ವೀರಾಜಪೇಟೆ, ನ. ೯: ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಅಲ್ಲಿನ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ೧೨ನೆಯ ವರ್ಷದ ಕೊಡವ ನಮ್ಮೆ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆಬಿದ್ದಿತು.

ಅಂತರ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾಟ, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಮಹಿಳಾ ಹಾಕಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಸೇರಿದಂತೆ ಆವರಣದಲ್ಲಿರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಕೆ ಹಾಗೂ ಅಂತರ ಕೊಡವ ಸಮಾಜಗಳ ನಡುವೆ ಕೊಡವ ಜನಪದ ಕಲೆ ಪ್ರದರ್ಶನದ ಪೈಪೋಟಿ ಸಭಾ ಕಾರ್ಯಕ್ರಮಗಳನ್ನು ಒಳಗೊಂಡAತೆ ನಾಲ್ಕು ದಿನಗಳ ಕಾಲ ಇಲ್ಲಿ ಸಂಭ್ರಮ ಮನೆ ಮಾಡಿತ್ತು.

ಅಂತಿಮ ದಿನವಾಗಿದ್ದ ಭಾನುವಾರ ದಿನವಿಡೀ ಸಾಂಸ್ಕೃತಿಕ ಸ್ಪರ್ಧೆಗಳು ಗಮನ ಸೆಳೆದವು. ೮ ವಿಭಾಗದ ಸ್ಪರ್ಧೆಯಲ್ಲಿ ೧೬ ಕೊಡವ ಸಮಾಜಗಳ ಕಲಾತಂಡಗಳು ಪಾಲ್ಗೊಂಡಿದ್ದವು. ಇದರೊಂದಿಗೆ ಕ್ರೀಡೆಗಳ ಅಂತಿಮ ಪಂದ್ಯಾಟವೂ ಇಂದು ರೋಚಕವಾಗಿ ನಡೆದು ಈ ಬಾರಿಯ ಕೊಡವ ನಮ್ಮೆ ಕಾರ್ಯಕ್ರಮ ವೈಭವದ ತೆರೆಕಂಡಿತು.

ಪೊನ್ನAಪೇಟೆ - ವೀರಾಜಪೇಟೆ

ಕೊಡವ ಸಮಾಜಗಳ ಗೆಲುವು

ಕಳೆದ ನಾಲ್ಕು ದಿನಗಳಿಂದ ನಡೆದ ಹಾಕಿ ಪಂದ್ಯಾಟದ ಫೈನಲ್ಸ್ನಲ್ಲಿ ಪೊನ್ನಂಪೇಟೆ ಕೊಡವ ಸಮಾಜವು ಟೈಬ್ರೇಕರ್‌ನಲ್ಲಿ ಆರಾಯಿರನಾಡು ಕೊಡವ ಸಮಾಜವನ್ನು ೩-೨ ಗೋಲುಗಳಿಂದ ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಆರಾಯಿರನಾಡು ಕೊಡವ ಸಮಾಜ ಎರಡನೇ ಸ್ಥಾನಕ್ಕೆ ತೃಪ್ತಿಗೊಳ್ಳಬೇಕಾಯಿತು. ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಪರಿಣಾಮ ನಿಗದಿತ ಅವಧಿಯಲ್ಲಿ ಯಾವುದೇ ಗೋಲಾಗದ ಕಾರಣ ಆಯೋಜಕರು ಟೈಬ್ರೇಕರ್ ನಿಯಮ ಅಳವಡಿಸಿದರು. ಟೈಬ್ರೇಕರ್ ನಲ್ಲಿ ಪೊನ್ನಂಪೇಟೆ ತಂಡವು ಮೂರು ಗೋಲುಗಳನ್ನು ಬಾರಿಸುವುದರ ಮೂಲಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಪೊನ್ನಂಪೇಟೆ ತಂಡದ ಪರ ಬಾಚಮಂಡ ಚಿಂಗಪ್ಪ, ಅಂಜಪರವAಡ ಚಿರಾಗ್, ಮಂಡೆಚAಡ ಮಂಜುನಾಥ್, ಆರಾಯಿರನಾಡು ತಂಡದ ಪರ ಕುಪ್ಪಂಡ ಗೌರವ್, ಕೇಚಂಡ ದೇವಯ್ಯ ಗೋಲು ದಾಖಲಿಸಿದರು. ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಚೈಯ್ಯಂಡ ಅಪ್ಪಚ್ಚು, ತಾಂತ್ರಿಕ ಸಮಿತಿಯಲ್ಲಿ ಬೊಟ್ಟಂಗಡ ಕೌಶಿಕ್, ಕುಪ್ಪಂಡ ದಿಲನ್, ತಾಂತ್ರಿಕ ನಿರ್ದೇಶಕರಾಗಿ ಕನ್ನಂಬಿರ ಚಿಣ್ಣಪ್ಪ ಕಾರ್ಯ ನಿರ್ವಹಿಸಿದರು.

ಮಹಿಳೆಯರ ಫೈಸೈರ‍್ಸ್ ಹಾಕಿ ಪಂದ್ಯಾಟದ ಫೈನಲ್‌ನಲ್ಲಿ ವೀರಾಜಪೇಟೆ ಕೊಡವ ಸಮಾ ಜವು ೨-೧ ಗೋಲಿನಿಂದ ಮೈಸೂರು ಕೊಡವ ಸಮಾಜವನ್ನು ಟೈಬ್ರೇಕರ್‌ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಯಾವುದೇ ಗೋಲಾಗದ ಕಾರಣ ಟೈಬ್ರೇಕರ್ ನಿಯಮ ಅಳಡಿಸಲಾಯಿತು. ಟೈಬ್ರೇಕರ್‌ನಲ್ಲಿ ವೀರಾಜಪೇಟೆ ತಂಡದ ನಾಪಂಡ ಸೌಮ್ಯ, ಕೇಚೇಟಿರ ಪಾರ್ವತಿ ಗೋಲು ದಾಖಲಿಸಿದರೆ, ಮೈಸೂರು ತಂಡದಲ್ಲಿ ಮೇಕೇರಿರ ಶೈನಾ ತಂಗಮ್ಮ ಗೋಲು ಬಾರಿಸಿದರು. ತೀರ್ಪುಗಾರರಾಗಿ ಚೈಯ್ಯಂಡ ಅಪ್ಪಚ್ಚು, ಬೊಟ್ಟಂಗಡ ಕೌಶಿಕ್ ಕಾರ್ಯ ನಿರ್ವಹಿಸಿದು.

ಹಗ್ಗಜಗ್ಗಾಟ - ಅಮ್ಮತ್ತಿ - ನಾಪೋಕ್ಲು ಕೊಡವ ಸಮಾಜಗಳಿಗೆ ಗೆಲುವು

ಹಾಕಿ ಪಂದ್ಯಾಟ ಮುಗಿದ ಬಳಿಕ ನಡೆದ ಪುರುಷರ ಹಗ್ಗಜಗ್ಗಾಟದ ಫೈನಲ್ಸ್ನಲ್ಲಿ ಅಮ್ಮತ್ತಿ ಕೊಡವ ಸಮಾಜ ತಂಡ ಮೂರ್ನಾಡು ಕೊಡವ ಸಮಾಜ ತಂಡವನ್ನು ಮಣಿಸಿತು. ಮಹಿಳೆಯ ಹಗ್ಗಜಗ್ಗಾಟದಲ್ಲಿ ನಾಪೋಕ್ಲು ಕೊಡವ ಸಮಾಜ ತಂಡ ಟಿ. ಶೆಟ್ಟಿಗೇರಿ ತಾವಳಗೇರಿ ಕೊಡವ ಸಮಾಜ ತಂಡವನ್ನು ಪರಾಭವಗೊಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಭಾರದ ಗುಂಡು ಎಸೆತ

ಪುರುಷರ ವಿಭಾಗದಲ್ಲಿ ಅಮ್ಮತ್ತಿ ಕೊಡವ ಸಮಾಜದ ಮೂಕೊಂಡ ಸುಬ್ಬಯ್ಯ (ಪ್ರ), ನಾಪೋಕ್ಲು ಕೊಡವ ಸಮಾಜದ ಅಜ್ಜೇಟಿರ ಸೋಮಯ್ಯ (ದ್ವಿ), ನಾಪೋಕ್ಲು ಕೊಡವ ಸಮಾಜದ ಅಜ್ಜೇಟಿರ ಗೌತಮ್ (ತೃ), ಮಹಿಳೆಯರ ವಿಭಾಗದಲ್ಲಿ ವೀರಾಜಪೇಟೆ ಕೊಡವ ಸಮಾಜದ ಮನೆಯಪಂಡ ದೇಚಮ್ಮ ಕಾಳಪ್ಪ (ಪ್ರ), ಸೋಮವಾರಪೇಟೆ ಕೊಡವ ಸಮಾಜದ ತಾಚಮಂಡ ವೀಣಾ (ದ್ವಿ), ಬೆಪ್ಪುನಾಡು ಕೊಡವ ಸಮಾಜದ ಮನೆಯಪಂಡ ಶಿಪ್ರ ಕಾಳಪ್ಪ (ತೃ) ಸ್ಥಾನ ಪಡೆದುಕೊಂಡರು.