ಮಡಿಕೇರಿ, ಅ. ೨೭: ಪ್ರಸ್ತುತ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚಿನ ಅಭಿರುಚಿಯನ್ನು ರೂಢಿಸಿಕೊಳ್ಳಬೇಕು ಎಂದು ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಆಂಗ್ಲ ವಿಭಾಗದ ಜಾಯ್ಸ್ ಸಾಹಿತ್ಯ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನವಾಗಿ ಪ್ರಬುದ್ಧರಾಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ ಅವರು ಆಂಗ್ಲ ಐಚ್ಚಿಕ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿರಬೇಕು ಮತ್ತು ವಿವಿಧ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮಡಿಕೇರಿಯಲ್ಲಿನ ವಾರದ ಸಂತೆಗೆ ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ತೆರಳಿ ಅಲ್ಲಿನ ವ್ಯಾಪಾರಿಗಳ ಜೊತೆಗೆ ಪ್ರಾಯೋಗಿಕವಾಗಿ ಸಂದರ್ಶನ ಮಾಡಲಾಗಿತ್ತು. ಮಾರುಕಟ್ಟೆ ವಿಷಯಕ್ಕೆ ಸಂಬAಧಿಸಿದAತೆ ನಾಟಕ, ಕಥೆ, ಭಾಷಣ, ಪದ್ಯ ಮತ್ತು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮ ದಿನದಂದು ಬಹುಮಾನ ನೀಡಲಾಯಿತು. ಮಾರುಕಟ್ಟೆ ಜನರ ಜೀವನ ಕುರಿತು ಕಥೆ ರಚಿಸಿದ ನಾಫಿಯ ತಂಡದವರಿಗೆ ಪ್ರಥಮ ಬಹುಮಾನ, ನಾಟಕ ಪ್ರದರ್ಶನ ಮಾಡಿದ ಶಿಫಾ ತಂಡ ದ್ವೀತಿಯ ಬಹುಮಾನ ಮತ್ತು ಭಾಷಣ ಮಾಡಿದ ವರ್ಷ ತೃತೀಯ ಬಹುಮಾನವನ್ನು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಪ್ರೊ. ನಯನಾ ಕಶ್ಯಪ್ ಮತ್ತು ಸಹ ಪ್ರಾಧ್ಯಾಪಕರಾದ ಪೂಣಚ್ಚ ಕೆ.ಎಂ, ರಮೇಶ್ ಹೆಚ್ ಆರ್, ಅಲೋಕ್ ಬಿಜೈ ಹಾಗೂ ಉಪನ್ಯಾಸಕರಾದ ಡೀನಾ ಎಂ.ಪಿ, ಕನ್ನಿಕಾ ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.