ಗೋಣಿಕೊಪ್ಪ ವರದಿ, ಅ. ೨೮ : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ಗೋಣಿಕೊಪ್ಪ ಬಿಬಿಸಿ, ಮಡಿಕೇರಿ ಚಾರ್ಮರ್ಸ್, ಕಕ್ಕಬ್ಬೆ ಮಲ್ಮ, ಮಲ್ಮ (ಬಿ), ಪನ್ನಂಗಾಲ ಪ್ಯಾಂರ್ಸ್ ತಂಡಗಳು ಗೆಲುವಿನ ಮುನ್ನಡೆ ಕಾಯ್ದುಕೊಂಡವು. ಕಿರುಗೂರು ಸ್ಪೋರ್ಟ್ಸ್ ಕ್ಲಬ್ ಹಾಗೂ ಅಂಜಿಗೇರಿ ನಾಡ್ ತಂಡಗಳ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಗೋಣಿಕೊಪ್ಪ ಬಿಬಿಸಿ ತಂಡವು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ಮಣಿಸಿತು. ಬಿಬಿಸಿ ೨, ಪೊನ್ನಂಪೇಟೆ ೧ ಗೋಲು ದಾಖಲಿಸಿತು. ಬಿಬಿಸಿ ಆಟಗಾರ ಲಿಖಿತ್ ೨, ಪೊನ್ನಂಪೇಟೆ ಆಟಗಾರ ಸಾಂಚವ್ ಒಂದು ಗೋಲು ಬಾರಿಸಿದರು.
ಮಡಿಕೇರಿ ಚಾರ್ಮರ್ಸ್ ತಂಡವು ಹಾತೂರು ವನಭದ್ರಕಾಳಿ ವಿರುದ್ದ ಜಯಿಸಿತು. ಚಾರ್ಮರ್ಸ್ ೬, ವನಭದ್ರಕಾಳಿ ೧ ಗೋಲು ದಾಖಲಿಸಿತು. ಚಾರ್ಮರ್ಸ್ ಆಟಗಾರ ನಿಶಾಲ್ ೩ ಗೋಲು ಸಿಡಿಸಿದರು. ಸುಗುಣ್, ಸೋಹನ್, ಶಂಕಪ್ಪ, ಹಾತೂರು ಪರ ಅಪ್ಪಯ್ಯ ತಲಾ ಒಂದೊAದು ಗೋಲು ಬಾರಿಸಿದರು.
ಕಕ್ಕಬ್ಬೆ ಮಲ್ಮ ತಂಡವು ವೀರಾಜಪೇಟೆ ಟವರ್ಸ್ ತಂಡದ ವಿರುದ್ಧ ಜಯಿಗಳಿಸಿತು. ಮಲ್ಮ ಆಟಗಾರ ಗೌತಮ್, ಅಬಿನ್ ಬಾರಿಸಿದ ಗೋಲು ಜಯಕ್ಕೆ ಕಾರಣವಾಯಿತು. ಟವರ್ಸ್ ಗೋಲು ದಾಖಲಿಸದೆ ಸೋಲಿಗೆ ಶರಣಾಯಿತು.
ಮಲ್ಮ (ಬಿ) ತಂಡವು ನೀಲಿಯತ್ ಕೋಕೇರಿ ವಿರುದ್ಧ ಜಯಿಸಿತು. ಮಲ್ಮ ಆಟಗಾರ ಅಯ್ಯಪ್ಪ, ಮಿಲನ್, ಅಭಿಲಾಕ್ಷಿ, ಕೋಕೇರಿ ಆಟಗಾರ ನಾಚಪ್ಪ ತಲಾ ಒಂದೊAದು ಗೋಲು ದಾಖಲೆ ಮಾಡಿದರು.
ಪನ್ನಂಗಾಲ ಪ್ಯಾಂರ್ಸ್ ತಂಡವು ಕುತ್ತ್ನಾಡ್ ಸ್ಟೆçöÊಕರ್ಸ್ ವಿರುದ್ಧ ಗೆಲುವು ದಾಖಲಿಸಿತು. ಪನ್ನಂಗಾಲ ೫, ಕುತ್ತ್ನಾಡ್ ೧ ಗೋಲು ಬಾರಿಸಿತು. ಪನ್ನಂಗಾಲ ಪರ ಸುದರ್ಶನ್, ಶಿಶಿರ್ ಸುಬ್ಬಯ್ಯ, ಸೋಮಣ್ಣ, ಸಾಂಚಿತ್, ಸುಬ್ಬಯ್ಯ, ಕುತ್ತ್ನಾಡ್ ಪರ ಜತನ್ ಒಂದೊAದು ಗೋಲು ಹೊಡೆದರು.
ಕಿರುಗೂರು ಸ್ಪೋರ್ಟ್ಸ್ ಕ್ಲಬ್ ಹಾಗೂ ಅಂಜಿಗೇರಿ ನಾಡ್ ತಂಡಗಳ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳು ಒಂದೊAದು ಗೋಲು ದಾಖಲಿಸಿದವು. ಕಿರುಗೂರು ಪರ ಕಾವೇರಪ್ಪ, ಅಂಜಿಗೇರಿ ಪರ ಸೋಮಯ್ಯ ಗೋಲು ಹೊಡೆದರು.