ಇದು ಭಾರತೀಯ ಯುವ ಮನಸುಗಳ ಶಿಸ್ತು, ಸೇವೆ ಮತ್ತು ನಿಸ್ವಾರ್ಥ ಪ್ರೇಮದ ಪರಂಪರೆಯನ್ನು ನೆನಪಿಸುವ ದಿನ. ಈ ದಿನವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನವಾಗಿ ಆಚರಿಸಲಾಗುತ್ತದೆ. ೧೯೫೦ ನವೆಂಬರ್ ೭ ರಂದು ಭಾರತದಲ್ಲಿದ್ದ ವಿಭಿನ್ನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಗಳು ಒಗ್ಗೂಡಿ "ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್" ಎಂಬ ರಾಷ್ಟಿçÃಯ ಸಂಸ್ಥೆಯನ್ನು ಸ್ಥಾಪಿಸಿದವು. ಈ ಐಕ್ಯತೆಯು ದೇಶದ ಯುವಜನತೆಗೆ ಹೊಸ ದಾರಿಯನ್ನು ತೋರಿಸಿತು. "ಸೇವೆಯೇ ಧರ್ಮ, ಶಿಸ್ತೇ ಬದುಕಿನ ಶಕ್ತಿ". ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ತನ್ನ ಬೇರುಗಳನ್ನು ಸರ್ ರಾಬರ್ಟ್ ಬೇಡೆನ್ ಪಾವೆಲ್ ಅವರ ಆದರ್ಶಗಳಿಂದ ಪಡೆದಿದೆ. ಅವರ ದೃಷ್ಟಿಯು ಸ್ಪಷ್ಟವಾಗಿತ್ತು. ಪ್ರತಿಯೊಬ್ಬ ಯುವಕರೂ ಶಿಸ್ತು, ಧೈರ್ಯ, ಕೌಶಲ್ಯ ಮತ್ತು ಕರ್ತವ್ಯ ಪಾಲನೆಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಚಳವಳಿ ಭಾರತದಲ್ಲಿ ಗ್ರಾಮದಿಂದ ನಗರದವರಿಗೆ, ಶಾಲೆಯಿಂದ ಕಾಲೇಜುವರೆಗೆ ಬಹು ಬೇಗನೆ ಬೆಳೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಯುವಕರಲ್ಲಿ ಸೇವಾ ಮನೋಭಾವದ ನಂಟು ಬಲಪಡಿಸಿತು.
"ಃe Pಡಿeಠಿಚಿಡಿeಜ -ಸದಾ ಸಿದ್ಧನಾಗಿರು" ಎಂಬ ಸ್ಕೌಟ್ಸ್ ಮತ್ತು ಗೈಡ್ಸ್ನ ಮೂಲ ದ್ಯೇಯ್ಯವೂ ಇಂದಿಗೂ ಲಕ್ಷಾಂತರ ಮಕ್ಕಳ, ಯುವಕ ಯುವತಿಯರ, ಶಿಕ್ಷಕರ, ಹಿರಿಯರ ಹೃದಯದಲ್ಲಿ ಮೊಳಗುತಿದೆ. ಈ ಚಳವಳಿ ಕೇವಲ ಶಿಕ್ಷಣದ ಭಾಗವಲ್ಲ; ಅದು ಬದುಕಿನ ಪಾಠವೂ ಹೌದು, ಶಿಸ್ತು, ನಿಸ್ವಾರ್ಥ ಸೇವೆ, ನಾಯಕತ್ವದ ಪಾಠ. ಇದು ಕೇವಲ ಮಾತಲ್ಲ; ಅದು ಜೀವನದ ಮಾರ್ಗದರ್ಶನ. ಯಾವುದೇ ಪರಿಸ್ಥಿತಿಯಲ್ಲಿ ದೈಹಿಕವಾಗಿ,, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಅಧ್ಯಾತ್ಮಿಕವಾಗಿ "ಸೇವೆಗೆ" ಸಿದ್ಧರಾಗಿರುವದೇ ಇವರ ವೈಶಿಷ್ಟö್ಯ. ರಾಷ್ಟçದ ಪ್ರಕೃತಿ ವಿಕೋಪಗಳಲ್ಲಿ, ಜಾತ್ರೆ, ಉತ್ಸವ, ಗ್ರಾಮ ಸ್ವಚ್ಛತಾ ಅಭಿಯಾನ, ಸಾಮಾಜಿಕ ಕಾರ್ಯಗಳಲ್ಲಿ, ರಾಷ್ಟçದ ಅಗತ್ಯ ಕ್ಷಣವಾಗಲಿ, ಎಲ್ಲೆಡೆ ಯೂನಿಫಾರ್ಮ್ ಧರಿಸಿದ ಮಕ್ಕಳು, ಹಿರಿಯರು ಕಾಣಬಹುದು. ಹಿರಿಯರು, ಮಕ್ಕಳೆಂಬ ಭೇದವಿಲ್ಲದೆ ಮೊದಲ ಸಾಲಿನಲ್ಲಿ ನಿಂತು ಸೇವೆ ಸಲ್ಲಿಸುತ್ತಾರೆ. ಇವರ ಸೇವೆ ನಿರೀಕ್ಷೆಯಿಲ್ಲದುದು. ಇವರ ಕಾರ್ಯ ನಿಸ್ವಾರ್ಥವಾದುದು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇವಲ ಒಂದು ಸಂಸ್ಥೆಯಲ್ಲ ; ಇದು ಒಂದು ಚಳುವಳಿ - ಮೌಲ್ಯಗಳ, ಶಿಸ್ತಿನ ಮತ್ತು ಮಾನವೀಯತೆಯ ಚಳುವಳಿ. ಇದು ಯುವ ಪೀಳಿಗೆಗೆ ನಿಜವಾದ ನಾಯಕತ್ವವನ್ನು ಕಲಿಸುತ್ತದೆ. ಇಂದಿನ ತ್ವರಿತಗತಿಯ ಜೀವನದಲ್ಲಿ, ಸ್ವಾರ್ಥದ ನೆರಳಿನಲ್ಲಿ, ಮಾನವೀಯತೆ ಮಸುಕಾಗುತ್ತಿರುವಾಗ, ಸ್ಕೌಟ್ಸ್ ಮತ್ತು ಗೈಡ್ಸ್ನ ಆದರ್ಶಗಳು ಬೆಳಕಿನಂತೆ ನಮ್ಮ ಮುಂದೆ ನಿಂತಿವೆ. ನವೆಂಬರ್ ೭ ರಂದು ದೇಶದಾದ್ಯಂತ ಸ್ಕೌಟ್ಸ್ ಮತ್ತು ಗೈಡ್ ಸದಸ್ಯರು ನಮ್ಮ ಪ್ರತಿಜ್ಞೆಯನ್ನು ಮತ್ತೊಮ್ಮೆ ಪುನರ್ ನವೀಕರಣ ಮಾಡುತ್ತಾರೆ. "ನಾನು ನನ್ನ ಕೈಲಾದ ಮಟ್ಟಿಗೆ, ದೇವರಿಗೂ ಮತ್ತು ದೇಶಕ್ಕೂ ಕರ್ತವ್ಯವನ್ನು ಸಲ್ಲಿಸುತ್ತೇನೆ. ಇತರರಿಗೆ ಸಹಾಯ ಮಾಡುತ್ತೇನೆ ಮತ್ತು ಸ್ಕೌಟ್ಸ್-ಗೈಡ್ಸ್ ನಿಯಮವನ್ನು ಪಾಲಿಸುತ್ತೇನೆ" ಎಂದು. ಸ್ಕೌಟ್-ಗೈಡ್ಸ್ ಘಟಕಗಳಲ್ಲಿ ಧ್ವಜಾರೋಹಣ, ಪ್ರಾರ್ಥನೆ, ಸೇವಾ ಕಾರ್ಯಗಳು ನಡೆಯುತ್ತದೆ. ಇದು ಕೇವಲ ಆಚರಣೆ ಅಲ್ಲ; ಜೀವನದಲ್ಲಿ ಸೇವೆಯ ಮೌಲ್ಯವನ್ನು ಪುನರ್ಜೀವನಗೊಳಿಸುವ ಅವಕಾಶ. ಇಂದಿನ ಪೀಳಿಗೆ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬೆಳೆಯುತ್ತಿದೆ. ತಂತ್ರಜ್ಞಾನ, ಸ್ಪರ್ಧೆ ಮತ್ತು ಆತುರದ ಬದುಕಿನಲ್ಲಿ ಮೌಲ್ಯಗಳು ಹಿಂದೆ ಸರಿಯುತ್ತಿರುವಾಗ, ಸ್ಕೌಟ್ಸ್ ಮತ್ತು ಗೈಡ್ಸ್ ಯುವಕರಲ್ಲಿ ಮಾನವೀಯತೆಯ ಬಿತ್ತನೆ ಮಾಡುತ್ತಿದೆ. ಮಕ್ಕಳಲ್ಲಿ ನಾಯಕತ್ವ, ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುತ್ತದೆ. ಈ ದಿನವು ಕೇವಲ ಸ್ಮರಣೆಗಾಗಿ ಅಲ್ಲ, ಅದು ಒಂದು ಪ್ರೇರಣೆಯ ದಿನ.
ಪ್ರತಿಯೊಬ್ಬ ಸ್ಕೌಟ್-ಗೈಡ್ಸ್ ತಮ್ಮೊಳಗಿನ "ಸ್ಕೌಟ್ ಮನಸ್ಸ"ನ್ನು ಅರಿತುಕೊಳ್ಳುವ ದಿನ. ಪ್ರತಿಯೊಬ್ಬ ಸ್ಕೌಟ್-ಗೈಡ್ಸ್ ತಮ್ಮ ಸಮುದಾಯಕ್ಕೆ, ತಮ್ಮ ರಾಷ್ಟçಕ್ಕೆ ಕೊಡುಗೆ ನೀಡಲು ಸಿದ್ಧರಾಗುವ ದಿನ. ನಾವು ಈ ದಿನವನ್ನು ಕೇವಲ ಆಚರಿಸದೇ, ಅದರ ಅರ್ಥವನ್ನು ತಿಳಿದು ಬದುಕೋಣ, ನಮ್ಮ ಜೀವನದಲ್ಲಿ ಸೇವೆ, ಶಿಸ್ತು ಮತ್ತು ಪ್ರೀತಿಯ ಬೀಜಗಳನ್ನು ಬಿತ್ತೋಣ.
ಏಕೆಂದರೆ, ನಿಜವಾದ ಸ್ಕೌಟ್-ಗೈಡ್ ಆಗುವುದು ಕೇವಲ ಸಮವಸ್ತç ಧರಿಸುವುದಲ್ಲ, ಬದಲಿಗೆ ಹೃದಯದಲ್ಲಿ ಮಾನವೀಯತೆ ಧರಿಸುವುದು. "ಸೇವೆಯೇ ಶ್ರೇಷ್ಠ ಧರ್ಮ- ಸದಾ ಸಿದ್ಧರಾಗಿರಿ".
- ಅಲಿಮ ಪಿ.ಹೆಚ್., ಭಾರತ್ ಸ್ಕೌಟ್ಸ್
ಮತ್ತು ಗೈಡ್ಸ್, ಕರ್ನಾಟಕ.