ಹೆಬ್ಬಾಲೆ, ನ. ೧೫: ತಾಲೂಕಿನ ಗಡಿಗ್ರಾಮಗಳಾದ ಹೆಬ್ಬಾಲೆ ಹಾಗೂ ಶಿರಂಗಾಲ ಗ್ರಾಮದ ದೇವಾಲಯಗಳಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.

ಹೆಬ್ಬಾಲೆಯ ಬನಶಂಕರಿ ದೇವಾಲಯ ಗರ್ಭಗುಡಿ ಬೀಗ ಮುರಿದು ಕೆಲವು ಚಿನ್ನ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದು,ಶಿರಂಗಾಲ ಗ್ರಾಮದ ಶ್ರೀ ಮಂಟಿಗಮ್ಮ ದೇವಾಲಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಹಣಕ್ಕಾಗಿ ಜಾಲಾಡಿದ್ದಾರೆ.ಆದರೆ ಅಲ್ಲಿ ಯಾವುದೇ ಬೆಲೆಬಾಳುವ ಆಭರಣ ಸಿಕ್ಕಿಲ್ಲ. ಅದೇ ಗ್ರಾಮದ ನೂತನ ವಿನಾಯಕ ದೇವಾಲಯದ ಕಾಣಿಕೆ ಡಬ್ಬಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಸ್ವಾಮಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿಯಿಂದ ಶ್ವಾನದಳದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ ಕಳ್ಳರ ಸುಳಿವು ಸಿಕ್ಕಿಲ್ಲ.

ಹೆಬ್ಬಾಲೆ ಬನಶಂಕರಿ ದೇವಾಲಯದ ಅಧ್ಯಕ್ಷ ಎಚ್.ಟಿ.ರಮೇಶ್ ಹಾಗೂ ಕಾರ್ಯದರ್ಶಿ ಎಚ್.ಟಿ.ಸೋಮಣ್ಣ ಮಾತನಾಡಿ, ಬನಶಂಕರಿ ದೇವಾಲಯ ಗರ್ಭಗುಡಿಯ ಬೀಗ ಮುರಿದು ಕಳ್ಳರು ದೇವಿಯ ವಿಗ್ರಹಕ್ಕೆ ಹಾಕಲಾಗಿದ್ದ ಮೂರು ಚಿನ್ನದ ತಾಳಿ ಹಾಗೂ ಬೆಳ್ಳಿ ಕಾಲು ಉಂಗುರವನ್ನು ದೋಚಿದ್ದಾರೆ. ಕಳೆದ ವಾರ ಕಾಣಿಕೆ ಡಬ್ಬಿ ತೆಗದು ದೇವಾಲಯ ಸಮಿತಿ ಅವರು ತೆಗೆದುಕೊಂಡಿದ್ದರಿAದ ಕಾಣಿಕೆ ಡಬ್ಬಿಯನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾರೆ. ಅದೇ ರೀತಿ ಪಕ್ಕದ ಗಣಪತಿ ದೇವಾಲಯದ ಒಳಗು ಕಳ್ಳರು ನುಗ್ಗಿದ್ದು ಯಾವುದೇ ಹಣ ಸಿಕ್ಕಿಲ್ಲ ಎಂದರು.