ಮಡಿಕೇರಿ, ನ. ೧೫: ೨೦೨೪-೨೫ ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡAತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ತಾ.೧೭ ರಿಂದ ೨೬ ರವರೆಗೆ ಮೈಸೂರು ವಿಭಾಗ ಮಟ್ಟದ ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ/ ಪರಸ್ಪರ ವರ್ಗಾವಣೆಯ ಆನ್‌ಲೈನ್ ಕೌನ್ಸಿಲಿಂಗ್ (ರೌಂಡ್ ರಾಬಿನ್) ಮಾದರಿಯಲ್ಲಿ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ.

ಅದರಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಮೈಸೂರು ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ/ ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್ ಮಾದರಿಯಲ್ಲಿ ತಾ. ೧೭ ರಿಂದ ೨೬ ರವರೆಗೆ ನಗರದ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ. ವೇಳಾಪಟ್ಟಿ ಅನುಸಾರ ಸಂಬAಧಿಸಿದ ಶಿಕ್ಷಕರು ನಿಗದಿತ ದಿನಾಂಕದAದು ಕೌನ್ಸೆಲಿಂಗ್‌ಗೆ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು: ಕೋರಿಕೆ ವರ್ಗಾವಣೆಯು ತಾ. ೧೭ ರಂದು ನಡೆಯಲಿದ್ದು, ವಿಶೇಷ ಶಿಕ್ಷಕರು ಆದ್ಯತಾ ಕ್ರಮ ಸಂಖ್ಯೆ ೧ ರಿಂದ ೩, ದೈಹಿಕ ಶಿಕ್ಷಣ ಶಿಕ್ಷಕರು ೧ ರಿಂದ ೯, ಮುಖ್ಯ ಶಿಕ್ಷಕರು ೧ ರಿಂದ ೨೦, ಸಹ ಶಿಕ್ಷಕರು ೧ರಿಂದ ೧೦೦, ನವೆಂಬರ್, ೧೮ ರಂದು ಸಹ ಶಿಕ್ಷಕರು ೧೦೧ ರಿಂದ ೨೫೯, ನವೆಂಬರ್ ೧೯ ರಂದು ಸಹ ಶಿಕ್ಷಕರು ೨೬೦ ರಿಂದ ೪೦೯, ತಾ. ೨೬ ರಂದು ಪರಸ್ಪರ ವರ್ಗಾವಣೆ ಸಹ ಶಿಕ್ಷಕರು ೧ ರಿಂದ ೩. ಪ್ರೌಢ ಶಾಲಾ ವಿಭಾಗ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರ ಕೋರಿಕೆ ವರ್ಗಾವಣೆಯು ತಾ. ೨೦ ರಂದು ನಡೆಯಲಿದೆ. ವಿಶೇಷ ಶಿಕ್ಷಕರು ೧ರಿಂದ ೯, ದೈಹಿಕ ಶಿಕ್ಷಣ ಶಿಕ್ಷಕರು ೧ ರಿಂದ ೩೦, ಸಹ ಶಿಕ್ಷಕರು ೧ ರಿಂದ ೧೫೦, ತಾ. ೨೧ರಂದು ಸಹ ಶಿಕ್ಷಕರು ೧೫೧ ರಿಂದ ೪೩೨, ಪರಸ್ಪರ ವರ್ಗಾವಣೆಯು ತಾ. ೨೬ ರಂದು ನಡೆಯಲಿದ್ದು, ಸಹ ಶಿಕ್ಷಕರು ೧ ರಿಂದ ೮ ಆದ್ಯತಾ ಕ್ರಮ ಸಂಖ್ಯೆಯಾಗಿರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ತಿಳಿಸಿದ್ದಾರೆ.