ಮಡಿಕೇರಿ, ಅ. ೨೭: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮೇ ತಿಂಗಳಿನಿAದಲೇ ಮಳೆ ಗಾಲ ಆರಂಭಗೊAಡಿದ್ದು, ನವಂಬರ್ ತಿಂಗಳು ಎದುರಾದರೂ ಮಳೆ ಕಡಿಮೆಯಾ ಗುತ್ತಿಲ್ಲ. ವಿಪರೀತ ಮಳೆ ಹಾಗೂ ವಾತಾವರಣದ ಏರು - ಪೇರಿ ನಿಂದಾಗಿ ಕೊಡಗಿನ ಆರ್ಥಿಕತೆಯ ಪ್ರಮುಖ ಮೂಲವಾದ ಕಾಫಿ ಫಸಲಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಜಿಲ್ಲೆಯಾದ್ಯಂತ ಹೆಚ್ಚಿನ ಮಳೆಯಿಂದಾಗಿ ಕಾಫಿ ಬೆಳೆ ತೀರಾ ಹಾನಿಗೀಡಾಗಿದ್ದು, ಬೆಳೆಗಾರರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ.
ಬೆಳೆ ನಷ್ಟದ ಕುರಿತಾಗಿ ಇತ್ತೀಚೆಗೆ ಕಾಫಿ ಮಂಡಳಿ, ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಮೂಲಕ ಒಂಟಿ ಸಮೀಕ್ಷೆ ನಡೆದಿದ್ದು, ಇದೀಗ ಇದರ ವರದಿಯನ್ನು ಕ್ರೋಢೀಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಆದರೆ, ಕಾಫಿ ಬೆಳೆಗೆ ೩೩ ರಷ್ಟು ನಷ್ಟ ಸಂಭವಿಸಿಲ್ಲ ಎಂಬAತೆ ವರದಿ ನೀಡ ಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ಕಿಡಿಕಾರಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ವಾತಾ ವರಣದ ಏರುಪೇರಿನಿಂದಾಗಿ ಕಾಫಿ ಬೆಳೆ ಹಾನಿಗೀಡಾಗಿದ್ದರೂ ಬೆಳೆಗಾರರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಈ ವರ್ಷವೂ ಮತ್ತೆ ಅಪಾರ ನಷ್ಟ ಸಂಭವಿಸಿದ್ದರೂ ವರದಿ ವ್ಯತಿರಿಕ್ತವಾಗಿದ್ದು, ಬೆಳೆಗಾ ರರು ನಷ್ಟ ಪರಿಹಾರದಿಂದ ಮತ್ತೆ ವಂಚಿತರಾಗಲಿದ್ದಾರೆ ಎಂದು ಸುಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ನವಂಬರ್ ತಿಂಗಳು ಎದುರಾದರೂ ಮಳೆ ಬಿಡದೆ ಮತ್ತೂ ಹಾನಿ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅದರಲ್ಲೂ ಕೊಡಗಿನ ವಿವಿಧ ಹೋಬಳಿ - ಗ್ರಾಮೀಣ ಭಾಗಗಳಲ್ಲಿ ೨೫೦ ರಿಂದ ೩೦೦ ಇಂಚುಗಳಿಗೂ ಅಧಿಕ ಮಳೆಯಾಗಿದೆ. ಇಂತಹ ಪ್ರದೇಶಗಳನ್ನು ಗುರುತು ಮಾಡಿ ಆಯಾಯ ಹೋಬಳಿಗಳಲ್ಲಿ ಮರು ಸಮೀಕ್ಷೆ ನಡೆಸಿ ನಷ್ಟದ ಕುರಿತು ವಾಸ್ತವ ೪ಐದÀನೇ ಪುಟಕ್ಕೆ (ಮೊದಲ ಪುಟದಿಂದ) ವರದಿಯನ್ನು ನೀಡಲು ಕ್ರಮವಹಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಿರುವುದಾಗಿ ‘ಶಕ್ತಿ’ಗೆ ತಿಳಿಸಿರುವ ಸುಜಾ ಕುಶಾಲಪ್ಪ ಸರಕಾರ ಕಾಫಿ ಬೆಳೆ ನಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಬೆಳೆಗಾರರು ಮಾತ್ರವಲ್ಲದೆ ಕಾಫಿಯನ್ನು ಅವಲಂಬಿಸಿಯೇ ಹಲವು ಮಂದಿ ಬದುಕು ಕಾಣುತ್ತಿದ್ದಾರೆ. ಇದನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಮುಂದಾಗಬೇಕೆAದು ತಾವು ಸರಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸುವುದಾಗಿ ಸುಜಾ ಕುಶಾಲಪ್ಪ ಅವರು ತಿಳಿಸಿದ್ದಾರೆ.