ಮುಳ್ಳೂರು, ನ. ೭: ಸಮಿಪದ ಹುಲುಕೋಡು ಗ್ರಾಮದಲ್ಲಿರುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ, ಕುಂಭಾಬಿಷೇಕ ಮತ್ತು ಕಲಶಾರೋಹಣ ಮಹೋತ್ಸವ ತಾ. ೯ ಮತ್ತು ೧೦ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
೯ ರಂದು ಸಂಜೆ ೪ ಗಂಟೆಗೆ ಗಂಗೆ ಪೂಜೆ, ಗೋಪೂಜೆಯೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ನಂತರ ಯೋಗಶಾಲಾ ಪ್ರವೇಶ, ಪುಣ್ಯಾಹ ವಾಚನ, ನಾಂದಿ, ಗಣಪತಿ ಪೂಜೆ, ಕಳಸ ಪ್ರತಿಷ್ಠಾಪನೆ, ಗಣಪತಿ ಹೋಮ, ವಾಸ್ತು, ರಾಕ್ಷೆÆÃಘ್ನ, ಪುಷ್ಪ ವಿವಾಸ, ಫಲಾಧಿನಾಸ, ನಿದ್ರಾದಿವಾಸ ಮುಂತಾದ ಪೂಜಾ ವಿಧಿ ವಿಧಾನಗಳು ನೆರವೇರಲಿದೆ ತಾ.೧೦ ರಂದು ಮುಂಜಾನೆ ೩ ಗಂಟೆಯಿAದ ಸುಮಂಗಳಿಯರೊAದಿಗೆ ಅಗ್ರೋಧಕ ಸಹಿತ ಗಂಗಾಪೂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ದೇವಾಲಯ ಪ್ರವೇಶ ನಂತರ ನೂತನ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ.
ಬೆಳಿಗ್ಗೆ ೮ ಗಂಟೆಗೆ ಶ್ರೀಸ್ವಾಮಿಗೆ ಪ್ರೀತ್ಯರ್ಥವಾಗಿ ರುದ್ರಹೋಮ, ಕಾಲಕಳಸಗಳ ಹೋಮ, ಜಯಾಧಿಹೋಮ, ಮಹಾಪೂರ್ಣಾಹುತಿ, ದೃಷ್ಟಿಪೂಜೆ, ನಾಕಾಬಲಿ, ಮಹಾಮಂಗಳಾರತಿ ಮುಂತಾದ ಪೂಜಾ ಕಾರ್ಯಗಳು ನೆರವೇರಲಿದ್ದು, ೧೧ ಗಂಟೆಗೆ ಧಾರ್ಮಿಕ ಆಶೀರ್ವಚನ ಸಭಾ ಕಾರ್ಯಕ್ರಮ ನಡೆಯಲಿದ್ದು ಕಲ್ಲುಮಠದ ಶ್ರೀ ಮಹಾಂತಸ್ವಾಮಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗಸ್ವಾಮಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗಸ್ವಾಮಿ, ಹೆಗ್ಗಡಹಳ್ಳಿ ಮಠದ ಶ್ರೀ ಶಡ್ಯವ ರೈತೇಶ್ವರ ಸ್ವಾಮಿ, ಮುದ್ದಿನಕಟ್ಟೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ ಧಾರ್ಮಿಕ ಆಶೀವರ್ಚನ ನೀಡಲಿದ್ದು ಸಮಾರೋಪ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ದೇವಸ್ಥಾನ ಸಮಿತಿ ಅಧ್ಯಕ್ಷ ವಿನಿತ್ ಕುಮಾರ್ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಗ್ರಾಮ ಅಧ್ಯಕ್ಷೆ ಶಶಿ ಶಾಂತಪ್ಪ ಮುಂತಾದವರು ಭಾಗವಹಿಸುತ್ತಾರೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.