ಮಡಿಕೇರಿ, ನ. ೨೫: ಕೂಡಿಗೆ ಕ್ರೀಡಾಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕರ್ನಂಡ ಕೃತಿಕಾ ಅಕ್ಕಮ್ಮ ಪ್ರಥಮ, ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ ಪ್ರಥಮ, ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕರ್ನಂಡ ಶತಕ ದ್ವಿತೀಯ, ೪x೪೦೦ ಮೀಟರ್ ರಿಲೇ ಸ್ಪರ್ಧೆಯಲ್ಲಿ ಕುಲ್ಲಚಂಡ ಭೂಮಿಕಾ ಭೋಜಮ್ಮ, ಕರ್ನಂಡ ಶತಕ ಕಾವೇರಮ್ಮ, ಕರ್ನಂಡ ಕೃತಿಕಾ ಅಕ್ಕಮ್ಮ, ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಅಥ್ಲೆಟಿಕ್ ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.