ಮಡಿಕೇರಿ, ನ. ೨೮: ಪುತ್ತರಿ ಹಬ್ಬದ ಪ್ರಯುಕ್ತ ಮಡಿಕೇರಿ ಕೊಡವ ಸಮಾಜದ ವತಿಯಿಂದ ತಾ. ೩೦ ರಿಂದ ಡಿಸೆಂಬರ್ ೨ರವರೆಗೆ ಮಡಿಕೇರಿಯ ಕೋಲ್ ಮಂದ್‌ನಲ್ಲಿ ಪುತ್ತರಿ ಈಡ್ ನಡೆಯಲಿದೆ.

ತಾ.೩೦ ರ ಸಂಜೆ ೬.೩೦ಕ್ಕೆ ಕೊಡವ ಸಮಾಜದ ಹಾಗು ಕೊಡವ ಕೇರಿಯ ಪದಾಧಿಕಾರಿಗಳು ಸದಸ್ಯರು ಕೋಲ್ ಮಂದ್‌ನಲ್ಲಿ ಪ್ರಾರ್ಥಿಸಿ ಪುತ್ತರಿ ಹಬ್ಬದ ಕೋಲಾಟ್ ನಲ್ಲಿ ಭಾಗವಹಿಸುವಂತೆ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.