ಮಡಿಕೇರಿ, ನ. ೧೦: ಆಟೋ ಸಂಚಾರದ ಪರ್ಮಿಟ್ ವ್ಯಾಪ್ತಿ ಹೆಚ್ಚಳ ಮಾಡಬಾರದು ಹಾಗೂ ತೆರಿಗೆ ಮೋಸ ಮಾಡಿ ಸಂಚರಿಸುತ್ತಿರುವ ವಾಹನ ಹಾಗೂ ವೈಟ್ ಬೋರ್ಡ್ ವಾಹನಗಳ ವಿರುದ್ಧ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕೆಂದು ಟ್ಯಾಕ್ಸಿ ಡ್ರೆöÊವರ್ ಟ್ರೇಡ್ ಯೂನಿಯನ್ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಆಟೋ ಚಾಲಕರ ನಿಯೋಗ ಶಾಸಕ ಎ.ಎಸ್. ಪೊನ್ನಣ್ಣ ಅವರ ಮೂಲಕ ಸಾರಿಗೆ ಸಚಿವರ ಬಳಿ ತೆರಳಿ ಪರ್ಮಿಟ್ ವ್ಯಾಪ್ತಿ ಹೆಚ್ಚಳಕ್ಕೆ ಮನವಿ ಮಾಡಿದೆ. ಇದರಿಂದ ತೆರಿಗೆ ಪಾವತಿಸುವ ಟ್ಯಾಕ್ಸಿ ಚಾಲಕರಿಗೆ ಸಮಸ್ಯೆಯಾಗಲಿದೆ. ಪ್ರವಾಸೋದ್ಯಮವನ್ನು ನಂಬಿ ಚಾಲಕರು ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ದರದಲ್ಲಿ ಆಟೋ ಬಾಡಿಗೆಗೆ ಸಿಗುವುದರಿಂದ ಕಾರು, ಪ್ರವಾಸಿ ಬಸ್ ಚಾಲಕ, ಮಾಲೀಕರಿಗೆ ದೊಡ್ಡ ಪ್ರಮಾಣದ ಹೊಡೆತ ಬೀಳಲಿದೆ. ಯಾವುದೇ ಕಾರಣಕ್ಕೂ ಆಟೋ ಚಾಲಕರ ಮನವಿಯನ್ನು ಸರಕಾರ ಪುರಸ್ಕರಿಸಬಾರದೆಂದು ಒತ್ತಾಯಿಸಿದರು.
ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವ ವಿರುದ್ಧ ಕ್ರಮಕೈಗೊಳ್ಳುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅದೇ ರೀತಿ ಕೇರಳದ ವಾಹನಗಳು ಪರ್ಮಿಟ್ ಇಲ್ಲದೆ ಕೊಡಗು ಜಿಲ್ಲೆ ಪ್ರವೇಶಿಸಿ ಇಲ್ಲಿನ ಜನರನ್ನು ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ತೆರಿಗೆ ಮೋಸ ಮಾಡಿ ಈ ರೀತಿ ನಡೆಸಲಾಗುತ್ತಿರುವ ಹಿನ್ನೆಲೆ ಸ್ಕಾ÷್ವಡ್ ರಚನೆ ಮಾಡಿ ಇದರ ಮೇಲೆ ಕಣ್ಣಿಡಬೇಕು. ಹಣ ಕಡಿಮೆಯಾಗುತ್ತದಂತೆ ಎಂಬ ಕಾರಣಕ್ಕಾಗಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಾಗ ಪರ್ಮಿಟ್ ಇಲ್ಲದ ಕೇರಳ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಕೂಡ ಕಾನೂನಿಗೆ ವಿರುದ್ಧವಾಗಿದೆ. ಶಾಲಾ ಆಡಳಿತ ಮಂಡಳಿ ಈ ತಪ್ಪು ಮಾಡಬಾರದು ಎಂದರು.
ಜಿಲ್ಲಾಧ್ಯಕ್ಷ ಕೆ.ಎಂ. ಪರಶುರಾಮ್ ಮಾತನಾಡಿ, ವಿವಿಧ ತೆರಿಗೆ ರೂಪದಲ್ಲಿ ಲಕ್ಷಾಂತರ ಹಣವನ್ನು ಚಾಲಕರು ಸರಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. ಅವರ ಪರ ಸರಕಾರ ನಿಲ್ಲಬೇಕು. ಪ್ಯಾನಿಕ್ ಬಟನ್, ಜಿಪಿಆರ್ಎಸ್ ಅಳವಡಿಸಲು ಸರಕಾರ ಸೂಚಿಸಿದ್ದು, ಇದು ಕೂಡ ನಿಷ್ಪçಯೋಜಕವಾಗಿದೆ. ಚಾಲಕ ಸಂಘಟನೆಗಳೊAದಿಗೆ ಚರ್ಚಿಸಿ ಈ ರೀತಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎ. ರಫೀಕ್, ಉಪಾಧ್ಯಕ್ಷ ಅಖಿಲ್ ಶಿವಾಜಿ, ಕೋಶಾಧಿಕಾರಿ ಎ.ಸಿ. ಲೋಕೇಶ್ ಹಾಜರಿದ್ದರು.