ಚೆಯ್ಯಂಡಾಣೆ, ಅ. ೩೦: ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾಮದ ಎಡಪಾಲಕೇರಿ ಎಂಬಲ್ಲಿ ಸರಿ ಸುಮಾರು ೪೫೦ ವರ್ಷಗಳ ಇತಿಹಾಸವಿರುವ ವಯನಾಟ್ ಕುಲವನ್ (ಬೈನಾಡ್ ಅಜ್ಜಪ್ಪ) ಎಂಬ ದೇವಾಲಯವಿದೆ. ಇಲ್ಲಿ ಮುತ್ತಪ್ಪ ದೇವಾಲಯ, ನಾಗನ ಕಟ್ಟೆ ಹಾಗೂ ಗುಳಿಗನ ಕಟ್ಟೆ ಇದ್ದು, ೪೫೦ ವರ್ಷ ಗಳಿಂದ ಈ ದೇವಸ್ಥಾನದಲ್ಲಿ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವದಲ್ಲಿ ಈ ವ್ಯಾಪ್ತಿಯ ಗ್ರಾಮಗಳಾದ ಚೆಯ್ಯಂಡಾಣೆ, ಕೋಕೇರಿ, ಚೇಲಾವರ, ಬಾವಲಿ, ಪಾರಾಣೆ, ಕಿರುಂದಾಡು, ಕರಡ, ಅರಪಟ್ಟು, ಪೊದವಾಡ, ಪಾಲಂಗಾಲ, ಮರಂದೋಡ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ.

ಈ ದೇವಸ್ಥಾನದಲ್ಲಿ ಪ್ರತಿ ತಿಂಗಳು ಮುತ್ತಪ್ಪ ದೇವರ ಪೈಂಗುತ್ತಿ ನಡೆಯುತ್ತದೆ. ವಾರ್ಷಿಕವಾಗಿ ಏಪ್ರಿಲ್ ತಿಂಗಳಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿತ್ತು. ಆದರೆ ಆರ್ಥಿಕ ತೊಂದರೆಯಿAದ ಕಳೆದ ಕೆಲವು ವರ್ಷಗಳಿಂದ ಉತ್ಸವ ಸರಿಯಾಗಿ ನಡೆಯುತ್ತಿಲ್ಲ. ಈ ನಡುವೆ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ತಿಯಾದಲ್ಲಿ ಉತ್ಸವಗಳನ್ನು ವಿಜೃಂಭಣೆಯಿAದ ಆಚರಿಸಬಹುದು. ಈ ದೇವಸ್ಥಾನಕ್ಕೆ ನರಿಯಂದಡ ಗ್ರಾಮದ ಸುತ್ತಮುತ್ತಲಿನ ಕುಟುಂಬಸ್ಥರು ಸಹಾಯ, ಸಹಕಾರ ನೀಡಿದ್ದು, ಈಗಾಗಲೇ ರೂ. ೪೦ ಲಕ್ಷದ ಕಾಮಗಾರಿ ನಡೆದಿದೆ. ಆದರೂ ಹಣದ ಕೊರತೆಯಿಂದ ಉಳಿದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಳೆದ ೨೦೧೪ ರಿಂದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ೧೧ ವರ್ಷಗಳಾದರೂ ಕೂಡ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಕೂಡ ಅಂದಾಜು ೩೦ ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ಇರುವುದರಿಂದ ಸಾರ್ವಜನಿಕರು, ಭಕ್ತಾದಿಗಳು ದೇವಸ್ಥಾನ ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡಿ ಸಹಕರಿಸುವಂತೆ ದೇವಾಲಯ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.

ದೇವಸ್ಥಾನದ ಇತಿಹಾಸ

ಶಕ್ತಿ ಸ್ವರೂಪನಾದ ಶ್ರೀ ಪರಶಿವನ ಅಂಶಾವತಾರವಾದ ಆದಿ ದಿವ್ಯನಾದ ಶ್ರೀ ವಯನಾಟ್ ಕುಲವನ್ ಭೂಮಿಯಲ್ಲಿ ಅವತರಿಸಿ ವಯನಾಡಿನಲ್ಲಿ ನೆಲೆಸಿ ವಯನಾಡಿನ ರಕ್ಷಕನಾಗಿದ್ದ, ಶಿವಾಂಶ ಭೂತ ಕೃಪಾನುಸಾರ ಮಲೆನಾಡಿಗೆ ಯಾತ್ರೆ ಕೈಗೊಂಡು ಉತ್ತರ ಕೇರಳದ ನಾದಾಪುರಂ, ವಳಪಟ್ಟಣಂ, ಮಾದಮಂಗಲA, ಮಂಡಿಯನ್ ಕುಲಂ, ಕೊಟ್ಟಚ್ಚೇರಿ, ಕುಂಡAಕುಯಿ, ಕೊಟ್ಟಪ್ಪಾರ ಎಂಬ ಪ್ರದೇಶಗಳಲ್ಲಿ ಸಂಚರಿಸಿ, ನಂತರ ತಮಿಳುನಾಡಿಗೆ ಪ್ರವೇಶಿಸಿದ ವಯನಾಟ್ ಕುಲವನ್ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ನೆಲೆನಿಂತ ಐತಿಹ್ಯಗಳಿವೆ.

ಮನುಷ್ಯ ಮತ್ತು ದೈವಗಳಿಗೆ ಪರಸ್ಪರ ಅಬೇಧ್ಯ ಸಂಬAಧವಿದ್ದ ಆ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ನೆಲೆಸಿ ಸಂತುಷ್ಟಗೊಳ್ಳುವ ಶ್ರೀ ಕುಲವನ್ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುತ್ತಿದ್ದ. ಹೀಗೆ ಸುಮಾರು ನಾಲ್ಕು ಶತಮಾನಗಳ ಹಿಂದೆ ಚೆಯ್ಯಂಡಾಣೆ ಸಮೀಪ ನರಿಯಂದಡ ಗ್ರಾಮದ ಎಡಪಾಲಕೇರಿಯಲ್ಲಿ ದಂಪತಿ ಶ್ರೀ ಕುಲವನ್‌ನನ್ನು ಪ್ರತಿಷ್ಠಾಪಿಸಿ ವಾಸ್ತವ್ಯ ಮಾಡಿದ್ದ ಐತಿಹ್ಯಗಳು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬAದಿದ್ದು, ಈ ದೇವಾಲಯದಲ್ಲಿ ಶ್ರೀ ವಯನಾಟ್ ಕುಲವನ್ ದೈವವಲ್ಲದೆ ಸಪರಿವಾರ ದೈವಗಳಾದ ಶ್ರೀ ವಿಷ್ಣುಮೂರ್ತಿ, ಶ್ರೀ ಕಂಡನಾರ್ ಕೇಳನ್, ಶ್ರೀ ಕೊರಚ್ಚನ್, ಶ್ರೀ ಕಾರ್ನವರ್ ಹಾಗೂ ಮುತ್ತಪ್ಪ ಮತ್ತು ಉಪದೈವಗಳಾದ ಕೊರತಿಯಮ್ಮ ವರ್ಣದ ಪಂಜುರ್ಲಿ, ಪಾಷಾಣ ಮೂರ್ತಿ, ಗುಳಿಗ ಹಾಗೂ ನಾಗ ಸಾನಿಧ್ಯಗಳಿವೆ. ಈ ಸಾನಿಧ್ಯಗಳೆಲ್ಲವೂ ಶಿಥಿಲಗೊಂಡಿದ್ದು, ಇವುಗಳ ಜೀರ್ಣೋದ್ಧಾರ ಪೂರ್ಣ ಗೊಂಡಲ್ಲಿ ಇಲ್ಲಿನ ವಾಸಿಗಳಿಗೆ ಸುಭಿಕ್ಷೆ ಲಭಿಸುವುದೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಧನಸಹಾಯದ ಅಗತ್ಯವಿದೆ.

ವಯನಾಟ್ ಕುಲವನ್ (ಬೈನಾಡ್ ಅಜ್ಜಪ್ಪ ದೇವಸ್ಥಾನ) ಸುಮಾರು ೪೫೦ ವರ್ಷಗಳ ಇತಿಹಾಸವಿರುವ ದೇವಸ್ಥಾನವಾಗಿದ್ದು, ೨೦೧೪ ರಿಂದ ಇದರ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದೆ. ದಾನಿಗಳು ಮುಂದೆ ಬಂದು ಜೀರ್ಣೋದ್ಧಾರಕ್ಕೆ ಸಹಕರಿಸಬೇಕು ಎಂದು ದೇವಾಲಯದ ಕೋಶಾಧಿಕಾರಿ ಕೆ.ಡಿ. ಮುರಳಿಧರ್ ಮನವಿ ಮಾಡಿದ್ದಾರೆ. \ದೇವಸ್ಥಾನವು ಅಧ್ಯಕ್ಷರಾದ ಜಯಪ್ಪ ಕೊಟ್ಟಚ್ಚಿರ ನೇತೃತ್ವದ ಆಡಳಿತ ಮಂಡಳಿಯ ಉಸ್ತುವಾರಿಯಲ್ಲಿ ಮುಂದುವರಿಯುತ್ತಿದೆ. ಧನ ಸಹಾಯ ಮಾಡುವವರು ಬ್ಯಾಂಕ್ ಖಾತೆ : ೧೩೨೨೫೦೦೧೦೦೬೩೭೩೦೧

IಈSಅ: ಏಂಖಃ೦೦೦೦೧೩೨

ಏಚಿಡಿಟಿಚಿಣಚಿಞಚಿ ಃಚಿಟಿಞ

ಉoogಟe ಠಿಚಿಥಿ / Phoಟಿeಠಿಚಿಥಿ: ೯೪೮೧೬೦೧೭೨೦ (ಮುರಳೀಧರ್), ೯೪೮೦೩೦೯೩೮೭ (ದಿನೇಶ್ ಕುಮಾರ್) ಮೂಲಕ ಮಾಡಬಹುದಾಗಿದೆ.

- ಅಶ್ರಫ್