ವಿಶೇಷ ವರದಿ : ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ನ. ೯: ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ-ಕೊಟ್ಟಗೇರಿ ಸಂಪರ್ಕ ಸೇತುವೆಯಾಗಿರುವ ದೋಣಿಕಡವು ಸೇತುವೆಯ ಒಂದು ಭಾಗದಲ್ಲಿ ಭಾರೀ ಗಾತ್ರದ ಹೊಂಡ ಆಗಿದ್ದು, ಈ ಸೇತುವೆಯು ಅಪಾಯದ ಅಂಚಿನಲ್ಲಿದೆ.

ಈ ಸೇತುವೆಯನ್ನು ಹಲವು ದಶಕಗಳ ಹಿಂದೆ ಸಚಿವರಾಗಿದ್ದ ಜನಾರ್ಧನ ಪೂಜಾರಿಯವರ ಅವಧಿಯಲ್ಲಿ ನಾಗರಿಕರ ಮನವಿ ಮೇರೆ ಬಾಳೆಲೆ-ಕೊಟ್ಟಗೇರಿಗೆ ಸಂಪರ್ಕ ಸೇತುವೆಯಾಗಿ ನಿರ್ಮಾಣ ಮಾಡಲಾಗಿತ್ತು. ಸೇತುವೆಯು ಅತ್ಯಂತ ಕಿರಿದಾಗಿದ್ದು ಸೇತುವೆಯ ಎರಡು ಬದಿಯಲ್ಲಿಯೂ ತಡೆಗೋಡೆ ಇಲ್ಲದೆ ಇರುವುದು ಕಂಡು ಬಂದಿದೆ. ಸೇತುವೆಯ ಒಂದು ಭಾಗದಲ್ಲಿ ದೊಡ್ಡ ಗಾತ್ರದ ಗುಂಡಿ ಬಿದ್ದಿದ್ದು ನೀರು ಹರಿಯುವ ರಭಸಕ್ಕೆ ಸೇತುವೆಯ ಒಂದು ಬದಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುತ್ತಿದೆ.

ಈ ಸೇತುವೆ ಅತ್ಯಂತ ಕಿರಿದಾಗಿರುವುದರಿಂದ ಸೇತುವೆಯ ಮೇಲ್ಭಾಗ ವಾಹನ ಸಂಚಾರ ಮಾಡುವ ಸಂದರ್ಭದಲ್ಲಿ ಒಂದು ವಾಹನವು ಮತ್ತೊಂದು ವಾಹನಕ್ಕೆ ದಾರಿ ಬಿಡಲು ಸಾಧ್ಯವಾಗುವುದಿಲ್ಲ. ೪ಐದÀನೇ ಪುಟಕ್ಕೆ (ಮೊದಲ ಪುಟದಿಂದ) ಇಂತಹ ಸಂದರ್ಭದಲ್ಲಿ ವಾಹನಗಳು ಒಂದು ಬದಿಯಲ್ಲಿಯೇ ನಿಂತು ಎದುರು ಭಾಗದಿಂದ ಬರುವ ವಾಹನವು ಚಲಿಸಿದ ನಂತರವಷ್ಟೇ ತೆರಳಬೇಕಾಗಿದೆ.

ಸೇತುವೆಯ ಎರಡು ಭಾಗಕ್ಕೂ ತಡೆ ಗೋಡೆ ಇಲ್ಲದಿರುವುದರಿಂದ ಸೇತುವೆಯ ಮೇಲ್ಭಾಗದಲ್ಲಿ ತೆರಳುವ ನಾಗರಿಕರು ಭಯದಲ್ಲಿಯೇ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಬೇಕಾಗಿದೆ. ರಸ್ತೆಯ ಎರಡು ಬದಿಯಲ್ಲಿಯೂ ರೈತರ ಜಾಗಗಳಿದ್ದು ರಸ್ತೆಯ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡಲು ಈ ಭಾಗದ ರೈತರು ಹಾಗೂ ಬೆಳೆಗಾರರು ತಮ್ಮ ಸಮ್ಮತಿ ಸೂಚಿಸಿದ್ದಾರೆ.

ಬಾಳೆಲೆ ಪಟ್ಟಣದ ಅನತಿ ದೂರದಲ್ಲಿರುವ ಆಸ್ಪತ್ರೆಯ ಮುಂಭಾಗದಿAದ ಕೊಟ್ಟಗೇರಿಗೆ ತೆರಳುವ ರಸ್ತೆಯು ಬಹಳ ಕಿರಿದಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆ ಮಾರ್ಗವಾಗಿಯೇ ಸೇತುವೆಯ ಮೇಲ್ಭಾಗದಿಂದ ಕೊಟ್ಟಗೇರಿಗೆ ಸಂಪರ್ಕ ಸೇತುವೆಯಾಗಿರುವ ದೋಣಿಕಡವು ಸೇತುವೆಗೆ ಕಾಯಕಲ್ಪ ನೀಡಬೇಕಾಗಿದೆ.