ವೀರಾಜಪೇಟೆ, ನ. ೭: ಕೊಡವ ಸಮಾಜದ ಒಕ್ಕೂಟದ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಹುದಿಕೇರಿ, ಆರಾಯಿರನಾಡು, ಕುಟ್ಟ, ಪೊನ್ನಂಪೇಟೆ ಕೊಡವ ಸಮಾಜಗಳ ನಡುವೆ ಸೆಮಿಫೈನಲ್ಸ್ ನಡೆಯಲಿದೆ.
ಹುದಿಕೇರಿ ಕೊಡವ ಸಮಾಜವು ೨-೧ ಗೋಲುಗಳಿಂದ ಕುಶಾಲನಗರ ಕೊಡವ ಸಮಾಜವನ್ನು ಪರಾಭವಗೊಳಿಸಿತು. ಹುದಿಕೇರಿ ಕೊಡವ ಸಮಾಜದ ಪರ ಬಯವಂಡ ಪೊನ್ನಣ್ಣ(೩೦ನಿ), ಚೆಕ್ಕೆರ ಆದರ್ಶ್(೩೫ನಿ), ಕುಶಾಲನಗರ ಕೊಡವ ಸಮಾಜದ ಪರ ಅಪ್ಪನೆರವಂಡ ಯಶ್ವಿನ್ ನಾಚಪ್ಪ(೯ನಿ)ದಲ್ಲಿ ಗೋಲು ದಾಖಲಿಸಿದರು.
ಕುಟ್ಟ ಕೊಡವ ಸಮಾಜವು ೪-೩ ಗೋಲುಗಳಿಂದ ಮೈಸೂರು ಕೊಡವ ಸಮಾಜವನ್ನು ಟೈಬ್ರೇಕರ್‌ನಲ್ಲಿ ಸೋಲಿಸಿತು. ನಿಗದಿತ ಅವದಿಯಲ್ಲಿ ಯಾವುದೇ ಗೋಲಾಗದ ಕಾರಣ ಟೈಬ್ರೆಕರ್‌ನಲ್ಲಿ ಕುಟ್ಟಾ ಕೊಡವ ಸಮಾಜದ ಪರ ಚೆಪ್ಪುಡಿರ ಚೇತನ್, ಚೇನಂಡ ಮೌರ್ಯ, ಮಲ್ಲಾಜಿರ ವಚನ್, ಅರಮಾಣಮಾಡ ನಿರನ್, ಮೈಸೂರು ಕೊಡವ ಸಮಾಜದ ಪರ ಮುಕ್ಕಾಟಿರ ಶಿಶಿರ್, ಅಂಜಪರವAಡ ಅಭಿನ್ ಚಿಟ್ಟಿಯಪ್ಪ, ಕನ್ನಿಕಂಡ ದೇವಯ್ಯ ಗೋಲು ದಾಖಲಿಸಿದರು. ಆರಾಯಿರ ಕೊಡವ ಸಮಾಜ ತಂಡವು ೫-೩ ಗೋಲುಗಳಿಂದ ನಾಪೋಕ್ಲು ಕೊಡವ ಸಮಾಜವನ್ನು ಪರಾಭವಗೊಳಿಸಿ ಸೆಮಿಫೈನಲ್ಸ್ಗೆ ತಲುಪಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ೧-೧ ಸಮಬಲ ಸಾಧಿಸಿತು. ಟೈಬ್ರೇಕರ್ ನಿಯಮದಲ್ಲಿ ಆರಾಯಿರ ಕೊಡವ ಸಮಾಜವು ಗೆಲುವು ಸಾಧಿಸಿತು. ಆರಾಯಿರ ಕೊಡವ ಸಮಾಜದ ಪರ ಕುಪ್ಪಂಡ ಗೌರವ್(೨೨ನಿ), ಟೈಬ್ರೇಕರ್‌ನಲ್ಲಿ ಕರ್ತಚಿರ ಡ್ಯಾನಿ, ಕೇಚಮಾಡ ನಿಖಿಲ್ ದೇವಯ್ಯ, ಮೇಕೇರಿರ ರೋನಕ್, ನಾಪಂಡ ನಾಚಪ್ಪ, ನಾಪೋಕ್ಲು ಕೊಡವ ಸಮಾಜದ ಪರ ಕಂಗAಡ ಪುನಿತ್(೩೦ನಿ), ಟೈಬ್ರೇಕರ್‌ನಲ್ಲಿ ಬಲ್ಲಚಂಡ ಪ್ರಜ್ವಲ್, ಬಲ್ಲಚಂಡ ಪ್ರಜನ್ ಗೋಲು ದಾಖಲಿಸಿದರು.
ಪೊನ್ನಂಪೇಟೆ ಕೊಡವ ಸಮಾಜವು ೧-೦ ಗೋಲಿನಿಂದ ಬೆಪ್ಪುನಾಡು ಕೊಡವ ಸಮಾಜವನ್ನು ಪರಾಭವಗೊಳಿಸಿ ಸೆಮಿಫೈನಲ್ ಪ್ರವೇಶಿಸಿದೆ. ೧೩ನೇ ನಿಮಿಷದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಪರ ಮಂಡೇಚAಡ ಮಂಜುನಾಥ್ ಗೋಲು ದಾಖಲಿಸುವುದರ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು. ಪಂದ್ಯಾಟದ ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಕರವಂಡ ಅಪ್ಪಣ್ಣ, ಚೆಯ್ಯಂಡ ಅಪ್ಪಚ್ಚು, ಪಟ್ರಪಂಡ ಮಂದಣ್ಣ, ಚಂದಪAಡ ಆಕಾಶ್, ಬೊಟ್ಟಂಗಡ ಕೌಶಿಕ್ ಕಾವೇರಪ್ಪ. ಬೊಳ್ಳಚಂಡ ನಾಣಯ್ಯ, ಕನ್ನಂಬಿರ ಚಿಣ್ಣಪ್ಪ ತಾಂತ್ರಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ಕುಪ್ಪಂಡ ರಾಜೀವ್, ಬೇರೆರ ಮಿಥುನ್ ಬೆಳ್ಳಿಯಪ ವಿಕ್ಷಕ ವಿವರಣೆ ನೀಡಿದರು.
ಫೈವ್‌ಸೈಡರ್ ಮಹಿಳಾ ಹಾಕಿ
ಪೊನ್ನಂಪೇಟೆ ಕೊಡವ ಸಮಾಜವು ೪-೨ ಗೋಲುಗಳಿಂದ ಮಡಿಕೇರಿ ಕೊಡವ ಸಮಾಜವನ್ನು ಮಣಿಸಿತು. ನಾಪೋಕ್ಲು ಕೊಡವ ಸಮಾಜವು ೪-೧ ಗೋಲುಗಳಿಂದ ಅಮ್ಮತ್ತಿ ಕೊಡವ ಸಮಾಜವನ್ನು ಪರಾಭವಗೊಳಿಸಿತು. ಮೈಸೂರು ಕೊಡವ ಸಮಾಜವು ೧-೦ ಗೋಲಿನಿಂದ ಮೂರ್ನಾಡು ಕೊಡವ ಸಮಾಜವನ್ನು ಸೋಲಿಸಿತು. ಕುಟ್ಟಾ ಕೊಡವ ಸಮಾಜವು ೩-೧ ಗೋಲುಗಳಿಂದ ಬಾಳೆಲೆ ಕೊಡವ ಸಮಾಜವನ್ನು ಪರಾಭವಗೊಳಿಸಿತು. ವಿರಾಜಪೇಟೆ ಕೊಡವ ಸಮಾಜ ೪-೦ ಗೊಲುಗಳಿಂದ ಪೊನ್ನಂಪೇಟೆ ಕೊಡವ ಸಮಾಜವನ್ನು ಮಣಿಸಿತು. ನಾಪೋಕ್ಲು ಕೊಡವ ಸಮಾಜವು ೨-೦ ಗೋಲುಗಳಿಂದ ಆರಾಯಿರನಾಡು ಕೊಡವ ಸಮಾಜವನ್ನು ಮಣಿಸಿ ಸೆಮಿಫೈನಲ್ಸ್ ಪ್ರವೇಶ ಪಡೆದುಕೊಂಡಿತು.
೧೦೦ ವರ್ಷದ ಇತಿಹಾಸ
ಹಾಕಿ ಉದಯವಾಗಿ ೧೦೦ ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಂತರರಾಷ್ಟಿçÃಯ ಹಾಕಿ ಆಟಗಾರರ ಸಮ್ಮಖದಲ್ಲಿ ಫೆಡರೇಷನ್ ಆಫ್ ಕೊಡವ ಸಮಾಜದ ವತಿಯಿಂದ ಫೈವ್‌ಸೈರ‍್ಸ್ ಮಹಿಳಾ ಹಾಕಿಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಲ್ಲಣಮಾಡ ರೀಟಾ ಅಪ್ಪಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಬಾರ್ಸಿಲೋನಾ ಒಲಂಪಿಯನ್ ಚೆಪ್ಪುಡಿರ ಪೂಣಚ್ಚ, ವಿಶ್ವಕಪ್ ಹಾಕಿ ಆಟಗಾರ ಕೂತಂಡ ಪೂಣಚ್ಚ, ಅಂತರರಾಷ್ಟಿçÃಯ ಆಟಗಾರ ನೆಲ್ಲಮಕ್ಕಡ ಅಪ್ಪು ಕಾರ್ಯಪ್ಪ, ಅಂತರರಾಷ್ಟಿçÃಯ ಹಾಕಿ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ, ಕ್ರೀಡಾ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮ: ಪೂರ್ವಹ್ನ ೯ ಗಂಟೆಗೆ ವಿವಿಧ ಕೊಡವ ಸಮಾಜಗಳ ನಡುವೆ ಹಗ್ಗಜಗ್ಗಾಟ, ೧೧ ಗಂಟೆಗೆ ಲೆಫ್ಟಿನೆಂಟ್ ಕರ್ನನ್ ಬಾಳೆಯಡ ಸುಬ್ರಮಣಿ ಅವರಿಂದ ಯುದ್ಧ ಸ್ಮಾರಕದಲ್ಲಿ ಅಗಲಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ.
- ಪಳೆಯಂಡ ಪಾರ್ಥಚಿಣ್ಣಪ್ಪ