ಮಡಿಕೇರಿ. ಅ. ೨೭ : ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಓಟದ ವಿಭಾಗದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ಪೊನ್ನಂಪೇಟೆ ಸಂತ ಅಂತೋಣಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಮ್ಯಾನುವಲ್ ಡಿಸೋಜಾ ಅವರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನವನ್ನು ನೀಡಿದರು.
ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ರತನ್ ಮಾದಯ್ಯ ಹಾಗೆಯೇ ಸಂತ ಅಂತೋಣಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶಂಬು ಕಾರ್ಯಪ್ಪ ಹಾಗೂ ಮುಖ್ಯೋಪಾಧ್ಯಾಯ ರಾದ ರಜಿನಿ ಉಪಸ್ಥಿತರಿದ್ದರು.
ಕ್ರೀಡಾಕೂಟದ ಮೇಲುಸ್ತುವಾರಿಯನ್ನು ಸಂತ ಅಂತೋಣಿ ವಿದ್ಯಾ ಸಂಸ್ಥೆಯ ಕನ್ನಡ ಅಧ್ಯಾಪಕರಾದ ಪವನ್, ದೈಹಿಕ ಶಿಕ್ಷಣ ಶಿಕ್ಷಕರಾದ ಜೋಜೋ ಹಾಗೂ ವಿನೋದ್ ವಹಿಸಿದ್ದರು. ಪೌಶಿಕ, ಕುಮಾರಿ ಧನುಶ್ರೀ ಹಾಗೂ ಶಾಹಿದ ಹಾಜರಿದ್ದರು. ಸಂತ ಅಂತೋಣಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡಾಕೂಟವನ್ನು ನಡೆಸಲು ಶ್ರಮಿಸಿದರು.