ವೀರಾಜಪೇಟೆ, ಅ. ೨೭: ವೀರಾಜಪೇಟೆ ಪ.ಪಂ (ಈಗಿನ ಪುರಸಭೆ) ಆಡಳಿತ ಮಂಡಳಿ ರಾಜ್ಯಾದ್ಯಂತ ಸ್ಥಳೀಯ ಆಡಳಿತ ಮಂಡಳಿಯ ಅವಧಿ ಕೊನೆಗೆ ತಡೆ ನೀಡಿದಂತೆ ನಮಗೂ ತಡೆಕೋರಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದೆ.
ವೀರಾಜಪೇಟೆ ಪುರಸಭೆಯಲ್ಲಿ ಈಗಿರುವ ಆಡಳಿತ ಮಂಡಳಿಯ ಅಧಿಕಾರ ಇದೇ ತಿಂಗಳ ಕೊನೆಗೆ ಮುಕ್ತಾಯವಾಗಲಿದ್ದು, ಇದನ್ನು ಮತ್ತೆ ಮುಂದುವರಿಸುವAತೆ ಈಗಿನ ಆಡಳಿತ ಮಂಡಳಿ ರಾಜ್ಯ ಉಚ್ಚ ನ್ಯಾಯಲಯದ ಮೊರೆಹೋಗಿದೆ. ಈಗಾಗಲೆ ರಾಜ್ಯದ ನಗರಸಭೆ, ಪುರಸಭೆ, ಪ.ಪಂಗಳ ಅವಧಿ ಕೊನೆಗೆ ನೀಡಿದಂತೆಯೇ ನಮಗೂ ಅವಕಾಶ ನೀಡಿ ಎನ್ನುವುದು ಇವರ ವಾದವಾಗಿದೆ.
೨೦೧೮ರಲ್ಲಿ ಪ.ಪಂಗಾಗಿ ನಡೆದ ಚುನಾವಣೆಯಲ್ಲಿ ೧೮ ಜನ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಮೀಸಲಾತಿ ಗೊಂದಲದಿAದ ಎರಡು ವರ್ಷ ಅಧಿಕಾರ ವಂಚಿತರಾಗಿದ್ದರು. ನಂತರ ಇಲ್ಲಿ ಬಿಜೆಪಿ ಮೊದಲ ಅವಧಿ ಅಧಿಕಾರ ನಡೆಸಿತು. ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕೊನೆಗೊಂಡು ವೀರಾಜಪೇಪೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸೋಲಿನ ಬಳಿಕ ಪ.ಪಂ ಕಾಂಗ್ರೆಸ್ ಅಧಿಕಾರ ಹಿಡಿಯಿತು.
ಈಗ ಇವರ ಆಡಳಿತ ಒಂದು ವರ್ಷ ಪೂರೈಸಿದ್ದು, ಅಧಿಕಾರ ಇದೇ ಅ.೩೧ ಕ್ಕೆ ಕೊನೆಯಾಗಲಿದೆ. ಈಗ ಈ ಆಡಳಿತ ಮಂಡಳಿಯು ತಮಗೆ ಇನ್ನು ಕೆಲವು ಸಮಯ ಕಾಲಾವಕಾಶ ಕೋರಿ ನ್ಯಾಯಾಲಯ ಮೊರೆ ಹೋಗಿದ್ದಾರೆ. ಪ.ಪಂ. ಅಧ್ಯಕ್ಷೆಯಾಗಿರುವ ಮನೆಯಪಂಡ ದೇಚಮ್ಮ ಇದಕ್ಕೆ ಉತ್ತರಿಸಿ, ಪ್ರಸ್ತುತ ಪ.ಪಂ. ಆಗಿಯೇ ಮುಂದುವರಿಯುತ್ತಿದ್ದು, ಇನ್ನು ಪುರಸಭೆಯ ಉನ್ನತೀಕರಣ ಪ್ರಕ್ರಿಯೆ ಪೂರ್ಣವಾಗಿಲ್ಲ. ಅಗತ್ಯ ಸಿಬ್ಬಂದಿ ಪುರಸಭೆಗೆ ನೇಮಕವಾಗದೆ ಪ.ಪಂ ಸಿಬ್ಬಂದಿ ಮುಂದುವರಿದಿದ್ದಾರೆ. ನಾವು ಪಂ.ಪA. ಸದಸ್ಯರಾಗಿಯೇ ಅಧಿಕಾರ ನಡೆಸುತ್ತಿದ್ದೇವೆ. ಇಲ್ಲಿ ಆರಂಭದಲ್ಲಿ ಮೀಸಲಾತಿ ಗೊಂದಲ ನಂತರ ಕೋವಿಡ್ ಎಂದು ನಾವು ಅಧಿಕಾರ ವಂಚಿತರಾಗಿದ್ದು, ಇನ್ನು ನಮಗೆ ನ್ಯಾಯವಾಗಿ ಒಂದೂವರೆ ವರ್ಷಕಾಲ ಆಡಳಿತ ಅವಧಿ ಸಿಗಬೇಕು. ಈ ನಿಟ್ಟಿನಲ್ಲಿ ನಾವು ಮಾತ್ರವಲ್ಲದೆ ಕರ್ನಾಟಕದ ೧೯೫ ಸ್ಥಳೀಯ ಸಂಸ್ಥೆಯವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಕೊಡಗಿನಲ್ಲಿ ಸೋಮವಾರಪೇಟೆ ಕುಶಾಲನಗರ ಸ್ಥಳೀಯ ಸಂಸ್ಥೆಗೆ ತಡೆ ಸಿಕ್ಕಿದೆ. ಆಡಳಿತಾಧಿಕಾರಿನ್ನು ನೇಮಿಸಿ ಜಿ.ಪಂ, ತಾ.ಪಂ .ನÀಂತೆ ಚುನಾವಣೆ ವಿಳಂಬ ಮಾಡುವ ಬದಲು ನಮಗೆ ಅವಧಿ ಇದೆ ಅದನ್ನು ವಿಸ್ತರಿಸಿ ಅಧಿಕಾರ ನೀಡಿ ಇಲ್ಲ ತಕ್ಷಣ ಚುನಾವಣೆ ನಡೆಸಿ ಎಂಬುದಾಗಿದೆ. ನೂತನವಾಗಿ ಗುರುತಿಸಿದ ಹೆಚ್ಚುವರಿ ಸ್ಥಳದ ಪ್ರತಿನಿಧಿಗಳಾಗಿ ಸುನೀತ ಮತ್ತು ಅತಿಕ್ ಮನ್ನಾ ಎಂಬ ಸದಸ್ಯರನ್ನು ಸರಕಾರ ನೇಮಿಸಿದ್ದು, ಮತದಾನದ ಹಕ್ಕು ಸಹ ಅವರಿಗೆ ನೀಡಲಾಗಿದೆ ಎಂದರು.