ಮಡಿಕೇರಿ, ನ. ೧೦: ೬೬/೧೧ ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿAದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿ ಕೇರಿ, ಸಂಪಾಜೆ, ಕುಂಡಾಮೇಸ್ತಿç, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ ಫೀಡರ್‌ಗಳಲ್ಲಿ ತಾ.೧೨ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ನಿರ್ವ ಹಿಸಬೇಕಾಗಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರ ಬರಾಜಾಗುವ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು, ಬೋಯಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

* ೩೩/೧೧ ಕೆ.ವಿ ಸೋಮವಾರ ಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿAದ ಹೊರಹೊಮ್ಮುವ ಎಫ್೪ ಸೋಮವಾರಪೇಟೆ ಟೌನ್ ಫೀಡರ್‌ನಲ್ಲಿ ತಾ.೧೨ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕಾಪರ್ ಕಂಡಕ್ಟರ್ ಕಾಮಗಾರಿ ಹಾಗೂ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಎಂ.ಜಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಕ್ಲಬ್ ರಸ್ತೆ, ಬಸವೇಶ್ವರ ರಸ್ತೆ, ಬಾಣಾವಾರ ರಸ್ತೆ, ಚೌಡ್ಲು, ಆಲೆಕಟ್ಟೆ ರಸ್ತೆ, ಕಕ್ಕೆಹೊಳೆ, ಹಾನಗಲ್ಲು, ಕಾಂನ್ವೆಟ್ ಬಾಣೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಒಳಪಡುವ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

*ಮಡಿಕೇರಿ: ಮೂರ್ನಾಡು ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಉಪಕೇಂದ್ರದಿAದ ಹೊರಹೊಮ್ಮುವ ಎಫ್೨ ನಾಪೋಕ್ಲು ಹಾಗೂ ಎಫ್೫ ಹೊದ್ದೂರು ಫೀಡರ್‌ನಲ್ಲಿ ತಾ.೧೧, ೧೨ ಮತ್ತು ೧೩ ರಂದು ರಾತ್ರಿ ೧೦ ರಿಂದ ಬೆಳಿಗ್ಗೆ ೫ ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊದ್ದೂರು, ಕಬಡಗೇರಿ, ಕಕ್ಕಬ್ಬೆ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಚೆರಿಯಪರಂಬು, ಹಳೆ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.