ಕೂಡಿಗೆ, ನ.೧೪: ರಾಜ್ಯದಲ್ಲಿ ಏಕೈಕ ಮಹಶೀರ್ ಮೀನು ಮರಿ ಸಂವರ್ಧನಾ ಕೇಂದ್ರವಾಗಿರುವ ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದಲ್ಲಿ ಈ ಸಾಲಿನಲ್ಲಿ ಭಾರತೀಯ ದೊಡ್ಡ ಗೆಂಡೆ ಮೀನುಗಳ ಸಾಕಾಣಿಕೆಯ ಮೂಲಕ ರೂ.೧ ಕೋಟಿ ೭೦ ಲಕ್ಷ ಮೀನು ಮರಿಗಳನ್ನು ಮೀನುಗಾರಿಕೆ ಇಲಾಖೆಯ ಮುಖೇನ ಉತ್ಪಾದನೆ ಮಾಡಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಮೀನು ಕೃಷಿಕರಿಗೆ ಸರಬರಾಜು ಮಾಡಲಾಗಿದೆ. ನೆರೆಯ ಕೇರಳ ರಾಜ್ಯದ ನೂರಾರು ಮೀನು ಕೃಷಿಕರಿಗೂ ಕೇಂದ್ರದ ವತಿಯಿಂದ ಮೀನುಗಳನ್ನು ವಿತರಣೆ ಮಾಡಲಾಗುತ್ತಿದೆ.

ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಇಲಾಖೆಯ ನಿಯಮಾನುಸಾರ ಮೊದಲ ಹಂತವಾಗಿ ಮಹಶೀರ್ ಮೀನು ಮರಿಗಳನ್ನು ಉತ್ಪಾದನೆ ಮಾಡಲಾಗುತ್ತದೆ. ನಂತರ ಹಾರಂಗಿ ನದಿ ಮತ್ತು ಕಾವೇರಿ ನದಿಗೆ ಮೀನು ಮರಿಗಳನ್ನು ಬಿಡಲಾಗುತ್ತದೆ.

ಭಾರತೀಯ ದೊಡ್ಡ ಗೆಂಡೆ ಮೀನು, ಕಾಟ್ಲಾ, ಮೃಗಾಲ್, ಸಾಮಾನ್ಯ ಗೆಂಡೆ ಮೀನು, ಹುಲ್ಲುಗೆಂಡೆ ಸೇರಿದಂತೆ ವಿವಿಧ ತಳಿಗಳ ಮೀನುಗಳ ಸಾಕಾಣಿಕೆಯ ಮೂಲಕ ವರ್ಷಂಪ್ರತಿ ಸಾವಿರಾರು ಮರಿಗಳ ಉತ್ಪಾದನೆ ಮಾಡಲಾಗುತ್ತಿದೆ ಎಂಬುದಾಗಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಸಚಿನ್ ಮಾಹಿತಿ ಇತ್ತಿದ್ದಾರೆ.

ಹಾರಂಗಿ ಮೀನು ಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದಲ್ಲಿ ಪ್ರಮುಖವಾಗಿ ಮಹಶೀರ್ ಮೀನು ಸಂವರ್ಧನೆಗೆ ಹೆಚ್ಚು ಒತ್ತು ನೀಡುವ ಮೂಲಕ ಅವುಗಳ ಸಂತಾನೋತ್ಪತ್ತಿ ಅಧಿಕವಾಗಿದೆ. ಹಾರಂಗಿಯಿAದ ಕೂಡಿಗೆವರೆಗೆ ಹಾರಂಗಿ ನದಿಯಲ್ಲಿ ಮಹಶೀರ್ ಮೀನು ಸಂತತಿ ಈ ಕಾರಣದಿಂದಾಗಿ

ಹೆಚ್ಚಿದೆ.

ಕುಶಾಲನಗರದ ಸಮೀಪದ ಬೆಟ್ಟಗೇರಿಯಿಂದ ಕೊಡಗಿನ ಗಡಿ ಭಾಗವಾದ ಶಿರಂಗಾಲದವರೆಗೆ ಕಾವೇರಿ ನದಿಯಲ್ಲಿ ಮಹಶೀರ್ ಮೀನುಗಳ ಸಂತತಿಯ ಬೆಳವಣಿಗೆಗೆ ಉತ್ತಮವಾದ ಹವಾಮಾನ ಮಾತ್ರವಲ್ಲದೇ ಕಾವೇರಿ ನದಿ ಮತ್ತು ಹಾರಂಗಿ ನದಿಯಲ್ಲಿ ಮೀನುಗಾರಿಕೆ ನಿಷೇಧವಾಗಿರುವ ಕಾರಣಕ್ಕೂ ಇವುಗಳ ಸಂತತಿ ವೃದ್ಧಿಯಾಗಲು ಸಹಕಾರಿಯಾಗಿದೆ.

ಮೀನು ಕೃಷಿಕ ರೈತರಿಗೆ ಮೀನು ಸಾಕಾಣಿಕೆ ಮಾಡುವುದರಿಂದ ತಮ್ಮ ಜಮೀನನ ಕೆರೆಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಮೀನು ಸಾಕಾಣಿಕೆ ಮಾಡುವ ರೈತರಿಗೆ ಸಾಕಾಣಿಕೆಗೆ ಸಂಬAಧಿಸಿದAತೆ ವಿವಿಧ ಬಗೆಯ ತರಬೇತಿಯನ್ನು ಉಚಿತವಾಗಿ ಕೂಡ ಇಲಾಖೆಯಿಂದ ನೀಡಲಾಗುವುದು ಎಂದು ಕೂಡ ಸಚಿನ್ ಅವರು ಮಾಹಿತಿ ನಿಡಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ