ಮಡಿಕೇರಿ, ನ. ೨೮: ಇದೊಂದು ವಿಶಿಷ್ಟ ಬಗೆಯ ಕಾರ್ಯಕ್ರಮ... ಕೊಡವ ಸಾಂಪ್ರ ದಾಯಿಕ ಧಿರಿಸಿನಲ್ಲಿ ಪಾಲ್ಗೊಂಡಿದ್ದ ಪುರುಷರು, ಮಹಿಳೆಯರು, ತಳಿಯ ತಕ್ಕಿ ಬೊಳಕ್ ಹಾಗೂ ದುಡಿಕೊಟ್ಟ್ ಪಾಟ್ ಸಹಿತವಾಗಿ ನೂರಾರು ಮಂದಿ ಸೇರಿ ಗಿಡವೊಂದನ್ನು ನೆಡುವ ಸಂಪ್ರದಾಯ ಗಮನ ಸೆಳೆಯಿತು. ಕೊಡವ ಮಂದ್ ಎಂಬದು ಧಾರ್ಮಿಕತೆಯ ಒಂದು ಕೇಂದ್ರವೂ ಆಗಿದೆ. ಈ ಮಂದ್‌ನಲ್ಲಿ ಸಾಮಾನ್ಯವಾಗಿ ಹಾಲು ಬರುವಂತಹ ಮರ ಇರುತ್ತದೆ. ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿರುವ ಈ ಮಂದ್‌ನಲ್ಲಿ ಕೊಡವ ಸಂಪ್ರದಾಯದ ಆಚರಣೆಗಳು ಜರುಗುವುದು ವಾಡಿಕೆ.
ಮಡಿಕೇರಿಯಲ್ಲಿ ಜಿಲ್ಲಾ ಕ್ರೀಡಾಂಗಣದ ಸನಿಹದಲ್ಲಿನ ಕೊಡವ ಸಮಾಜದ ಅಧೀನದ ಕೊಡವ ಮಂದ್‌ನಲ್ಲಿ ಈ ಹಿಂದೆ ಇದ್ದ ಬೃಹತ್ ಗಾತ್ರದ ನೂರಾರು ವರ್ಷಗಳ ಐತಿಹ್ಯವಿದ್ದ ಹತ್ತಿ ಮರ ಇತ್ತೀಚೆಗೆ ಭಾರೀ ಮಳೆ - ಗಾಳಿಯ ಸಂದರ್ಭದಲ್ಲಿ ಧರಾಶಾಹಿಯಾಗಿತ್ತು.
ಇದೀಗ ಈ ಮಂದ್‌ನಲ್ಲಿ ಒಂದಷ್ಟು ಬದಲಾವಣೆಗಳೂ ಧಾರ್ಮಿಕ ನೆಲೆಗಟ್ಟಿನಲ್ಲಿ ಆಗಿದ್ದು, ಪುನರ್‌ರೂಪಿತಗೊಂಡಿದೆ. ಈ ಸ್ಥಳದಲ್ಲಿ ಇಂದು ಹೊಸದಾಗಿ ಆಲ್‌ಮರ (ಆಲದ ಮರ) ನೆಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯವನ್ನು ಸಂಪ್ರದಾಯಬದ್ಧವಾಗಿ ಕೊಡವ ಸಮಾಜದ ಮೂಲಕ ನೆರವೇರಿಸಲಾಗಿದ್ದು, ಇದಕ್ಕೆ ಸಮಾಜದ ಪ್ರಮುಖರುಗಳೊಂದಿಗೆ ಪ್ರಮುಖ ಜನಪ್ರತಿನಿಧಿಗಳು ಕೈಜೋಡಿಸಿದ್ದು, ವಿಶೇಷವಾಗಿತ್ತು. ಸಂಸದ ಯದುವೀರ್ ಒಡೆಯರ್, ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್‌ಗೌಡ ಅವರುಗಳು ಆಲ್‌ಮರ ನೆಡುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಂದ್‌ನಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಿದೆ.
ಪುರಾತನ ಮಂದ್‌ನ ರಕ್ಷಣೆ ನಮ್ಮೆಲ್ಲರ ಹೊಣೆ : ಪೊನ್ನಣ್ಣ
ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ತಳಿಯಕ್ಕಿ ದೀಪ ಹಿಡಿದು, ದುಡಿಕೊಟ್ಟ್ ಹಾಡಿನೊಂದಿಗೆ ವೀರಾಜಪೇಟೆಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟೀರ ಪೊನ್ನಣ್ಣ ಅವರನ್ನು ನೂತನ ಕಟ್ಟೆಯನ್ನು ನಿರ್ಮಿಸಿದ ಮಂದ್‌ಗೆ ಕರೆತರಲಾಯಿತು. ಅದರಲ್ಲಿ ಅರಳಿ ಮರವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಶಾಸಕರು ಇದರಲ್ಲಿ ಕೈಜೋಡಿಸಿದರು.
ಸುಮಾರು ೨೫೦ ವರ್ಷಗಳ ಇತಿಹಾಸ ಹೊಂದಿರುವ ಮಂದ್‌ನಲ್ಲಿದ್ದ ಬೃಹತ್ ಮರ ಕಳೆದ ಮಳೆಗಾಲದಲ್ಲಿ ಮರಿದು ಬಿದ್ದ ಪರಿಣಾಮ ನೂತನ ಕಟ್ಟೆ ನಿರ್ಮಿಸಿ ಆಲದ ಮರವನ್ನು ನೆಡಲಾಗಿದೆ. ೪ಆರನೇ ಪುಟಕ್ಕೆ (ಮೊದಲ ಪುಟದಿಂದ)
ಮAದ್‌ನ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು. ಮಡಿಕೇರಿ ಕ್ಷೇತ್ರರ ಶಾಸಕ ಮಂತರ್ ಗೌಡ ಅವರೂ ಪಾಲ್ಗೊಂಡು ಮಾತನಾಡಿ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಆಚರಣೆಯಂತೆ ಊರಿಗೆ ಒಂದು ಆಲದಮರ ಇರುತ್ತಿತ್ತು. ಅದರಂತೆ ಮಡಿಕೇರಿಯಲ್ಲಿರುವ ಮಂದ್‌ನಲ್ಲಿ ಇದೀಗ ಕೊಡವ ಸಂಪ್ರದಾಯದAತೆ ಹೊಸದಾಗಿ ಅರಳಿಮರ ನೆಡಲಾಗಿರುವುದು ಹೆಮ್ಮೆಯ ವಿಷಯವೆಂದರು. ಮಂದ್‌ನ ಅಭಿವೃದ್ಧಿಗೆ ಅನುದಾನ ಹಾಗೂ ವೈಯಕ್ತಿಕ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು. ಮೈಸೂರು ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಕೊಡಗಿನ ಸಂಸ್ಕೃತಿ, ಐನ್ ಮನೆಗಳು, ಮಡಿಕೇರಿಯ ಕೋಟೆ, ಸಂಸ್ಕೃತಿಯ ನೆಲೆಯಾದ ಮಡಿಕೇರಿಯಲ್ಲಿ ಪುರಾತನ ಮಂದ್‌ನ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಮಾಜಿ ಎಂಎಲ್ ಸಿ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ ಪುರಾತನ ನೆಲೆಯನ್ನು ಉಳಿಸಿ ಬೆಳೆಸುವುದು ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವAಡ ಪಿ. ಮುತ್ತಪ್ಪ, ಉಪಾಧ್ಯಕ್ಷರಾದ ಕೇಕಡ ವಿಜು ದೇವಯ್ಯ, ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರಾದ ಶಾಂತೆಯAಡ ವಿಶಾಲ್ ಕಾರ್ಯಪ್ಪ, ಮಂಡೀರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವAಡ ರವಿ ಬಸಪ್ಪ, ಕನ್ನಂಡ ಕವಿತ ಕಾವೇರಮ್ಮ, ಕಾಂಡೇರ ಲಲ್ಲು , ಪಾಲೆಯಂಡ ರೂಪ, ಪೆಮ್ಮಡಿಯಂಡ ಉತ್ತಪ್ಪ, ಪುಲ್ಲೆರ ವಸಂತ್, ಮಡಿಕೇರಿ ಸಮಾಜದ ಸದಸ್ಯರು, ಕೊಡವಕೇರಿ ಪದಾಧಿಕಾರಿಗಳು ಹಾಜರಿದ್ದರು. ಉಪಾಧ್ಯಕ್ಷರಾದ ಕೇಕಡ ವಿಜು ದೇವಯ್ಯ ಕಾರ್ಯಕ್ರವನ್ನು ನಿರೂಪಿದರು.