ಗೋಣಿಕೊಪ್ಪ ವರದಿ, ನ. ೨೫: ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ಅಂಗವಾಗಿ ಪೊನ್ನಂಪೇಟೆ ತಾಲೂಕಿನಲ್ಲಿ ಹೊಸ ಸೌಹಾರ್ದ ಸಹಕಾರಿ ಸಂಘಗಳನ್ನು ಪ್ರಾರಂಭಿಸುವ ಕುರಿತು ತಾಲೂಕು ಮಟ್ಟದ ಪ್ರವರ್ತಕರ ಸಭೆಯನ್ನು ಕಾವೇರಿ ಮಹಿಳಾ ಸಮಾಜದಲ್ಲಿ ನಡೆಸಲಾಯಿತು.

ವೀರಾಜಪೇಟೆ ಕೊಡವ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಎನ್. ಪಿ. ಮುತ್ತಣ್ಣ ಉದ್ಘಾಟಿಸಿದರು. ಕಾವೇರಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೆರ ಉತ್ತರೆ ಅಪ್ಪಚ್ಚು ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಮಹಿಳಾ ಸಮಾಜದ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ ಪಾಲ್ಗೊಂಡಿದ್ದರು.

ಹೊಸ ಸೌಹಾರ್ದ ಸಹಕಾರಿಯ ಸ್ಥಾಪನೆಯ ಕುರಿತು ಹಾಗೂ ಸೌಹಾರ್ದ ಚಳುವಳಿಯ ಬಗ್ಗೆ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಆರ್. ಎಸ್. ಸುರೇಶ್ ಮಾಹಿತಿ ನೀಡಿದರು. ಪೊನ್ನಂಪೇಟೆ ತಾಲೂಕಿನ ಮುಖಂಡರು, ಹೊಸ ಸೌಹಾರ್ದ ಸಹಕಾರಿ ಸಂಘಗಳನ್ನು ಪ್ರಾರಂಭಿಸಲು ಅಸಕ್ತರು ಭಾಗವಹಿಸಿದ್ದರು.