ಗೋಣಿಕೊಪ್ಪಲು, ಅ. ೨೭: ಕೊಡಗು ಜಿಲ್ಲೆಯು ರಾಷ್ಟಿçÃಯತೆಯ ಭದ್ರಕೋಟೆಯಾಗಿದ್ದು ಸೇನೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಹೆಗ್ಗಳಿಕೆ ಕೊಡಗು ಜಿಲ್ಲೆಗೆ ಸಲ್ಲಬೇಕು. ಕೊಡಗು ಹಾಗೂ ಮೈಸೂರು ತನ್ನದೆ ಆದ ಪರಂಪರೆಯನ್ನು ಹೊಂದಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು.
ಹುದಿಕೇರಿ ಪಟ್ಟಣದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯು ನೀಡಿರುವ ನಿವೇಶನದಲ್ಲಿ ಮಾಜಿ ಯೋಧರು, ಸೈನಿಕರು ಒಟ್ಟಾಗಿ ಸೇರಿ ರೂ. ೧೩ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಮರ್ ಜವಾನ್ ಸ್ಮಾರಕವನ್ನು ಅನಾವರಣಗೊಳಿಸಿದರು.
ನಂತರ ಕೊಡವ ಸಮಾಜದಲ್ಲಿ ಆಯೋಜನೆ ಗೊಂಡಿದ್ದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಸದರು, ದೇಶದ ರಕ್ಷಣೆಗೆ ಕೊಡಗಿನ ಸೈನಿಕರು ತಮ್ಮದೆ ಆದ ಕೊಡುಗೆಯನ್ನು ನೀಡುತ್ತಲೆ ಬಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಸ್ಮಾರಕದಿಂದ ೪ಐದÀನೇ ಪು vಯೋಧರ ಸ್ಮರಣೀಯ ನಿರಂತರವಾಗಲಿದೆ ಎಂದರು. ಗಡಿಯಲ್ಲಿ ಯೋಧರು ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಭಾರತೀಯರು ನೆಮ್ಮದಿಯಾಗಿದ್ದೇವೆ. ವಿಕಸಿತ ಭಾರತದಲ್ಲಿ ಹುದಿಕೇರಿ ಕ್ಷೇತ್ರವು ವಿಕಸಿತ ಕ್ಷೇತ್ರವಾಗಲಿ. ಇದಕ್ಕೆ ಬೇಕಾದ ಸಹಕಾರಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹುದಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಎ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹುದಿಕೇರಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ದೇಶಕ್ಕೆ ಸೇವೆ ಸಲ್ಲಿಸಿ ಇದೀಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಸೈನಿಕರ ನೆನಪಿಗಾಗಿ ಕಳೆದ ೬ ತಿಂಗಳ ಹಿಂದೆ ಸ್ಮಾರಕ ನಿರ್ಮಾಣದ ಯೋಜನೆ ರೂಪಿಸಲಾಯಿತು. ಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಯುದ್ಧ ಸ್ಮಾರಕಕ್ಕೆ ಬೇಕಾದ ಸ್ಥಳವನ್ನು ನೀಡುವ ಮೂಲಕ ಹುದಿಕೇರಿಯಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಾಣದ ನಿರ್ಧಾರ ಕೈಗೊಳ್ಳಲಾಯಿತು. ಮಾಜಿ ಸೈನಿಕರು ಸಹಕಾರವನ್ನು ನೀಡಿದ ಹಿನ್ನಲೆಯಲ್ಲಿ ೧೩ ಲಕ್ಷ ವೆಚ್ಚದ ಯುದ್ದ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದರಿಂದ ಸೈನಿಕರಿಗೆ ಗೌರವ ನೀಡುವ ಕೆಲಸ ಆರಂಭವಾಗಿದೆ. ಈ ಕಾರ್ಯಕ್ಕೆ ನಾಗರಿಕರು ನೀಡಿದ ಸಹಕಾರವನ್ನು ಸ್ಮರಿಸಿದರು.
ಶ್ರೀಮಂಗಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗೌರವ ವಂದನೆ ನೀಡಿದರು. ನಂತರ ಸಂಸದ ಯದುವೀರ್ ಯುದ್ದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾಜಿ ಸೈನಿಕರು ಸಮವಸ್ತçದೊಂದಿಗೆ ಆಗಮಿಸಿ ಗಮನ ಸೆಳೆದರು. ಪಟ್ಟಣದ ಯುದ್ಧ ಸ್ಮಾರಕ ಸ್ಥಳದಿಂದ ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಸಂಸದರನ್ನು ಮೆರವಣಿಗೆಯ ಮೂಲಕ ಕೊಡವ ಸಮಾಜದ ಸಭಾಂಗಣಕ್ಕೆ ಕರೆ ತರಲಾಯಿತು.
ಕಾರ್ಯಕ್ರಮದ ಅಂಗವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರ ಕುಟುಂಬಸ್ಥರುಗಳಾದ ಬಯವಂಡ ಬಿ.ಸುಬ್ಬಯ್ಯ, ಮಂಡೇರ ಪಿ.ಬೋಪಯ್ಯ, ಕೋಳೆರ ಎ. ಸವಿನಾ, ಮಂಡೇಚAಡ ಕೆ.ಅಯ್ಯಪ್ಪ, ಕೇಚಮಾಡ ಪಿ.ತಿಲಕ್, ಮೇಜರ್ ಪೆಮ್ಮಂಡ ಎಂ.ಮಧು ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೊಜ್ಜಂಗಡ ಅವನಿಜ ಜಗದೀಶ್ ಬರೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ೨ನೇ ಆವೃತ್ತಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಕ್ಯಾಪ್ಟನ್ ಬೊಳ್ಳಿಮಾಡ ಧನು ದೇವಯ್ಯ ವೀರಗೀತೆ ಹಾಡಿದರು. ಯುದ್ಧ ಸ್ಮಾರಕಕ್ಕೆ ಗಣ್ಯರು ಪುಷ್ಪಾರ್ಚನೆ ಗೈದರು. ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ವೇದಿಕೆಯಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಸೈನಿಕ ಸಂಘದ ಗೌರವ ಅಧ್ಯಕ್ಷ ಕೊಟ್ಟುಕತ್ತಿರ ಪಿ. ಸೋಮಣ್ಣ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ಹುದಿಕೇರಿ ಮಾಜಿ ಸೈನಿಕ ಸಂಘದ ಗೌರವ ಅಧ್ಯಕ್ಷ ಬಯವಂಡ ಯು.ಕಾಳಪ್ಪ, ಹಿರಿಯ ಸಲಹೆಗಾರರಾದ ಮಂಡೆಚAಡ ದಿನೇಶ್ ಚಿಟ್ಟಿಯಪ್ಪ, ನಿವೃತ್ತ ಕರ್ನಲ್ ಕಾವೇರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹುದಿಕೇರಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚೆಕ್ಕೆರ ಎಂ.ರಮೇಶ್, ಕಾರ್ಯದರ್ಶಿ ಬೊಜ್ಜಂಗಡ ಎಂ. ತಿಮ್ಮಯ್ಯ, ಕಿರಿಯಮಾಡ ಎ. ಗಣಪತಿ ಮಿಲನ್, ಖಜಾಂಚಿ ಬೊಳ್ಳಜಿರ ಪಿ. ಕಿಶೋರ್, ಜಂಟಿ ಕಾರ್ಯದರ್ಶಿ ಬೊಳ್ಳಿಮಾಡ ಪಿ. ಬಿನುಕುಮಾರ್, ಬೊಜ್ಜಂಗಡ ಸುನೀಲ್ ಕುಮಾರ್, ನಿರ್ದೇಶಕ ಮಲ್ಲೆಂಗಡ ಜಯ ಉತ್ತಯ್ಯ, ಹಿರಿಯ ಸಲಹೆಗಾರರಾದ ಬಯವಂಡ ಯು.ಕಾಳಪ್ಪ, ಮಂಡಚAಡ ದಿನೇಶ್ ಚಿಟ್ಟಿಯಪ್ಪ ಉಪಸ್ಥಿತರಿದ್ದರು. ಎನ್ಸಿಸಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.