ಮಡಿಕೇರಿ, ಅ. ೩೦: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರಕಾರದಿಂದ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಮೂಲದ ಈರ್ವರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಜಿಂದಾಲ್ ನೇಚರ್ ಕ್ಯೂರ್ ಇನ್ಸಿ÷್ಟಟ್ಯೂಟ್ ಮುಖ್ಯವೈದ್ಯಾಧಿಕಾರಿ, ಬೊಳ್ಳರಿಮಾಡು ನಿವಾಸಿ ಡಾ. ಪುಟ್ಟಿಚಂಡ ಬಬಿನಾ ನಂದಾ ಹಾಗೂ ಕನ್ನಡ ಚಲನಚಿತ್ರ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿರುವ, ಸೋಮವಾರಪೇಟೆ ಮೂಲದ ಹಿರಿಯ ನಟ ಜೈ ಜಗದೀಶ್ ಅವರ ಪತ್ನಿ ವಿಜಯಲಕ್ಷಿö್ಮ ಸಿಂಗ್ ಅವರು ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಡಾ. ಬಬಿನಾ ಅವರು ನೆಲ್ಲಮಕ್ಕಡ ಮುತ್ತಪ್ಪ ಹಾಗೂ ಸರೋಜ ದಂಪತಿ ಪುತ್ರಿ. ಪುಟ್ಟಿಚಂಡ ನಂದ ಅವರ ಪತ್ನಿ.