ಪೆರಾಜೆ, ನ. ೧೦: ಕರ್ನಾ ಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾ ಡೆಮಿಯು ೨೦೨೪ ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು ತಾ. ೩೦ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು. ಪ್ರಶಸ್ತಿಯು ೫೦ ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವವನ್ನು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
೨೦೨೪ ನೇ ಸಾಲಿನ ಪ್ರಶಸ್ತಿಗೆ ಅರೆಭಾಷೆ ಸಾಹಿತಿ ಹಾಗೂ ನಿಘಂಟು ತಯಾರಕರಾಗಿರುವ ಕೆ.ಆರ್. ಗಂಗಾಧರ, ಗ್ರಾಮೀಣ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿರುವ ಡಾ. ಯು.ಪಿ. ಶಿವಾನಂದ ಹಾಗೂ ಅರೆಭಾಷೆ ಸಂಘಟಕ ದಂಬೆಕೋಡಿ ಆನಂದ ಇವರುಗಳು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಐನ್ಮನೆ ಕುರಿತ ಅರೆಭಾಷೆ ಸಾಕ್ಷö್ಯಚಿತ್ರ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಅರೆಭಾಷಾ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ಅರೆಭಾಷೆ ನಾಟಕ ‘ಅಪ್ಪ’ ಪ್ರದರ್ಶನಗೊಳ್ಳಲಿದೆ ಎಂದು ಸದಾನಂದ ಮಾವಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ತೇಜ್ಕುಮಾರ್ ಬಡ್ಡಡ್ಕ, ಜ್ಞಾನೇಶ್ ಎನ್.ಎ., ಚಂದ್ರಶೇಖರ ಪೇರಾಲ್, ಚಂದ್ರಾವತಿ ಬಡ್ಡಡ್ಕ, ಲೋಕೇಶ್ ಊರುಬೈಲ್ ಉಪಸ್ಥಿತರಿದ್ದರು.