ಸೋಮವಾರಪೇಟೆ, ಅ. ೩೦: ಕನ್ನಡ ಸಾಹಿತ್ಯ ಪರಿಷತ್‌ನ ಸೋಮವಾರಪೇಟೆ ಹೋಬಳಿ ಘಟಕದ ಸಭೆ ಪಟ್ಟಣದ ಸಾಹಿತ್ಯ ಭವನದಲ್ಲಿ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂದಿನ ದಿನಗಳಲ್ಲಿ ಐಗೂರು ಗ್ರಾಮದಲ್ಲಿ ಸೋಮ ವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಈ ಹಿಂದೆ ಗೌಡಳ್ಳಿಯಲ್ಲಿ ಅರ್ಥಪೂರ್ಣವಾಗಿ ತಾಲೂಕು ಸಮ್ಮೇಳನವನ್ನು ಆಚರಿಸಲಾಗಿದ್ದು, ಆ ಮಾದರಿಯಲ್ಲೇ ಐಗೂರಿನಲ್ಲೂ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಅಧ್ಯಕ್ಷರು ಹೇಳಿದರು.

ಸಭೆಯಲ್ಲಿ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ಶಾಂತಳ್ಳಿ ಘಟಕದ ಅಧ್ಯಕ್ಷ ಸಿ.ಎಸ್. ನಾಗರಾಜ್ ಮಾತನಾಡಿದರು. ತಾಲೂಕು ಸಮಿತಿ ಸದಸ್ಯ ಎಂ.ಪಿ. ಧರ್ಮಪ್ಪ, ಹೋಬಳಿ ಘಟಕದ ಕಾರ್ಯದರ್ಶಿ ವಿಶ್ವರಾಜೇ ಅರಸ್, ಕೋಶಾಧಿಕಾರಿ ಎಸ್.ಎಂ. ಬೆಳ್ಯಪ್ಪ, ಪದಾಧಿಕಾರಿಗಳಾದ ಮಚ್ಚಂಡ ಅಶೋಕ್, ತಿಮ್ಮಯ್ಯ ಇದ್ದರು.