ಗೋಣಿಕೊಪ್ಪಲು, ನ.೯: ದ.ಕೊಡಗಿನ ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ೨೦೨೫-೩೦ ಅವಧಿಗೆ ಚುನಾವಣೆ ನಡೆಯಿತು. ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲಿ ಜಯಗಳಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗುಮ್ಮಟೀರ ಕಿಲನ್ ಗಣಪತಿ ಮೇಲು ಉಸ್ತುವಾರಿ ವಹಿಸಿದ್ದರು.

ಬಿ.ಜೆ.ಪಿ.ಬೆಂಬಲಿತ ಅಭ್ಯರ್ಥಿಗಳಾಗಿ ಅವಿರೋಧ ಆಯ್ಕೆಯಾದ ವಿವರ

ಸಾಮಾನ್ಯ ವರ್ಗದಿಂದ ಅರಮಣಮಾಡ ಸುಗುಣ ಗಣಪತಿ, ಮಾಪಂಗಡ ಸಂಪತ್ ಅಯ್ಯಪ್ಪ, ಅಳಮೇಂಗಡ ಸುರೇಶ್, ಕಾಯಮಾಡ ರಾಜ. ಮಹಿಳಾ ಮೀಸಲಾತಿಯಲ್ಲಿ ಅಡ್ಡೆಂಗಡ ಕಾವೇರಮ್ಮ, ಮುಕ್ಕಾಟಿರ ಜಾನಕಿ ಕಾವೇರಪ್ಪ. ಪ್ರವರ್ಗ- ಎ ಯಿಂದ ಬಾಚಮಾಡ ವಿಶು, ಪರಿಶಿಷ್ಟ ವರ್ಗದಿಂದ ಎ. ಕೆ. ದೇವರಾಜು, ಪ್ರವರ್ಗ ಬಿ. ಯಿಂದ ಮಂದೆಮಾಡ ಗಣಪತಿ ಬೋಸ್ ಆಯ್ಕೆಯಾದರು.

ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನು ಉತ್ತಪ್ಪ, ಮಂದೆಮಾಡ ಗಣಪತಿ ಬೋಸ್ ವಿರುದ್ಧ ೬೦ ಮತಗಳ ಅಂತರದಿAದ ಸೋಲನ್ನು ಅನುಭವಿಸಿದರು. ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಶ್ರೀಮಂಗಲ, ಅಮ್ಮತ್ತಿ,ವಿರಾಜಪೇಟೆ ಸೇರಿದಂತೆ ಕೊಡಗಿನ ವಿವಿಧ ಭಾಗಗಳಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಪಕ್ಷÀದೊಂದಿಗೆ ಜನರು ಇದ್ದಾರೆ ಎಂಬುದಕ್ಕೆ ಈ ಫಲಿತಾಂಶಗಳು ಸಾಕ್ಷಿಯಾಗಿವೆ ಎಂದರು.

ಈ ಸಂದರ್ಭ ಸಂಸ್ಥೆಯ ಮಾಜಿ ಅಧ್ಯಕ್ಷ ಅರಮಣಮಾಡ ಸುಗುಣ ಗಣಪತಿ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಸುಖೇಶ್, ಪಕ್ಷದ ಹಲವು ಗಣ್ಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.