ಮಡಿಕೇರಿ, ಅ. ೩೦: ರಾಷ್ಟçಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕೊಡಗಿನ ಯುವತಿ ಬೊಪ್ಪಂಡ ದಿಯಾ ಭೀಮಯ್ಯ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಅಕ್ಟೋಬರ್ ೨೨ ರಿಂದ ೨೯ ರವರೆಗೆ ಮಧುರೈನಲ್ಲಿ ನಡೆದ ರಾಷ್ಟçಮಟ್ಟದ ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕರ್ನಾಟಕದ ಶ್ರೇಯಾಂಕಿತ ಆಟಗಾರ್ತಿಯಾದ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಬಾಲಕಿಯರ ಡಬಲ್ಸ್ನಲ್ಲಿ ಹರಿಯಾಣದ ಬಾರುಣಿ ಪರಸ್ವಲ್ ಅವರೊಂದಿಗೆ ಆಡಿ ಕಂಚಿನ ಪದಕವನ್ನು ಪಡೆದಿದ್ದಾರೆ. ಇದೀಗ ದಿಯಾ ಭೀಮಯ್ಯ ಡಬಲ್ಸ್ನಲ್ಲಿ ರಾಷ್ಟ್ರದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.