ಮಡಿಕೇರಿ, ಅ. ೨೮: ಪ್ರತ್ಯೇಕ ಸೇವಾ ನ್ಯೂನತೆ ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಂಬAಧಿಸಿದ ಸಂಸ್ಥೆಗಳಿಗೆ ದಂಡ ವಿಧಿಸುವುದರೊಂದಿಗೆ ಗ್ರಾಹಕರಿಗೆ ಹಣ ಹಿಂದಿರುಗಿಸುವAತೆ ತೀರ್ಪು ಘೋಷಿಸಿದೆ.
ಗುಡ್ಡೆಹೊಸೂರು ಗ್ರಾಮದ ನಿವಾಸಿ ಮಾಚಂಡ ಎನ್. ಚಂಗಪ್ಪ ಅವರು ಜನವರಿ ತಿಂಗಳಿನಲ್ಲಿ ವಿ-ಗಾರ್ಡ್ ಸೋಲಾರ್ ವಾಟರ್ ಹೀಟರ್ ಅನ್ನು ರೂ. ೨೮ ಸಾವಿರಕ್ಕೆ ಖರೀದಿಸಿ ತಮ್ಮ ಮನೆಗೆ ಅಳವಡಿಸಿಕೊಂಡಿದ್ದಾರೆ. ಇದರ ಅಳವಡಿಕೆಯ ವೆಚ್ಚ ರೂ.೩ ಸಾವಿರವಾಗಿದ್ದು, ಇದಕ್ಕೆ ೮ ವರ್ಷಗಳ ಕಾಲ ವಾರೆಂಟಿಯನ್ನು ನೀಡಲಾಗಿದೆ. ವಾಟರ್ ಹೀಟರ್ ಅಳವಡಿಸಿದ ಕೆಲವು ದಿನಗಳಲ್ಲಿ ಅದರಿಂದ ಬಿಸಿ ನೀರು ಬಾರದ ಹಿನ್ನೆಲೆ ಈ ಬಗ್ಗೆ ಕಂಪೆನಿಯವರನ್ನು ಕೇಳಿದಾಗ ಅವರು ಶೀಘ್ರದಲ್ಲೆ ಬಂದು ದುರಸ್ತಿ ಮಾಡಿಕೊಡುತ್ತೇವೆ ಎಂದು ಹೇಳಿದರೂ ಸಹ ರಿಪೇರಿ ಮಾಡಿರುವುದಿಲ್ಲ. ಇದರಿಂದ ವಾಟರ್ ಹೀಟರ್ ಖರೀದಿಸಲು ಪಾವತಿಸಿರುವ ಮೊತ್ತ ಹಿಂದಿರುಗಿಸುವAತೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.
ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ವಾದ ವಿವಾದಗಳನ್ನು ಆಲಿಸಿ ದಾಖಲಾತಿಗಳನ್ನು ಪರಿಶೀಲಿಸಿದ ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಬಾರ ಅಧ್ಯಕ್ಷರಾದ ಡಾ. ಸಿ. ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ದೂರುದಾರರ ಮನೆಗೆ ಅಳವಡಿಸಿರುವ ವಾಟರ್ ಹೀಟರ್ ಅನ್ನು ಹಿಂಪಡೆದು, ಅವರು ಪಾವತಿಸಿರುವ ಮೊತ್ತ ೩೧ ಸಾವಿರ ರೂ.ಗಳ ಜೊತೆಗೆ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೧೦ ಸಾವಿರ ಮತ್ತು ವ್ಯಾಜ್ಯದ ಖರ್ಚುವೆಚ್ಚಗಳಿಗೆ ರೂ. ೫ ಸಾವಿರವನ್ನು ಪಾವತಿಸಬೇಕೆಂದು ಆದೇಶ ನೀಡಿದ್ದಾರೆ.
ಮತ್ತೊಂದು ಪ್ರಕರಣ
ಕುಶಾಲನಗರ ತಾಲೂಕಿನ ನಿವಾಸಿ ಎ.ಜಿ. ಜಾನ್ಸನ್ ಎಂಬವರು ೨೦೨೪ರಲ್ಲಿ ಬೆಂಗಳೂರಿನ ವಿನಾಯಕ ಎಂಟರ್ಪ್ರೆöÊಸಸ್ನಲ್ಲಿ ಓ.ಎಲ್.ಎಕ್ಸ್ ನಲ್ಲಿ ಹೊರಡಿಸಿದ್ದ ಜಾಹೀರಾತನ್ನು ನೋಡಿ ಇಕೋ ಸ್ಪೋರ್ಟ್ಸ್ ಕಾರನ್ನು ರೂ. ೪.೨೫ ಲಕ್ಷವನ್ನು ಪಾವತಿಸಿ ಖರೀದಿ ಮಾಡಿದ್ದಾರೆ. ವಾಹನವನ್ನು ಕುಶಾಲನಗರದ ಮಾರ್ಗವಾಗಿ ಚಲಾಯಿಸಿಕೊಂಡು ಬರುವಾಗ ವಾಹನದ ಗೇರ್ ಬಾಕ್ಸ್ ಟೈಟ್ ಆಗಿ ವಾಹನವು ಚಲಿಸಲು ಕಷ್ಟಸಾಧ್ಯವಾಗಿದೆ. ಈ ಸಮಯದಲ್ಲಿ ವಾಹನದ ಓಡೋಮೀಟರ್ ರೀಡಿಂಗ್ ೧,೨೦,೦೧೦ ಕಿ.ಮೀ. ಆಗಿದ್ದು, ನಂತರ ಕಾರನ್ನು ಶೋರೂಂಗೆ ಬಿಟ್ಟು ದೂರುದಾರರು ಪಾವತಿಸಿರುವ ಮೊತ್ತವನ್ನು ವಾಪಸ್ಸು ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಇದಕ್ಕೆ ಒಪ್ಪಿದ ಸಂಸ್ಥೆ ಹಣ ಮರುಪಾವತಿ ಮಾಡುತ್ತೇವೆ ಎಂದು ಭರವಸೆಯನ್ನು ಸಹ ನೀಡಿದೆ. ಆದರೆ ಹಲವು ದಿನಗಳು ಕಳೆದರೂ ಹಣವನ್ನು ಹಿಂತಿರುಗಿಸಿರುವುದಿಲ್ಲ. ಈ ಬಗ್ಗೆ ವಿಚಾರಿಸಲು ಎಂದು ದೂರುದಾರರು ಶೋರೂಂಗೆ ಹೋದಾಗ, ವಾಹನದ ಓಡೋಮೀಟರ್ ಅನ್ನು ೧,೨೦,೦೦೦ ಕಿ.ಮೀ. ರಿಂದ ೯೩,೦೦೦ ಕಿ.ಮೀ.ಗೆ ಟ್ಯಾಂಪರಿAಗ್ ಮಾಡಿರುವುದು ಕಂಡುಬAದಿದೆ. ಸೇವಾ ನ್ಯೂನತೆ ಉಂಟು ಮಾಡಿದ ಆರೋಪದಡಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಲ್ಲಿ ಜಾನ್ಸನ್ ದೂರನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಪ್ರಬಾರ ಅಧ್ಯಕ್ಷ ರಾದ ಡಾ. ಸಿ. ರೇಣುಕಾಂಬ ಹಾಗೂ ಸದಸ್ಯರಾದ ಗೌರಮ್ಮಣ್ಣಿ ಅವರುಗಳು ವಿನಾಯಕ ಎಂಟರ್ಪ್ರೆöÊಸಸ್ ಸಂಸ್ಥೆಗೆ ದೂರುದಾರರಿಗೆ ಮಾರಾಟ ಮಾಡಿರುವ ವಾಹನವನ್ನು ಹಿಂಪಡೆದು ವಾಹನ ಖರೀದಿಸಲು ಪಾವತಿಸಿರುವ ಮೊತ್ತ ರೂ. ೪.೨೫ ಲಕ್ಷ, ವಾಹನದ ದುರಸ್ತಿಗೆ ಎಂದು ಮಾಡಿರುವ ಖರ್ಚು ರೂ. ೧೪,೩೨೭ ಹಾಗೂ ಅವರಿಗೆ ಉಂಟಾದ ಮಾನಸಿಕ ವೇದನೆಗೆ ಪರಿಹಾರವಾಗಿ ರೂ.೨೦ ಸಾವಿರ ಮತ್ತು ವ್ಯಾಜ್ಯದ ಖರ್ಚುವೆಚ್ಚಗಳಿಗೆ ರೂ. ೧೦ ಸಾವಿರ ಪಾವತಿಸಬೇಕೆಂದು ಆದೇಶ ಹೊರಡಿಸಿದ್ದಾರೆ.