ಪೊನ್ನAಪೇಟೆ, ಅ. ೨೮: ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಟೂರಿಸ್ಟ್ ಬಸ್‌ಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಮಿತಿಮೀರಿದ ಶಬ್ದದಿಂದ ಶಬ್ದ ಮಾಲಿನ್ಯ ಆಗುತ್ತಿರುವ ಬಗ್ಗೆ ಸಾರ್ವಜನಿಕರು ವೀರಾಜಪೇಟೆ ಡಿ.ವೈ.ಎಸ್.ಪಿ ಅವರ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಕೇರಳ-ಕೊಡಗು ಗಡಿಭಾಗ ಕುಟ್ಟ ಪೊಲೀಸ್ ಠಾಣೆಯಲ್ಲಿ ೪ ಪ್ರವಾಸಿ ಬಸ್‌ಗಳ ಚಾಲಕರಿಗೆ ರೂ. ೫೦೦ ದಂಡ ವಿಧಿಸಿ, ಈ ರೀತಿ ಪುನರಾವರ್ತನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಕೇರಳ ರಾಜ್ಯದಲ್ಲಿ ಧ್ವನಿವರ್ಧಕ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಬಸ್‌ಗಳಲ್ಲಿ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಆದರೆ ಕೇರಳ ಗಡಿದಾಟಿದ ತಕ್ಷಣ ಈ ಬಸ್‌ಗಳಲ್ಲಿ ಧ್ವನಿವರ್ಧಕ ಮೊಳಗುತ್ತವೆ. ಸಂಜೆಯಾಗುತ್ತಿದ್ದAತೆ ಬಸ್ಸಿನಲ್ಲಿ ಬಣ್ಣ ಬಣ್ಣದ ದೀಪಗಳು ಹೊತ್ತಿಕೊಳ್ಳುತ್ತವೆ. ಹೆಚ್ಚಿನ ಶಬ್ದದ ಸಂಗೀತದೊAದಿಗೆ ಕೊಡಗಿನ ಮೂಲಕ ಸಂಚರಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದ ಕಾರಣ ಸಾರ್ವಜನಿಕರು ಡಿ.ವೈ.ಎಸ್.ಪಿ ಅವರಿಗೆ ದೂರು ನೀಡಿದ್ದರು.