ಮಡಿಕೇರಿ, ಅ. ೩೦ : ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿ ಪ್ರಸ್ತುತದ ವರ್ಷಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ ಪಂದ್ಯಾವಳಿಯಾಗಿ ಮನೆ ಮಾತಾಗಿದೆ. ಅದರಲ್ಲೂ ಪ್ರಿ-ಕ್ರಾರ್ಟರ್, ಕ್ವಾರ್ಟರ್ ಫೈನಲ್ ಹಂತದ ಪಂದ್ಯಗಳೆAದರೆ ಅದೊಂದು ಭಾರೀ ರೋಚಕತೆಯ ಘಟ್ಟವಾಗಿ ಅಧಿಕ ಹಾಕಿ ಅಭಿಮಾನಿಗಳನ್ನು ಸೆಳೆÀಯುತ್ತದೆ.
ಪ್ರಿಕ್ವಾರ್ಟರ್, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಅತ್ಯಂತ ಜಿದ್ದಾಜಿದ್ದಿನ ಪಂದ್ಯಗಳಾಗಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವುದು ಈ ಪ್ರತಿಷ್ಠಿತ ಹಾಕಿ ಪಂದ್ಯಾವಳಿಗೆ ಸಾಕ್ಷಿಯಾಗಿದೆ. ಕೌಟುಂಬಿಕ ಹಾಕಿ ಉತ್ಸವ ಆರಂಭಗೊAಡ ವರ್ಷವಾದ ೧೯೯೭ ರಿಂದ ಈ ತನಕ ೨೫ ಹಾಕಿ ಉತ್ಸವಗಳು ಜರುಗಿವೆ. ೨೦೧೯ ರಿಂದ ೨೨ರ ತನಕ ಪ್ರಾಕೃತಿಕ ವಿಕೋಪ - ಕೋವಿಡ್ ಕಾರಣದಿಂದ ನಾಲ್ಕು ವರ್ಷ ಪಂದ್ಯಾವಳಿ ನಡೆದಿರಲಿಲ್ಲ. ಇದರಿಂದ ಕೌಟುಂಬಿಕ ಹಾಕಿ ಉತ್ಸವ ಆರಂಭಗೊAಡಲ್ಲಿAದ ಕಳೆದ ೨೯ ವರ್ಷಗಳಲ್ಲಿ ಒಟ್ಟು ೨೫ ವರ್ಷಗಳು ಪಂದ್ಯಾವಳಿ ನಡೆದಿವೆ. ಈ ೨೫ ಪಂದ್ಯಾವಳಿಯಲ್ಲಿ ಬಲಿಷ್ಟ ತಂಡಗಳಿAದು ಹೆಸರು ಮಾಡಿರುವ ೮ ಕುಟುಂಬ ತಂಡಗಳು ವಿಜೇತರಾಗಿದ್ದರೆ ೫ ಕುಟುಂಬ ತಂಡಗಳು ರನ್ನರ್ಸ್ ಆಗಿ ಹೊರಹೊಮ್ಮಿರುವ ಈ ತನಕದ ಐತಿಹ್ಯ ಇದೀಗ ಕೊಡವ ಹಾಕಿ ಅಕಾಡೆಮಿಯು ಈ ತನಕದ ವಿನ್ನರ್ಸ್ - ರನ್ನರ್ಸ್ ಸೇರಿದಂತೆ ಪ್ರಶಸ್ತಿ ಸುತ್ತು ತಲುಪಿದ್ದ ಒಟ್ಟು ೧೪ ಕುಟುಂಬ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಹೆಸರಿನಲ್ಲಿ ರೋಚಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲು ಮುಂದಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಎಲ್ಲಾ ೧೪ ತಂಡಗಳ ಭಾಗವಹಿಸುವಿಕೆಯೂ ಖಚಿತವಾಗಿದೆ.
ಡಿ. ೨೬ ರಿಂದ ಮೂರ್ನಾಡಿನಲ್ಲಿ
ಮುಂದಿನ ಡಿಸೆಂಬರ್ ೨೬ ರಿಂದ ೩೦ರ ತನಕ ಐದು ದಿನಗಳ ಕಾಲ ಮೂರ್ನಾಡಿನಲ್ಲಿ ಬಲಂಬೇರಿ ರಸ್ತೆಯಲ್ಲಿರುವ ಮೂರ್ನಾಡು ವಿದ್ಯಾಸಂಸ್ಥೆಯ ಚಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಈ ಚಾಂಪಿಯನ್ ಟ್ರೋಫಿ ಜರುಗಲಿದೆ. ಮೂರ್ನಾಡು ಬಾಡಗ ಸ್ಪೋರ್ಟ್ಸ್ ಕ್ಲಬ್‌ನ ಸಹಕಾರದೊಂದಿಗೆ ಈ ರೋಚಕ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ ಇದೇ ಮೊದಲ ಬಾರಿಗೆ ಈ ಪ್ರಯತ್ನಕ್ಕೆ ಮುಂದಾಗಿದೆ.
ಆರAಭಿಕ ಹಂತದ ಪಂದ್ಯಗಳು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಸೆಮಿಫೈನಲ್ ಹಂತದಿAದ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಸಲು ಉದ್ದೇಶಿಸಲಾಗಿದೆ. ೧೪ ತಂಡಗಳನ್ನು ನಾಲ್ಕು ಪೂಲ್‌ಗಳಾಗಿ ವಿಂಗಡಿಸಲಾಗುವುದು. ನಾಲ್ಕು ಪೂಲ್‌ನಿಂದ ತಲಾ ಒಂದೊAದು ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಈಗಾಗಲೇ ಇದರ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು ಹಾಕಿ ಅಕಾಡೆಮಿ ಪದಾಧಿಕಾರಿಗಳು ಹಾಗೂ ಮೂರ್ನಾಡು ಬಾಡಗ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ಈ ಪಂದ್ಯಾವಳಿಯ ಉಸ್ತುವಾರಿಗಳಾಗಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಪಂದ್ಯಾವಳಿಯ ಉಸ್ತುವಾರಿ ಸಿ.ಎಸ್. ಪೂಣಚ್ಚ ಮುಂದಾಳತ್ವದಲ್ಲಿ ಈ ಪಂದ್ಯಾವಳಿಯ ರೂಪುರೇಷೆ ನಡೆದಿದೆ. ಇವರುಗಳು ಸೇರಿದಂತೆ ಹಾಕಿ ಅಕಾಡೆಮಿಯ ಇತರ ಕೆಲವು ಪದಾಧಿಕಾರಿಗಳು ಇತ್ತೀಚೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ್ದಾರೆ. ಪಂದ್ಯಾವಳಿಗಾಗಿ ಮೈದಾನದಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ೨೦೨೬ರಲ್ಲಿ ನಾಪೋಕ್ಲುವಿನಲ್ಲಿ ಚೇನಂಡ ಕಪ್ ಹಾಕಿ ನಡೆಯಲಿದ್ದು, ಇದಕ್ಕೆ ಮುಂಚಿತವಾಗಿ ಈ ಪಂದ್ಯಾವಳಿ ನಡೆಯುತ್ತಿರುವುದು ಈ ಕುಟುಂಬಗಳಿಗೆ ೪ನಾಲ್ಕನೇ ಪುಟಕ್ಕೆ ಮತ್ತೊಂದು ಅವಕಾಶವೂ ಆಗಿದೆ. ಹಾಕಿ ಉತ್ಸವ ಆರಂಭದ ಬಳಿಕ ೧೦ ವರ್ಷದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸಲು ಹಾಕಿ ಉತ್ಸವದ ಜನಕ ಪಾಂಡAಡ ಎಂ. ಕುಟ್ಟಪ್ಪ ಅವರು ಚಿಂತನೆ ಹರಿಸಿದ್ದರು. ೧೫, ೨೦ ವರ್ಷದಲ್ಲೂ ಇದು ಕಾರಣಾಂತರದಿAದ ಈಡೇರಿರಲಿಲ್ಲ. ಇದೀಗ ಈ ಕನಸ್ಸು ಸಾಕಾರಗೊಳ್ಳುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಹೇಳಿದ್ದಾರೆ.