ಚೆಯ್ಯಂಡಾಣೆ, ನ. ೬: ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಕೊಡಗು ಜಿಲ್ಲಾ ಸಮಿತಿಯ ಸಮಾವೇಶ ಕಾರ್ಯಕ್ರಮ ಮೇಕೇರಿಯಲ್ಲಿ ಜರುಗಿತು.
ಮೇಕೇರಿಯ ಮದರಸ ಸಭಾಂಗಣದಲ್ಲಿ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಮುನೀರ್ ಮಹ್ಲರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಎಸ್.ವೈ.ಎಸ್. ಸ್ವಾಂತನ ವಿಭಾಗದ ನೇತಾರ ಶಾಫಿ ಸಅದಿ ಸೋಮವಾರಪೇಟೆ ಉದ್ಘಾಟಿಸಿ ಮಾತನಾಡಿದರು.
ದಆವಾ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಗದ್ದೆಹಳ್ಳ, ಉಮ್ರಾ ಸೇವೆ ಬಗ್ಗೆ ಮಾತನಾಡಿದರು. ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಬಷೀರ್ ಸಅದಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಜ್ಯ ಸಮಿತಿ ಹಮ್ಮಿಕೊಂಡ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ ಯೂನಿಟ್ ಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸಬೇಕು. ಇದಕ್ಕೆ ಜಿಲ್ಲಾ ಸಮಿತಿ ಕಾರ್ಯೋನ್ಮುಖರಾಗಬೇಕು ಎಂದರು. ಸಯ್ಯಿದ್ ಅಹ್ಮದ್ ಮೆದ್ದಿ ಅಲ್ ಬುಖಾರಿ ತಂಙಳ್ ಲಕ್ಷದೀಪ್, ಎಸ್.ವೈ.ಎಸ್. ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ಎಸ್.ವೈ.ಎಸ್. ರಾಜ್ಯ ನಾಯಕರಾದ ಅಹ್ಮದ್ ಮದನಿ ಗುಂಡಿಕೆರೆ, ಅಶ್ರಫ್ ಎಮ್ಮೆಮಾಡು, ಜಿಲ್ಲಾ ಕೋಶಾಧಿಕಾರಿ ಶರೀಫ್ ಮಾಸ್ಟರ್, ಜಿಲ್ಲಾ ದಆವಾ ಕಾರ್ಯದರ್ಶಿ ಸಂಸುAದ್ದಿನ್ ಅಮ್ಜದಿ, ಬಷೀರ್ ಕೊಟ್ಟಮುಡಿ, ಶಿಯಾಬ್ ಲತೀಫಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಪ್ರಾರ್ಥಿಸಿ, ಶಿಯಾಬ್ ಲತೀಫ್ ಸ್ವಾಗತಿಸಿ, ಶಕಿರ್ ಮಾಸ್ಟರ್ ವಂದಿಸಿದರು.