ಸೋಮವಾರಪೇಟೆ, ನ. ೧೦: ಕಳೆದ ಹಲವಾರು ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿರುವ ರೈತರು, ತಾಲೂಕು ಕಚೇರಿ ಮುಂಭಾಗ ವಿಷದ ಬಾಟಲಿಯೊಂದಿಗೆ ಪ್ರತಿಭಟನೆ ನಡೆಸಿದರು.
ರೈತರ ತಾಳ್ಮೆಯ ಕಟ್ಟೆಯೊ ಡೆದಿದೆ. ಕಚೇರಿಗೆ ಅಲೆದು ಚಪ್ಪಲಿ ಸವೆದಿದೆ. ಹತ್ತಾರು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ. ನಮ್ಮ ಜೀವಿತಾವಧಿಯಲ್ಲಿ ದುರಸ್ತಿ ಆಗುವ ನಿರೀಕ್ಷೆಯಿಲ್ಲ. ಹೀಗಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ವಿಷದ ಬಾಟಲಿ ಜೊತೆಗಿಟ್ಟುಕೊಂಡು ಪ್ರತಿಭಟನೆ ಮುಂದುವರೆಸಿದರು.
ಆರAಭದಲ್ಲಿ ಕಂದಾಯ ಇಲಾಖೆಯ ಕೆಲವೊಂದು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾ ನಿರತ ರೈತರು, ಕೆಲಕಾಲ ಕಚೇರಿಯ ಮುಂಭಾಗದಲ್ಲಿ ಕುಳಿತರು. ಈ ನಡುವೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ವತಿಯಿಂದ ತಹಶೀಲ್ದಾರ್ ಕಚೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದುದರಿಂದ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಬರಲು ತಡವಾಯಿತು.
ಇದರಿಂದ ಸಿಟ್ಟಿಗೆದ್ದ ರೈತರು ಬಂದೋಬಸ್ತ್ನಲ್ಲಿದ್ದ ಪೊಲೀಸರನ್ನು ಧಿಕ್ಕರಿಸಿ ತಾಲೂಕು ಕಚೇರಿಯೊಳಗೆ ಪ್ರವೇಶಿಸಿದರು. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭ ಪೊಲೀಸ್ ಸಿಬ್ಬಂದಿಗಳು ತಡೆದು ಮತ್ತೆ ಕೆಳಭಾಗಕ್ಕೆ ಕರೆತಂದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು, ದುರ ಸ್ತಿಗೆ ಸಂಬAಧಿಸಿದAತೆ ಎಲ್ಲಾ ರೀತಿಯ ೪ಐದÀನೇ ಪುಟಕ್ಕೆ ಮೊದಲ ಪುಟದಿಂದ) ಕೆಲಸ ಕಾರ್ಯಗಳು ಆಗುತ್ತಿವೆ. ಈಗಾಗಲೇ ೬೦೦ ರೈತರಿಗೆ ಆರ್‌ಟಿಸಿ ನೀಡಲು ಕ್ರಮ ವಹಿಸಲಾಗಿದೆ. ಉಳಿಕೆ ಅರ್ಜಿಗಳು ಸಮಿತಿಯ ಮುಂದೆ ವಿಚಾರಣೆಗೆ ಬಾಕಿಯಿದೆ. ತಾನು ಅಧಿಕಾರ ವಹಿಸಿಕೊಂಡು ೧೦ ತಿಂಗಳಷ್ಟೇ ಆಗಿದ್ದು, ತನ್ನ ಅವಧಿಯಲ್ಲಿ ಯಾವುದೇ ಅರ್ಜಿಯನ್ನೂ ವಜಾಗೊಳಿಸಿಲ್ಲ ಎಂದರು.
ಈ ಸಂದರ್ಭ ಮಾತನಾಡಿದ ರೈತ ಮುಖಂಡ ಬಗ್ಗನ ಅನಿಲ್‌ಕುಮಾರ್ ಅವರು, ಕೆಲವೊಂದು ಸರ್ವೆ ನಂಬರ್‌ಗಳಲ್ಲಿ ಹಣ ನೀಡಿದವರಿಗೆ ಮಾತ್ರ ದುರಸ್ತಿಯಾಗಿದೆ. ಹಣ ನೀಡದ ಬಡವರ ಕಡತಗಳು ಬಾಕಿ ಉಳಿದಿವೆ. ಸರ್ಕಾರದ ಆದೇಶದಂತೆ ಒಂದು ಸರ್ವೆ ನಂಬರ್‌ನಲ್ಲಿರುವ ಎಲ್ಲಾ ರೈತರ ಜಮೀನು ದುರಸ್ತಿಯಾಗಬೇಕಿದೆ. ಆದರೆ ಒಂದು ಸರ್ವೆ ನಂಬರ್‌ನಲ್ಲಿ ಕೆಲವರ ಜಾಗ ಮಾತ್ರ ದುರಸ್ತಿಯಾಗಿ, ಉಳಿದವರ ಕಡತ ಹಾಗೆಯೇ ಇಟ್ಟುಕೊಳ್ಳಲಾಗಿದೆ ಎಂದರು.
ತನ್ನ ಅವಧಿಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡಿಲ್ಲ. ಕಾನೂನು ಭಾಗದಲ್ಲಿ ಇರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸಿ ರೈತರಿಗೆ ನೆರವು ನೀಡಲಾಗುತ್ತಿದೆ. ಸಿದ್ಧವಾಗಿರುವ ಆರ್‌ಟಿಸಿಗಳನ್ನು ಕಾರ್ಯಕ್ರಮ ಆಯೋಜಿಸುವ ಮೂಲಕ ವಿಲೇವಾರಿ ಮಾಡಲು ಚಿಂತಿಸಲಾಗಿದೆ. ಕೆಲವೊಂದು ಕಡತಗಳಿಗೆ ಪೂರಕ ದಾಖಲೆಗಳು ಇಲ್ಲದೇ ಇರುವುದರಿಂದ ಕಡತ ಹುಡುಕುವ ಕೆಲಸ ಆಗುತ್ತಿದೆ ಎಂದರು.
ಇAತಹ ಪ್ರಕರಣಗಳನ್ನು ಗೈರು ವಿಲೇ ಕಡತದ ಸಭೆಯಲ್ಲಿ ಇಡಲಾಗುವುದು. ಜಿಲ್ಲಾಧಿಕಾರಿ, ಹೆಚ್.ಆರ್.ಪಿ. ಕಚೇರಿಗಳಿಂದಲೂ ಕಡತಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ಸಿ ಮತ್ತು ಡಿ ಜಾಗದ ಸಮಸ್ಯೆಯಿರುವ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯಿಂದ ವರದಿ ಕೇಳಲಾಗಿದೆ ಎಂದು ತಹಶೀಲ್ದಾರ್ ಸಮಜಾಯಿಷಿಕೆ ನೀಡಿದರು.
ಇದಕ್ಕೆ ಒಪ್ಪದ ರೈತರು, ತಲ್ತರೆಶೆಟ್ಟಳಿ ಗ್ರಾಮ ಸ.ನಂ.೧೮/೯, ೧೧೮/೧೨, ಶುಂಠಿ ಗ್ರಾಮದ ಸ.ನಂ.೨೪/೨೮, ಅಬ್ಬೂರುಕಟ್ಟೆ ಹಿತ್ತಲುಮಕ್ಕಿ ಗ್ರಾಮದ ಸ.ನಂ.೮/೧೩, ತಾಕೇರಿ ಗ್ರಾಮದ ಸ.ನಂ.೧/೪, ಬಸವನಕೊಪ್ಪ ಗ್ರಾಮದ ಸ.ನಂ. ೧/೩, ಚಿಕ್ಕಬ್ಬೂರು ಗ್ರಾಮದ ೩/೩೨, ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ಪೋಡಿ ದುರಸ್ತಿಗಾಗಿ ೨೦೧೮ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಈವರೆಗೆ ದುರಸ್ತಿ ಆಗಿಲ್ಲ. ಇದೇ ಸರ್ವೆ ನಂಬರ್‌ನಲ್ಲಿ ಹಣ ನೀಡಿದವರ ಕಡತಗಳು ವಿಲೇವಾರಿಯಾಗಿವೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಕಂದಾಯ ಇಲಾಖಾ ಕಾರ್ಯದರ್ಶಿಗಳು ಬರುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.
ಮತ್ತೆ ಆಕ್ರೋಶ
ಈ ನಡುವೆ ತಹಶೀಲ್ದಾರ್ ಕಂದಾಯ ಸಚಿವರ ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ಸಭೆಗೆ ತೆರಳಿದರು. ಮಧ್ಯಾಹ್ನದ ವೇಳೆಗೆ ರೈತರು ವಿಷದ ಬಾಟಲಿಗಳನ್ನು ತಂದು ತಾಲೂಕು ಕಚೇರಿಯ ಮುಂಭಾಗ ಧರಣಿ ಮುಂದುವರೆಸಿದರು. ಸಂಜೆ ವೇಳೆಗೆ ಆಗಮಿಸಿದ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು, ಪ್ರತಿಭಟನಾನಿರತರ ಅಹವಾಲು ಆಲಿಸಲು ಮುಂದಾದರು.
ಈ ಸಂದರ್ಭ ರೈತರು ಸಮಸ್ಯೆಗಳ ಸುರಿಮಳೆಗೈದರಲ್ಲದೆ, ಅಧಿಕಾರಿಗಳ ನಿರ್ಲಕ್ಷö್ಯದ ವಿರುದ್ಧ ಆಕ್ರೋಶ ಹೊರಹಾಕಿದರು. ಕಳೆದ ಹತ್ತಾರು ವರ್ಷಗಳಿಂದ ತಾಲೂಕು ಕಚೇರಿಯಲ್ಲಿಯೇ ಉಳಿದುಕೊಂಡಿರುವ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಿ, ಇಲ್ಲದಿದ್ದರೆ ನಾವೇ ಕಳುಹಿಸುತ್ತೇವೆ ಎಂದು ಹೋರಾಟಗಾರರಾದ ಸುರೇಶ್ ಚಕ್ರವರ್ತಿ ಎಚ್ಚರಿಸಿದರು.
ವರ್ಷಗಳಾದರೂ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಒಂದೇ ಒಂದು ಜನಸಂಪರ್ಕ ಸಭೆ ನಡೆಸಿಲ್ಲ ಎಂದು ಕೆ.ಎಂ. ಲೋಕೇಶ್ ಆರೋಪಿಸಿದರು. ತಲ್ತರೆಶೆಟ್ಟಳ್ಳಿಯ ಸ.ನಂ. ೧೮/೯ ರಲ್ಲಿ ೫ ಕಡತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಉಳಿದವರ ಕಡತ ದುರಸ್ತಿ ಮಾಡಲಾಗಿದೆ ಎಂದು ಬಗ್ಗನ ಅನಿಲ್ ಆರೋಪಿಸಿದರು. ಸ.ನಂ. ೧೧೮/೧೨ರಲ್ಲಿಯೂ ಇದೇ ಸಮಸ್ಯೆಯಿದೆ ಎಂದರು.
ಸ.ನA. ೧೧೮/೧೨ರಲ್ಲಿ ಆಕಾರಬಂದು ವಿಸ್ತೀರ್ಣಕ್ಕಿಂತ ಮಂಜೂರಾಗಿರುವ ವಿಸ್ತೀರ್ಣ ಹೆಚ್ಚಾಗಿದೆ. ಹೀಗಾಗಿ ಬಾಕಿ ಇಡಲಾಗಿದೆ ಎಂದು ತಹಶೀಲ್ದಾರ್ ಹೇಳಿದರು. ವಾಸ್ತವಕ್ಕಿಂತ ಹೆಚ್ಚು ವಿಸ್ತೀರ್ಣ ಮಂಜೂರಾತಿ ಮಾಡಿದ ಅಧಿಕಾರಿಗಳನ್ನು ನಾಳೆಯೊಳಗೆ ಅಮಾನತು ಮಾಡಿ ಎಂದು ರೈತರು ಆಗ್ರಹಿಸಿದರು.
ಕಡಿಮೆ ವಿಸ್ತೀರ್ಣದ ಅರ್ಜಿಗಳನ್ನು ಮೊದಲು ವಿಲೇ ಮಾಡಲಾಗಿದೆ. ಉಳಿದ ಕಡತಗಳನ್ನು ನಂತರ ವಿಲೇ ಮಾಡಲು ತೀರ್ಮಾನಿಸಲಾಗಿದೆ ಎಂದು ಮತ್ತೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ತಿಳಿಸಿದರು. ಈ ಬಗ್ಗೆ ಸರ್ಕಾರದ ಯಾವುದಾದರೂ ಆದೇಶ ಇದೆಯೇ? ಇದ್ದರೆ ಕೊಡಿ;ನಾವು ಈಗಲೇ ಪ್ರತಿಭಟನೆ ನಿಲ್ಲಿಸುತ್ತೇವೆ ಎಂದು ಬಗ್ಗನ ಅನಿಲ್, ಎಸ್.ಬಿ. ಭರತ್‌ಕುಮಾರ್ ಹೇಳಿದರು.
ಈ ಹಿಂದೆ ಆಹೋರಾತ್ರಿ ಪ್ರತಿಭಟನೆ ನಡೆಸಿದ ಸಂದರ್ಭ ಸ್ವತಃ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಕೇಳಿದ್ದಾರೆ. ಆದರೂ ಸಮಸ್ಯೆ ಬಗೆಹರಿಸದೇ ತೊಂದರೆ ಕೊಡುತ್ತಿದ್ದಾರೆ. ಒಂದು ಸರ್ವೆ ನಂಬರ್‌ನಲ್ಲಿ ಎಷ್ಟು ಜನರಿದ್ದಾರೋ ಅವರೆಲ್ಲರ ಜಾಗವನ್ನೂ ಪೋಡಿ ದುರಸ್ತಿ ಮಾಡಬೇಕು. ಕಡಿಮೆ, ಜಾಸ್ತಿ ವಿಸ್ತೀರ್ಣ ಎಂದು ವಿಂಗಡಣೆ ಮಾಡಬಾರದು ಎಂದು ಭರತ್ ಕುಮಾರ್ ಆಗ್ರಹಿಸಿದರು.
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕೆಲವು ಅಧಿಕಾರಿಗಳು ಇಂತಹವರೊAದಿಗೆ ಕೈಜೊಡಿಸಿದ್ದಾರೆ. ಇವರ ಹಾವಳಿಯಿಂದಾಗಿ ಜನಸಾಮಾನ್ಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಪೋಡಿ ದುರಸ್ತಿ ಆಗುತ್ತದೆಯೋ ಇಲ್ಲವೋ ಎಂಬುದನ್ನು ಈಗಲೇ ತಿಳಿಸಿ. ೨೪ ಗಂಟೆಯೊಳಗೆ ಸಮಸ್ಯೆ ಇತ್ಯರ್ಥ ಆಗಬೇಕು. ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಕಂದಾಯ ಇಲಾಖೆಯ ಕಾರ್ಯದರ್ಶಿಗಳ ಹೆಸರು ಬರೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸ.ನಂ. ೧೮/೯ರಲ್ಲಿ ೫ ಕಡತಗಳನ್ನು ತಿರಸ್ಕಾರ ಮಾಡಿಲ್ಲ. ಸಮಿತಿಯ ಸಭೆಯಲ್ಲಿ ಚರ್ಚೆಯಾದಂತೆ ಬಾಕಿ ಇಟ್ಟಿದ್ದೇವೆ. ಮುಂದಿನ ಸಭೆಯಲ್ಲಿ ಇಂತಹ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದರು. ತಾಲೂಕು ಕಚೇರಿಯಲ್ಲಿ ಕಾಣದ ಕೈಗಳ ಕೈವಾಡವಿದೆ. ಇದರಿಂದಾಗಿಯೇ ಬಡವರ ಕಡತ ವಿಲೇವಾರಿಯಾಗುತ್ತಿಲ್ಲ ಎಂದು ಹೂವಯ್ಯ ಮಾಸ್ಟರ್ ಆರೋಪಿಸಿದರು.
ಬೆಂಗಳೂರಿನಿAದ ಬಂದವರ ಕೆಲಸಗಳು ಮಧ್ಯವರ್ತಿಗಳ ಮೂಲಕ ಬೇಗ ಆಗುತ್ತದೆ. ಇಲ್ಲಿನ ಬಡ ರೈತರ ಕೆಲಸ ಆಗುವುದಿಲ್ಲ. ಗೈರು ವಿಲೇ ಕಡತದಲ್ಲಿ ಇಟ್ಟು ರೈತರನ್ನು ಸತಾಯಿಸಲಾಗುತ್ತಿದೆ. ನಿಮಗೆ ಆಗದಿದ್ದರೆ ನಾಳೆ ಸಚಿವರೇ ಇಲ್ಲಿಗೆ ಬರಲಿ. ಅವರಲ್ಲಿಯೇ ಕೇಳುತ್ತೇವೆ. ೨೪ ಗಂಟೆಯೊಳಗೆ ಗೈರು ವಿಲೇವಾರಿ ಕಡತದ ಸಭೆ ಕರೆಯಿರಿ. ಈ ಬಗ್ಗೆ ಆದೇಶ ಮಾಡಿದರೆ ಇಲ್ಲಿಂದ ಹೋಗುತ್ತೇವೆ. ಇಲ್ಲದಿದ್ದರೆ ಅನಿರ್ದಿಷ್ಟಾವಧಿವರೆಗೆ ಇಲ್ಲೇ ಇರುತ್ತೇವೆ. ಪೋಡಿ ದುರಸ್ತಿ ಬಗ್ಗೆ ಶಾಸಕರಿಗೂ ಮನವರಿಕೆ ಮಾಡಿಕೊಡಲಾಗಿದೆ. ಆರಂಭದಲ್ಲಿ ಸ್ಪಂದಿಸಿದ್ದ ಶಾಸಕರು ನಂತರ ಹೆಚ್ಚು ಗಮನ ಹರಿಸಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ರಾತ್ರಿಯವರೆಗೂ ಮುಂದುವರೆದ ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಮಚ್ಚಂಡ ಅಶೋಕ್, ಮೊಗಪ್ಪ, ಕೆ.ಎಂ. ಲೋಕೇಶ್, ಹೂವಯ್ಯ ಮಾಸ್ಟರ್, ಡಾಲಿ ಪ್ರಕಾಶ್, ಕೆ.ಟಿ. ಪರಮೇಶ್, ಫ್ರಾನ್ಸಿಸ್ ಡಿಸೋಜ, ಎಸ್.ಎಂ. ಡಿಸಿಲ್ವಾ, ಸುರೇಶ್ ಚಕ್ರವರ್ತಿ, ಗರಗಂದೂರು ಲಕ್ಷ್ಮಣ್, ದೇಶರಾಜ್, ಹಿರಿಕರ ರಮೇಶ್, ಹರೀಶ್, ವಿನಯ್ ಸಂಭ್ರಮ್, ರಾಜೇಶ್ ಕೊತ್ನಳ್ಳಿ, ಮುಳ್ಳೂರು ಸಂತೋಷ್, ಮೋಹನ್ ಸೇರಿದಂತೆ ಇತರರು ಇದ್ದರು.