ಚೆಯ್ಯಂಡಾಣೆ, ನ. ೯: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಸಂಜೀವಿನಿ ಒಕ್ಕೂಟದ ಸಂಜೀವಿನಿ ಶೆಡ್ ಹಾಗೂ ಕಲಿಕಾ ಕೇಂದ್ರ ನಿರ್ಮಾಣ ಕಾಮಗಾರಿಗೆ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.
ನರಿಯಂದಡ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ರೂ. ೨೫ ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ನಂತರ ಮಾತನಾಡಿದ ಶಾಸಕರು, ರೂ. ೧೦ ಲಕ್ಷ ಸರಕಾರದಿಂದ ಮಂಜೂರಾಗಿದ್ದು, ಉಳಿದ ಹಣ ಉದ್ಯೋಗ ಖಾತ್ರಿ ಹಾಗೂ ಕಲಿಕಾ ಕೇಂದ್ರದ ಮೂಲಕ ಮಂಜೂರಾಗಿದೆ. ಒಟ್ಟು ರೂ. ೨೫ ಲಕ್ಷ ವೆಚ್ಚದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉತ್ತಮ ಗುಣಮಟ್ಟದ ಕಟ್ಟಡ ಕಾಮಗಾರಿ ನಿರ್ಮಾಣವಾಗಲಿ ಎಂದರು.
ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಪ್ರವೀಣ್ ಈರಪ್ಪ, ಸುಬೈರ್, ಮಮ್ಮದ್, ಪಾಂಡAಡ ರಾಣಿ ಗಣಪತಿ, ವಾಣಿ, ಅಭಿವೃದ್ಧಿ ಅಧಿಕಾರಿ ಸೇಬಾಸ್ಟಿನ್, ಕಂದಾಯ ಪರಿವೀಕ್ಷಕ ರವಿಕುಮಾರ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಬೊಳ್ಳಂಡ ಶರೀನ್, ಕೆಡಿಪಿ ಸದಸ್ಯ ಮಾಳೆಟ್ಟಿರ ಪ್ರಶಾಂತ್, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾ.ಪಂ. ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.