ಕೂಡಿಗೆ, ನ. ೨೫: ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ಮಾರ್ಗಶಿರ ಶುಕ್ಲ ಸಪ್ತಮಿ ಮಂಗಳವಾರ ಬೆಳಿಗ್ಗೆ ಪುಣ್ಯಾಹ ಪಂಚಗವ್ಯಶುಧ್ಧಿ ಅಂಕುರಾರ್ಪಣ, ಧ್ವಜಾರೋಹಣ, ಗಣಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆದು ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ದೇವಾಲಯದ ಆವರಣದಲ್ಲಿ ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್, ಅರಕಲಗೂಡಿನ ಶ್ರೀ ಹರಿ ತಂಡದವರು ನೆರವೇರಿಸಿದರು. ಸಂಜೆ ಮಹಾಪೂಜೆ, ಅಷ್ಠಾವದಾನ ಸೇವೆ, ಮಹಾಮಂಗಳಾರತಿ, ದೇವಾಲಯದ ಸನ್ನಿಧಿಯಿಂದ ಕೂಡಿಗೆ-ಕೂಡುಮಂಗಳೂರು ರಾಜಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.