ಚೆಯ್ಯಂಡಾಣೆ, ನ. ೬: ಪ್ರತಿಷ್ಠಿತ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳ ಕ್ರೀಡಾಕೂಟಕ್ಕೆ ಪೂರ್ವ ತಯಾರಿ ಮತ್ತು ಕೆಲವು ನೀತಿ ನಿಯಮಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕೊಡವ ಜಮ್ಮಾ ಮುಸ್ಲಿಂ ಕ್ರೀಡಾಕೂಟದ ಸ್ಥಾಪಕ ಅಧ್ಯಕ್ಷ ಹಾಗೂ ಕುವಲೆರ ಕುಟುಂಬದ ಅಧ್ಯಕ್ಷ ಕುವಲೆರ ಅನೀಸ್ ಚಾಮಿಯಾಲ ತಿಳಿಸಿದ್ದಾರೆ.
ವೀರಾಜಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳ ಕ್ರೀಡಾಕೂಟದಲ್ಲಿ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು ಈ ಹಿಂದೆ ನಡೆದಂತಹ ಕ್ರೀಡಾಕೂಟದಲ್ಲಿ ಕೆಲವು ಗೊಂದಲಗಳಿದ್ದ ಕಾರಣ ಮುಖ್ಯವಾಗಿ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳು ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು ೪೦ಕ್ಕೂ ಹೆಚ್ಚು ಕುಟುಂಬಗಳ ಮನೆಗಳಿಗೆ ತೆರಳಿ ಕುಟುಂಬದ ಅಧ್ಯಕ್ಷರು ಹಾಗೂ ಹಿರಿಯರನ್ನು ಸಂಪರ್ಕಿಸಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಸುಮಾರು ೩೦ ರಿಂದ ೪೦ ಕುಟುಂಬಗಳ ಮನೆಗಳಿಗೆ ತೆರಳಿ ಕ್ರೀಡಾಕೂಟದ ಯಶಸ್ವಿ ಹಾಗೂ ಕೊಡವ ಜಮ್ಮಾ ಮುಸ್ಲಿಮರೇ ಭಾಗವಹಿಸುವ ರೀತಿಯಲ್ಲಿ ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸುತ್ತೇವೆ ಎಂದರಲ್ಲದೆ ಜಮ್ಮಾ ಮುಸ್ಲಿಂನ ಜನಾಂಗ ಬಾಂಧವರು ಇದೆ ರೀತಿ ಸಹಕಾರ ನೀಡಬೇಕೆಂದು ಅನೀಸ್ ತಿಳಿಸಿದರು.
ಕೊಡವ ಜಮ್ಮಾ ಮುಸ್ಲಿಂ ಸಂಘದ ಸದಸ್ಯ ಮಂದಮಾಡ ಮುನೀರ್ ಕಂಡAಗಾಲ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸೂಕ್ತ ದಾಖಲೆಯನ್ನು ಪಡೆದುಕೊಂಡು ಕ್ರೀಡಾಕೂಟವನ್ನು ನಡೆಸಿದ್ದರೂ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಇದ್ದುದನ್ನು ಮನಗಂಡು ಇದೀಗ ಸಂಬAಧಪಟ್ಟ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳನ್ನು ಭೇಟಿ ಮಾಡಿ ಸಂಬAಧಪಟ್ಟ ದಾಖಲೆಗಳನ್ನು ಪಡೆದುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸದಸ್ಯರಿಗೆ ಗುರುತಿನ ಚೀಟಿಯನ್ನು ನೀಡುವುದರ ಮೂಲಕ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಾಡುತ್ತೇವೆ ಎಂದರು. ಕೆಲವು ಕುಟುಂಬಗಳ ದಾಖಲೆಗಳನ್ನು ಪರೀಕ್ಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ ರೀತಿ ಮುಂದೆ ನಡೆಯುವಂತಹ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳ ಪ್ರತಿಯೊಂದು ಕ್ರೀಡಾಕೂಟಕ್ಕೂ ದಾಖಲೆಗಳು ಅನ್ವಯಿಸುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಲತೀಫ್ ಮಿತಲತಂಡ ಗುಂಡಿಗೆರೆ, ಮುನೀರ್ ಪುದಿಯತ್ ಚಾಮಿಯಾಲ, ದುದ್ದಿಯಂಡ ಫಕ್ರುದ್ದೀನ್ ಚೋಕಂಡಳ್ಳಿ ಉಪಸ್ಥಿತರಿದ್ದರು.