ಮುಂಬೈ, ಅ. ೩೦: ಭಾರತ ವನಿತೆಯರ ಕ್ರಿಕೆಟ್ ತಂಡವು ೫೦ ಓವರ್ಗಳ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ೩ನೇ ಬಾರಿ ಫೈನಲ್ ಪ್ರವೇಶಿಸಿದೆ. ಇಂದು ಮುಂಬೈನಲ್ಲಿ ನಡೆದ ಸೆಮಿಫೈನಲ್ನ ರೋಚಕ ಪಂದ್ಯದಲ್ಲಿ ಬಲಿಷ್ಠ ತಂಡ ಹಾಗೂ ಡಿಫೆಂಡಿAಗ್ ಚಾಂಪಿಯನ್ ಆಸ್ಟೆçÃಲಿಯಾವನ್ನು ಮಣಿಸಿ ಅಂತಿಮ ಪಂದ್ಯಕ್ಕೆ ಪದಾರ್ಪಣೆ ಮಾಡಿದೆ. ಮೊದಲು ಬ್ಯಾಟ್ ಮಾಡಿದ ಆಸಿಸ್ ತಂಡ ಬರೋಬ್ಬರಿ ೩೩೮ ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಭಾರತವು ೫ ವಿಕೆಟ್ಗಳ ನಷ್ಟಕ್ಕೆ ೪೯ ಓವರ್ಗಳಲ್ಲಿ ಸಾಧಿಸಿತು. ತಂಡದ ಪರ ಜೆಮೀಮ ರಾಡ್ರಿಗಸ್ ಅಜೇಯ ೧೨೭ ರನ್ ಗಳಿಸಿದರು. ನ.೨ ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಈ ಹಿಂದೆ ೨೦೦೫ ಹಾಗೂ ೨೦೧೭ರಲ್ಲಿ ಅಂತಿಮ ಪಂದ್ಯದಲ್ಲಿ ಪರಾಭವಗೊಂಡಿದ್ದ ಭಾರತ ಈ ಬಾರಿ ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆ ಹೊಂದಿದೆ.