ಮಡಿಕೇರಿ, ನ. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವೀರಾಜಪೇಟೆ ತಾಲೂಕು ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಇವರ ಸಹಯೋಗದೊಂದಿಗೆ ಅಮ್ಮತ್ತಿಯ ಪ್ರೌಢಶಾಲಾ ಶಾಲಾ ಮೈದಾನದಲ್ಲಿ ಮೈಸೂರು ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ ೧೪ ಮತ್ತು ೧೭ ವರ್ಷ ವಯೋಮಾನದ ಬಾಲಕ,ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ವರ್ಣರಂಜಿತ ತೆರೆ ಬಿದ್ದಿದೆ.

೧೭ ವರ್ಷ ವಯೋಮಾನದ ಬಾಲಕಿಯರ ಪಂದ್ಯದಲ್ಲಿ ಕೊಡಗು ತಂಡ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ. ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ೧೪ ವರ್ಷ ವಯೋಮಾನದ ಬಾಲಕಿಯರ ಪಂದ್ಯದಲ್ಲಿ ಕೊಡಗು ತಂಡವು ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ.

೧೭ ವರ್ಷ ವಯೋಮಾನದ ಬಾಲಕರ ಫೈನಲ್ ಪಂದ್ಯದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ತಂಡಗಳ ನಡುವಿನ ಜಿದ್ದಾಜಿದ್ದಿನ ಸೆಣಸಾಟದಲ್ಲಿ ನಿಗದಿತ ಸಮಯದಲ್ಲಿ ಎರಡು ತಂಡಗಳು ಗೋಲು ದಾಖಲಿಸಲಿಲ್ಲ.ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ೧೪ ವರ್ಷ ವಯೋಮಾನದ ಬಾಲಕರ ಫೈನಲ್ ಪಂದ್ಯದಲ್ಲಿ ಚಿಕ್ಕಮಗಳೂರು ತಂಡವು ೪-೨ ಗೋಲುಗಳ ಅಂತರದಿAದ ಗೆದ್ದು ಚಾಂಪಿಯನ್ ಪ್ರಶಸ್ತಿ ಪಡೆಯಿತು.

ಇಂದಿನಿAದ ರಾಜ್ಯ ಮಟ್ಟದ ಪಂದ್ಯ

ತಾ. ೮ ರಿಂದ ೧೦ರವರೆಗೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ೧೪ ಮತ್ತು ೧೭ ವರ್ಷ ವಯೋಮಾನದ ರಾಜ್ಯಮಟ್ಟದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಐದು ಹಾಗೂ ಬಾಲಕಿಯರ ವಿಭಾಗದಲ್ಲಿ ನಾಲ್ಕು ವಿಭಾಗಗಳು ಸೆಣಸಾಟ ನಡೆಸಲಿವೆ.

ಬಾಲಕರ ವಿಭಾಗದಲ್ಲಿ ಮೈಸೂರು, ಕಲಬುರ್ಗಿ, ಬೆಳಗಾವಿ, ಬೆಂಗಳೂರು ಹಾಗೂ ಡಿವೈಇಎಸ್ ವಿಭಾಗದ ತಂಡಗಳು ಭಾಗವಹಿಸಲಿವೆ. ಬಾಲಕಿಯರ ವಿಭಾಗದಲ್ಲಿ ಮೈಸೂರು,ಕಲಬುರ್ಗಿ,ಬೆಳಗಾವಿ ಹಾಗೂ ಬೆಂಗಳೂರು ತಂಡಗಳು ಭಾಗವಹಿಸಲಿವೆ. ರಾಜ್ಯ ಮಟ್ಟದ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಬಾಲಕರ ತಂಡವು ಲೀಗ್ ಹಂತದಲ್ಲಿ ನಾಲ್ಕು ಪಂದ್ಯ ಹಾಗೂ ಬಾಲಕಿಯರ ತಂಡಗಳು ಮೂರು ಪಂದ್ಯವನ್ನು ಆಡಲಿದೆ. ಲೀಗ್ ಹಂತದಲ್ಲಿ ಟೇಬಲ್ ಟಾಪರ್ ಪಡೆಯುವ ತಂಡಗಳು ಚಾಂಪಿಯನ್ ಪ್ರಶಸ್ತಿ ಪಡೆದು, ರಾಷ್ಟç ಮಟ್ಟಕ್ಕೆ ಅರ್ಹತೆ ಪಡೆಯಲಿವೆ.

-ಕೆ.ಎಂ ಇಸ್ಮಾಯಿಲ್ ಕಂಡಕರೆ