ಕಣಿವೆ, ನ. ೬: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಇರುವ ೨.೫೪ ಎಕರೆ ವಿಸ್ತೀರ್ಣವುಳ್ಳ ಕುಳುವಾಡಿಕಟ್ಟೆ ಕೆರೆಯ ಒತ್ತುವರಿ ತೆರವು ಮಾಡಿ ಕುಶಾಲನಗರದ ತಹಶೀಲ್ದಾರ್ ಕಿರಣ್ ಗೌರಯ್ಯ ಕೆರೆಯ ಹದ್ದುಬಸ್ತು ಗುರುತಿಸಿ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದರು.
ಗ್ರಾ.ಪಂ. ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ, ಸದಸ್ಯರಾದ ಶಿವಪ್ಪ, ಗಂಗಮ್ಮ, ಲಕ್ಷö್ಮಣ್, ರಮೇಶ್, ಕುಶಾಲನಗರ ಹೋಬಳಿ ಕಂದಾಯಾಧಿಕಾರಿ ಸಂತೋಷ್ ಹಾಗೂ ಕಂದಾಯ ಮತ್ತು ಸರ್ವೆ ಇಲಾಖಾ ಅಧಿಕಾರಿಗಳು ಇದ್ದರು.