ಮಡಿಕೇರಿ, ನ. ೧೫: ಅಮ್ಮತ್ತಿ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ (ಎ.ಪಿ.ಸಿ.ಎಂ.ಎಸ್.)ದ ನೂತನ ಅಧ್ಯಕ್ಷರಾಗಿ ಅಚ್ಚೆಯಂಡ ಮದನ್ ಹಾಗೂ ಉಪಾಧ್ಯಕ್ಷರಾಗಿ ಮಾಚಿಮಂಡ ಪ್ರಸಾದ್ ಚಂಗಪ್ಪ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಂಘಕ್ಕೆ ಚುನಾವಣೆ ನಡೆದಿದ್ದು, ನಿರ್ದೇಶಕರುಗಳಾಗಿ ಡೆಲಿಗೇಟರ್ ಸ್ಥಾನದಿಂದ ಪಾಲಿಬೆಟ್ಟ ಪ್ಯಾಕ್ಸ್ನ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ಅಮ್ಮತ್ತಿ ಪ್ಯಾಕ್ಸ್ನ ಉಪಾಧ್ಯಕ್ಷ ಕುಟ್ಟಂಡ ಸಿ. ಪೂಣಚ್ಚ, ಬಿಸಿಎಂ(ಎ) ಮತ್ತು ಬಿಸಿಎಂ(ಬಿ) ಸ್ಥಾನದಿಂದ ಪೊನ್ನಜಿರ ಬೋಪಯ್ಯ ಹಾಗೂ ಪಂದ್ಯAಡ ಮನು, ಪರಿಶಿಷ್ಟ ಪಂಗಡ ಸ್ಥಾನದಿಂದ ಪುಟ್ಟ ಅವಿರೋಧವಾಗಿ ಆಯ್ಕೆಯಾಗಿದ್ದರು. ಇತರ ಚುನಾವಣೆಗಳಿಗೆ ಚುನಾವಣೆ ನಡೆದಿದ್ದು ಅಚ್ಚೆಯಂಡ ಚಂಗಪ್ಪ (ಮದನ್), ಮಾಚಿಮಂಡ ಪ್ರಸಾದ್ ಚಂಗಪ್ಪ, ನೆಲ್ಲಮಕ್ಕಡ ಸಂಪತ್ ದೇವಯ್ಯ, ವಾಟೇರಿರ ಬೋಪಣ್ಣ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಎಂ.ಬಿ. ಪೂವಮ್ಮ ಹಾಗೂ ಸ್ವಾತಿ ಮೂಕೋಂಡ ಜಯ ಸಾಧಿಸಿದ್ದರು.
ಇದೀಗ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಅಚ್ಚಿಯಂಡ ಮದನ್ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಚಿಮಂಡ ಪ್ರಸಾದ್ ಚಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.