ಕೂಡಿಗೆ, ನ. ೯: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಹಾಕಿ ಪುರುಷರ ತಂಡದ ಕೊಡಗು ಅರಣ್ಯ ಇಲಾಖೆಯ ಹಾಕಿ ಕ್ರೀಡಾಪಟುಗಳನ್ನು ಒಳಗೊಂಡAತೆ ರಾಷ್ಟಿçÃಯ ಮಟ್ಟದ ಪುರುಷರ ಹಾಕಿ ಪಂದ್ಯಾವಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ರಾಷ್ಟಿçÃಯ ಮಟ್ಟದ ಹಾಕಿ ಪಂದ್ಯಾಟವು ಉತ್ತರಾಖಂಡದ ಡೆಹ್ರಾಡೂನ್ ಕ್ರೀಡಾಂಗಣದಲ್ಲಿ ೨೦೨೫-೨೬ನೇ ರಾಷ್ಟಿçÃಯ ಮಟ್ಟದ ಕ್ರೀಡಾಕೂಟ ನವೆಂಬರ್ ೧೨ ರಿಂದ ೧೬ ರವರೆಗೆ ನಡೆಯಲಿದೆ. ಈ ತಂಡದಲ್ಲಿ ಅರಣ್ಯ ಇಲಾಖೆಯ ವಿವಿಧ ಹುದ್ದೆಯ ಅಧಿಕಾರಿ ವರ್ಗದವರಲ್ಲಿ ಕೊಡಗು, ಮೈಸೂರು, ಧಾರವಾಡ, ಬೆಂಗಳೂರು ಹಾಸನ, ಭಾಗ ಅರಣ್ಯ ಇಲಾಖೆಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ತಂಡದಲ್ಲಿ ಕೊಡಗಿನ ಹೆಚ್ಚು ಆಟಗಾರಿದ್ದು, ಜಿಲ್ಲೆಯಿಂದ ಹೊರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಅರಣ್ಯ ಇಲಾಖೆಯ ಮೂಲಕ ಹಾಕಿ ತಂಡದಲ್ಲಿ ರಾಷ್ಟçಮಟ್ಟದ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಹಾಕಿ ತಂಡವು ಸತತವಾಗಿ ಮೂರು ಬಾರಿ ರಾಷ್ಟಿçÃಯ ಹಾಕಿ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ. ಅರಣ್ಯ ಇಲಾಖೆಯ ಕ್ರೀಡಾಪಟುಗಳು ಕಳೆದ ಒಂದು ತಿಂಗಳಿನಿAದ ಕೂಡಿಗೆ ಕ್ರೀಡಾಶಾಲೆಯ ಹಾಕಿ ಟರ್ಫ್ ಮೈದಾನದಲ್ಲಿ ಕ್ರೀಡಾ ಶಾಲೆ ಹಾಕಿ ತರಬೇತುದಾರ ವೆಂಕಟೇಶ್ ಅವರಿಂದ ತರಬೇತಿ ಪಡೆದಿರುತ್ತಾರೆ.