ಗೋಣಿಕೊಪ್ಪ ವರದಿ, ಅ. ೨೮ : ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ತಾಲೂಕು ಮಟ್ಟದ ವಿಜ್ಞಾನ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪೊನ್ನAಪೇಟೆ ಸಾಯಿ ಶಂಕರ್ ಶಾಲೆಯಲ್ಲಿ ಆಯೋಜಿಸಿದ್ದ ಮೇಳದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಎಂ .ಸಿ ಕಾರ್ಯಪ್ಪ, ಕೆ. ಕೆ. ವಿಕಾಸ್ ಭಾಗವಹಿಸಿದ್ದರು. ಪ್ರೌಢ ವಿಭಾಗದಲ್ಲಿ ಬಿ.ಎ ಆದಿಲ್, ಎಂ.ಸಿ ಮೋಕ್ಷಿತ್ ಭಾಗವಹಿಸಿ ಆಧುನಿಕ ಸಾರಿಗೆ ವ್ಯವಸ್ಥೆ ಹಾಗೂ ನೈಸರ್ಗಿಕ ವಿಕೋಪಗಳು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಆಧುನಿಕ ತಂತ್ರಜ್ಞಾನ ವಿಷಯದಲ್ಲಿ ಪ್ರಯೋಗಗಳನ್ನು ಅನಾವರಣಗೊಳಿಸಿದರು. ಬಿ.ಎ ಆದಿಲ್, ಎಂ .ಸಿ ಮೋಕ್ಷಿತ್ ದ್ವಿತೀಯ ಸ್ಥಾನ ಪಡೆದ ಹಿನ್ನೆಲೆ, ಶಾಲೆಯ ಮುಖ್ಯಸ್ಥೆ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ಗೌರವಿಸಿದರು. ರೋಬೋಟಿಕ್ ಶಿಕ್ಷಕಿಯರಾದಂತಹ ಕವಿತಾ, ಇಂಪನ ಹಾಗೂ ವಿಜ್ಞಾನ ಶಿಕ್ಷಕಿ ಶರಣ್ಯ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು.