ಸಿದ್ದರಾಮಯ್ಯ ಹೈಕಮಾಂಡ್ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: ಯತೀಂದ್ರ
ಮೈಸೂರು, ನ. ೨೭: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರ ಪುತ್ರ ಮತ್ತು ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಯ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ ಮತ್ತು ಅವರು ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂದು ಗುರುವಾರ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ ಮತ್ತು ಶಾಸಕರ ಬೆಂಬಲ ಹೊಂದಿದ್ದಾರೆ ಎಂದು ಪ್ರತಿಪಾದಿಸಿದ ಯತೀಂದ್ರ, ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸುತ್ತಿರುವ ಕೆಲವು ವರ್ಗಗಳ ಬೇಡಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳುವುದು ದೊಡ್ಡ ಶಕ್ತಿ ಎಂಬ ಶಿವಕುಮಾರ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದರು.
ರೈಲು ಸಂಚರಿಸುತ್ತಿದ್ದ ವೇಳೆಯೇ ಸೇತುವೆಯಿಂದ ಹಳಿಗೆ ಬಿದ್ದ ಟ್ರಕ್
ಲಖನೌ, ನ. ೨೭: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬುಧವಾರ ತಡರಾತ್ರಿ ರಾಮನಗರ-ಫತೇಪುರ್ ಫ್ಲೈಓವರ್ನಿಂದ ಮರದ ಪ್ಲೈಗಳನ್ನು ತುಂಬಿದ್ದ ಟ್ರಕ್ವೊಂದು ೨೫ ಅಡಿ ಎತ್ತರದ ಸೇತುವೆಯಿಂದ ಕಳೆಗೆ ಬಿದ್ದಿದ್ದು, ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್ಪ್ರೆಸ್ (೧೨೨೦೪) ರೈಲು ಪಕ್ಕದ ಡೌನ್ ಲೈನ್ನಲ್ಲಿ ಹಾದುಹೋಗುತ್ತಿದ್ದ ವೇಳೆಯೇ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಡಂಪರ್ ಟ್ರಕ್ ಸೇತುವೆಯ ರೇಲಿಂಗ್ಗೆ ಗುದ್ದಿ, ಸುಮಾರು ೨೫ ಅಡಿ ಮೇಲಿಂದ ಹಳಿಗಳ ಮೇಲೆ ಬಿದ್ದಿದೆ. ಈ ವೇಳೆ ಫ್ಲೈಓವರ್ನಿಂದ ಬಂದ ದೊಡ್ಡ ಕಲ್ಲು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲಿನ ಜಿ-೨ ಕೋಚ್ನ ಛಾವಣಿಗೆ ಬಡಿದಿದೆ. ಮುರಿದ ರೇಲಿಂಗ್ನ ಅವಶೇಷಗಳು ರೈಲಿನ ಮೇಲಿನ ಭಾಗಕ್ಕೆ ಅಪ್ಪಳಿಸಿದ್ದು, ರೈಲು ಸ್ವಲ್ಪದರಲ್ಲೇ ದೊಡ್ಡ ಹಾನಿಯಿಂದ ಪಾರಾಗಿದೆ. ಘಟನೆಯ ನಂತರ ಬಾರಾಬಂಕಿ ಮತ್ತು ಗೊಂಡಾಗೆ ಹೋಗುವ ಎರಡೂ ಹಳಿಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಗೊಂಡಾ ನಿಲ್ದಾಣದಿಂದ ಆಗಮಿಸಿದ ರಕ್ಷಣಾ ತಂಡ ಟ್ರಕ್ ಅನ್ನು ಹಳಿಯಿಂದ ತೆರವುಗೊಳಿಸಿದೆ.
ಶ್ರೀಲಂಕಾದಲ್ಲಿ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ೩೧ ಸಾವು
ಕೊಲಂಬೊ, ನ. ೨೭: ಈ ವಾರ ಶ್ರೀಲಂಕಾದಾದ್ಯAತ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಕನಿಷ್ಟ ೩೧ ಜನರು ಮೃತಪಟ್ಟು ೧೪ ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದುಲ್ಲಾದ ಮಧ್ಯ ಚಹಾ ಬೆಳೆಯುವ ಜಿಲ್ಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಅಲ್ಲಿ ಪರ್ವತ ಇಳಿಜಾರುಗಳಲ್ಲಿ ಭೂಕುಸಿತ ಉಂಟಾಗಿ ಮನೆಗಳ ಮೇಲೆ ಬಿದ್ದು ೧೬ ಜನರು ಜೀವಂತ ಸಮಾಧಿಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಹೇಳಿಕೆಯಲ್ಲಿ ತಿಳಿಸಿದೆ. ಪಕ್ಕದ ನುವಾರ ಎಲಿಯಾ ಜಿಲ್ಲೆಯಲ್ಲಿ ಇದೇ ರೀತಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಸಾವುನೋವುಗಳು ಬೇರೆಡೆ ವರದಿಯಾಗಿವೆ. ಭೂಕುಸಿತದಲ್ಲಿ ಸುಮಾರು ೪೦೦ ಮನೆಗಳು ಹಾನಿಗೊಳಗಾಗಿದ್ದು, ೧,೧೦೦ ಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಗೊAಡಿವೆ. ಶ್ರೀಲಂಕಾದಾದ್ಯAತ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ತಗ್ಗು ಪ್ರದೇಶಗಳ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವAತೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು: ಟ್ರ್ಯಾಕ್ಟರ್ ಪಡೆದು ರೈತರಿಗೆ ವಂಚನೆ; ಖಾಸಗಿ ಬಸ್ ಚಾಲಕನ ಬಂಧನ
ಬೆAಗಳೂರು, ನ. ೨೭: ರೈತರ ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ಪಡೆದು ನಂತರ ಮಾರಾಟ ಮಾಡುವ ಮೂಲಕ ವಂಚಿಸಿದ ಆರೋಪದ ಮೇಲೆ ಚಿಕ್ಕಜಾಲ ಪೊಲೀಸರು ೩೫ ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸುಮಾರು ೭೦ ಲಕ್ಷ ರೂ. ಮೌಲ್ಯದ ೧೭ ಟ್ರ್ಯಾಕ್ಟರ್ಗಳು ಮತ್ತು ಟ್ರೇಲರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ದಿಟ್ಟೂರಹಳ್ಳಿ ನಿವಾಸಿ ಮತ್ತು ಖಾಸಗಿ ಬಸ್ ಚಾಲಕ ದೇವರಾಜ್ ಪಿ. ಮಾಸಿಕ ಬಾಡಿಗೆ ಪಾವತಿಸುವ ನೆಪದಲ್ಲಿ ದೇವರಾಜ್ ಚಿಕ್ಕಜಾಲದ ಹಲವಾರು ರೈತರಿಂದ ಟ್ರ್ಯಾಕ್ಟರ್ಗಳು ಮತ್ತು ಟ್ರೇಲರ್ಗಳನ್ನು ಪಡೆದಿದ್ದ. ಕೆಲವು ತಿಂಗಳುಗಳಿAದ, ರೈತರಿಗೆ ಹಣ ಸಿಗುತ್ತಿತ್ತು. ಆದರೆ ಕಳೆದ ಐದು ತಿಂಗಳುಗಳಿAದ, ಅವರು ಬಾಡಿಗೆ ಹಣ ನೀಡುವುದನ್ನು ನಿಲ್ಲಿಸಿದ. ಜೊತೆಗೆ ಸಮಯಕ್ಕೆ ಸರಿಯಾಗಿ ವಾಹನಗಳನ್ನು ಹಿಂದಿರುಗಿಸಲು ವಿಫಲರಾದರು. ಅವರು ಎಲ್ಲಾ ವಾಹನಗಳನ್ನು ಆಂಧ್ರಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಖರೀದಿದಾರರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಎಂಬುದು ತಿಳಿದು ಬಂತು. ವಂಚನೆಗೆ ಒಳಗಾದ ಚಿಕ್ಕಜಾಲದ ರೈತ ಬಸವರಾಜು ಕಳೆದ ತಿಂಗಳು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.