ಗೋಣಿಕೊಪ್ಪ ವರದಿ, ಅ. ೩೦: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಅಂಜಿಗೇರಿನಾಡ್, ಕಡಿಯತ್ನಾಡ್, ಯುಎಸ್‌ಸಿ ಬೇರಳಿನಾಡ್ ತಂಡಗಳು ಗೆಲುವು ಸಾಧಿಸಿ ಮುನ್ನಡೆ ಪಡೆದುಕೊಂಡವು. ಅಮ್ಮತ್ತಿ ವಾರಿಯರ್ಸ್ ಹಾಗೂ ಡಾಲ್ಪಿನ್ಸ್ ತಂಡಗಳು ಮತ್ತು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ಹಾಗೂ ವೀರಾಜಪೇಟೆ ಟವರ್ಸ್ ತಂಡಗಳ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ಅAಜಿಗೇರಿನಾಡ್ ತಂಡವು ಡ್ರಿಬ್ಲ್ ಹೆಂಪ್ ತಂಡವನ್ನು ಮಣಿಸಿತು. ಅಂಜಿಗೇರಿ ೬, ಹೆಂಪ್ ೧ ಗೋಲು ದಾಖಲಿಸಿತು. ಅಂಜಿಗೇರಿ ಪರ ಸಚಿನ್ ಹಾಗೂ ಕಿಶನ್ ತಲಾ ೨ ಗೋಲು, ಚಂಗಪ್ಪ, ಸೋಮಯ್ಯ, ಹೆಂಪ್ ಪರ ಸುಹಾನ್ ತಲಾ ಒಂದೊAದು ಗೋಲು ಬಾರಿಸಿದರು.

ಕಡಿಯತ್ನಾಡ್ ತಂಡವು ಕಿರುಗೂರು ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು. ಕಡಿಯತ್ನಾಡ್ ೩, ಕಿರುಗೂರು ೧ ಗೋಲು ಪೇರಿಸಿತು. ಕಡಿಯತ್ನಾಡ್ ಪರ ಕಾವೇರಪ್ಪ, ಬಿದ್ದಪ್ಪ, ಹರ್ಷಿತ್, ಕಿರಗೂರು ಪರ ಪೂವಣ್ಣ ಒಂದೊAದು ಗೋಲು ಹೊಡೆದರು.

ಯುಎಸ್‌ಸಿ ಬೇರಳಿನಾಡ್ ತಂಡವು ಪನ್ನಂಗಾಲ ಪ್ಯಾಂರ‍್ಸ್ ವಿರುದ್ಧ ಜಯಿಸಿತು. ಬೇರಳಿನಾಡ್ ೬ ಗೋಲು ದಾಖಲೆ ಮಾಡಿತು. ಬೋಪಣ್ಣ, ನಾಚಪ್ಪ ತಲಾ ೨ ಗೋಲು, ವಿಜಯ್ ಉತ್ತಯ್ಯ, ಧನುಶ್ ತಲಾ ಒಂದೊAದು ಗೋಲು ಹೊಡೆದರು.

ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು ಭಗವತಿ ಸ್ಪೋರ್ಟ್ಸ್ ವಿರುದ್ದ ವಾಕ್ ಓವರ್ ಮೂಲಕ ಜಯಿಸಿತು.

ಅಮ್ಮತ್ತಿ ವಾರಿಯರ್ಸ್ ಹಾಗೂ ಡಾಲ್ಪಿನ್ಸ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳು ೨ ಗೋಲು ದಾಖಲಿಸಿದವು. ಅಮ್ಮತ್ತಿ ಪರ ಪೂವಯ್ಯ, ಯಶ್ವಂತ್, ಡಾಲ್ಪೀನ್ಸ್ ಪರ ಅಕ್ಷಯ್, ಕಾಳಿಮುತ್ತು ಒಂದೊAದು ಗೋಲು ಹೊಡೆದರು. ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ಹಾಗೂ ವೀರಾಜಪೇಟೆ ಟವರ್ಸ್ ತಂಡಗಳ ನಡುವಿನ ಪಂದ್ಯ ಡ್ರಾ ಫಲಿತಾಂಶ ನೀಡಿತು. ಕೂಡಿಗೆ ಪರ ನಾಚಪ್ಪ, ಟವರ್ಸ್ ಪರ ಮಣಿ ಗೋಲು ಹೊಡೆದರು