ಪೊನ್ನಂಪೇಟೆ, ನ. ೯: ಬೆಂಗಳೂರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಒಲಂಪಿಕ್ಸ್ ಬಾಕ್ಸಿಂಗ್ ಸ್ಪರ್ಧೆಯ ೨೫ ರಿಂದ ೩೦ ಕೆ.ಜಿ. ವಿಭಾಗದಲ್ಲಿ ಕೊಡಗಿನ ಮೇಕೇರಿರ ಕಶಿಕ ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ.

ಈಕೆ ರಾಷ್ಟಿçÃಯ ರ‍್ಯಾಲಿಪಟು ಕಳತ್ಮಾಡುವಿನ ಮೇಕೇರಿರ ಕಾರ್ಯಪ್ಪ ಹಾಗೂ ಅರ್ಪಿತಾ ದಂಪತಿ ಪುತ್ರಿಯಾಗಿದ್ದು, ಲಯನ್ಸ್ ಶಾಲೆಯಲ್ಲಿ ೬ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ೩೧-೩೫ ಕೆ.ಜಿ. ವಿಭಾಗದಲ್ಲಿ ಮಿನ್ನಂಡ ಲಿಖಿತ್ ಚಿಣ್ಣಪ್ಪ ಬೆಳ್ಳಿ ಪದಕ ಹಾಗೂ ೩೬ ರಿಂದ ೪೦ ಕೆ.ಜಿ. ವಿಭಾಗದಲ್ಲಿ ಮಿನ್ನಂಡ ಲೇಖಕ್ ಚಂಗಪ್ಪ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಅವಳಿ ಸಹೋದರರಾಗಿದ್ದು, ಅರ್ವತೊಕ್ಕಲು ಸರ್ವದೈವತಾ ಶಾಲೆಯಲ್ಲಿ ೭ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ ಹಾಗೂ ಪ್ರೀತ್ ದಂಪತಿಯ ಪುತ್ರರಾಗಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಕೊಡಗು ಬಾಕ್ಸಿಂಗ್ ಅಕಾಡೆಮಿ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರ ಮಾರ್ಗದರ್ಶನದಲ್ಲಿ ದೇಯಂಡ ಮಾದಪ್ಪ ಹಾಗೂ ಶರತ್ ನಾಯ್ಡು ತರಬೇತಿ ನೀಡುತ್ತಿದ್ದಾರೆ.