ಚೆಯ್ಯಂಡಾಣೆ, ಅ.೨೭: ಕೊಡಗು ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ವತಿಯಿಂದ ಕೊಂಡAಗೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ತಾ.೨೯ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೩ ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಸುನ್ನಿ ಮಹಲ್ಲಿನ ಸಮಿತಿ ಸದಸ್ಯರುಗಳಿಗೆ ಹಾಗೂ ಖತೀಬರುಗಳಿಗೆ ಜಮಾಅತ್ ಆಡಳಿತದ ಬಗ್ಗೆ ಒಂದು ದಿನದ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
ಶಿಬಿರಕ್ಕೆ ತರಬೇತುದಾರರಾಗಿ ಕೇರಳದ ಪ್ರಖ್ಯಾತ ತರಬೇತುದಾರರಾದ ಮುತ್ತನ್ನೂರು ತಂಙಳ್ ಹಾಗೂ ಅದ್ದು ಮಾಸ್ಟರ್ ತರಬೇತಿ ನೀಡಲಿದ್ದಾರೆ ಎಂದು ಕೊಡಗು ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.