ಕುಶಾಲನಗರ, ನ. ೧೫: ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿ ಕುಶಾಲನಗರ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಕುಶಾಲನಗರದ ಕಾರ್ಯಪ್ಪ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಭಯೋತ್ಪಾದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಬAಧಿಸಿದವರು ಇಂತಹ ದುಷ್ಟಶಕ್ತಿಗಳನ್ನು ಅಡಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಿ.ಎಲ್. ನಾಗರಾಜ್, ಈ ಘಟನೆ ಖಂಡನೀಯವಾಗಿದ್ದು, ದೇಶದ ಜನತೆ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಮಂಜುನಾಥ್, ರಾಜೀವ್, ಪ್ರವೀಣ್, ಹರೀಶ್, ದಿನೇಶ್, ಮಂಜು, ಸೌರವ್, ಸಂತೋಷ್, ಸುಮನ್, ಚಂದ್ರು ಹಾಗೂ ಇನ್ನಿತರರು ಇದ್ದರು.