲಾ ಒಂದೊAದು ಗೋಲು ಬಾರಿಸಿದರು.