ವೀರಾಜಪೇಟೆ, ಅ. ೩೦ : ಮಾಕುಟ್ಟ ಬ್ರಹ್ಮಗಿರಿ ವನ್ಯಜೀವಿ ವಲಯ ಅರಣ್ಯಕ್ಕೆ ತ್ಯಾಜ್ಯ ನೀರು ಬಿಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಹೊಟೇಲ್ ಮಾಲೀಕರಿಗೆ ೨೫,೦೦೦ ರೂಪಾಯಿ ದಂಡವನ್ನು ಆರ್ಜಿ ಗ್ರಾಮ ಪಂಚಾಯಿತಿ ವಿಧಿಸಿದೆ.
ಅರಣ್ಯ ಪ್ರದೇಶಗಳಿಗೆ ತ್ಯಾಜ್ಯ ವಸ್ತುಗಳು, ಕಸ, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಇತರ ವಿಷಪೂರಿತ ವಸ್ತುಗಳನ್ನು ಹಾಕಬಾರದು ಇದರಿಂದ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲ ನಶಿಸಿ ಹೋಗುತ್ತದೆ ಎಂದು ಅನೇಕ ಬಾರಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ತ್ಯಾಜ್ಯಗಳನ್ನು ಎಸೆಯುವುದು ಮತ್ತು ತ್ಯಾಜ್ಯ ನೀರನ್ನು ಅರಣ್ಯದೊಳಕ್ಕೆ ಬಿಡುವುದು ಮುಂದುವರೆಯುತ್ತಲೇ ಇತ್ತು. ಗಡಿಭಾಗವಾದ ಮಾಕುಟ್ಟದಲ್ಲಿ ಕೇರಳದಿಂದ ತ್ಯಾಜ್ಯಗಳನ್ನು ತಂದು ಹಾಕುವುದು ಹಾಗೂ ೪ನಾಲ್ಕನೇ ಪುಟಕ್ಕೆ ಪ್ರವಾಸಿಗರು ಎಲ್ಲೆಂದರಲ್ಲಿ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು, ಅರಣ್ಯದೊಳಕ್ಕೆ ಬೇರೆ ಕಡೆಗಳಿಂದ ತ್ಯಾಜ್ಯಗಳನ್ನು ತಂದು ಹಾಕುವುದು ನಡೆಯುತ್ತಿತ್ತು. ಈ ಸಂಬAಧ ಗ್ರಾಮ ಪಂಚಾಯಿತಿಯಿAದ ಹಲವು ಬಾರಿ ಮನವಿ ಮಾಡಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಈ ನಡುವೆ ಸ್ಥಳೀಯ ಪೆಪ್ಪರ್ ಪ್ಯಾಲೆಸ್ ಹೊಟೇಲ್ನಿಂದ ತ್ಯಾಜ್ಯ ಹರಿಯಬಿಡುವುದನ್ನು ಪತ್ತೆಹಚ್ಚಿದ ಆರ್ಜಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೊಟೇಲ್ ಮಾಲೀಕರಿಗೆ ಎಚ್ಚರಿಕೆ ಸಂದೇಶ ನೀಡಿ ದಂಡ ವಿಧಿಸಿದರು.