ಸಿದ್ದಾಪುರ, ಅ. ೨೭: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿದ್ದಾಪುರದ ಪೌರ ಕಾರ್ಮಿಕರು ಕೈಗೊಂಡಿದ್ದ ಮುಷ್ಕರವನ್ನು ಆಡಳಿತ ಮಂಡಳಿಯ ಭರವಸೆಯ ಮೇರೆಗೆ ಕೈ ಬಿಡಲಾಯಿತು.

ಸಿದ್ದಾಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಬೇಕು. ಸರ್ಕಾರ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಪೌರಕಾರ್ಮಿಕರು ಸೋಮವಾರದಂದು ಕೆಲಸಗಳನ್ನು ಸ್ಥಗಿತಗೊಳಿಸಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಮ್ಮ ಕುಟುಂಬಸ್ಥರೊAದಿಗೆ ಮಳೆ ನಡುವೆ ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಹಿರಿಯ ಪೌರಕಾರ್ಮಿಕ ಮಾದೇವ ಮಾತನಾಡಿ, ಸಿದ್ದಾಪುರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸುವAತೆ ಗ್ರಾಮ ಪಂಚಾಯಿತಿಗೆ ಸರಕಾರದಿಂದ ಆದೇಶ ಬಂದಿದ್ದರೂ ಕೂಡ ಇದನ್ನು ಅನುಷ್ಠಾನಕ್ಕೆ ತರದೆ ಗ್ರಾಮ ಪಂಚಾಯಿತಿಯು ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪ್ರೇಮ ಗೋಪಾಲ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್. ಆಶಾಕುಮಾರಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಮುಖಾಂತರ ಖಾಯಂಗೊಳಿಸುವಿಕೆಯನ್ನು ಅನುಮೋದನೆಗೊಳಿಸುವುದಾಗಿ ಭರವಸೆಯನ್ನು ನೀಡಿದರು. ಆಡಳಿತ ಮಂಡಳಿಯ ಹಾಗೂ ಅಭಿವೃದ್ಧಿ ಅಧಿಕಾರಿಯ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪೌರಕಾರ್ಮಿಕರಾದ ಸುರೇಶ, ಯಶೋಧ, ಮಂಜುನಾಥ್, ಗಣೇಶ ಸೇರಿದಂತೆ ಇನ್ನಿತರರು ಹಾಜರಿದ್ದರು.