ಮಡಿಕೇರಿ, ನ. ೨೭ : ೨೪ ರಾಷ್ಟçಗಳು ಪಾಲ್ಗೊಳ್ಳುತ್ತಿರುವ ಪ್ರತಿಷ್ಠಿತ ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾಟ ತಾ. ೨೮ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ಭಾರತದಲ್ಲಿ ಈ ಬಾರಿಯ ಜೂನಿಯರ್ ವಿಶ್ವಕಪ್ ಹಾಕಿ ನಡೆಯುತ್ತಿದ್ದು, ತಮಿಳುನಾಡಿನ ಚೆನ್ನೆöÊ ಹಾಗೂ ಮಧುರೈಯಲ್ಲಿ ತಾ. ೨೮ರಿಂದ ಡಿಸೆಂಬರ್ ೮ರ ತನಕ ಪಂದ್ಯಾವಳಿ ಆಯೋಜಿಸಲಾಗಿದೆ. ಭಾರತೀಯ ಹಾಕಿ ತಂಡವೂ ಈ ಪ್ರಶಸ್ತಿಗಾಗಿ ಸೆಣೆಸಲಿದೆ. ಆದರೆ ತಂಡದಲ್ಲಿ ಹಾಕಿಗೆ ಹೆಸರಾದ ಕೊಡಗು ಜಿಲ್ಲೆಯ ಯಾರೊಬ್ಬ ಆಟಗಾರರೂ ಈ ಬಾರಿ ಸ್ಥಾನ ಪಡೆಯದಿರುವ ಕೊರಗು ಕೊಡಗಿನ ಹಾಕಿ ಅಭಿಮಾನಿಗಳಲ್ಲಿದೆ. ಕರ್ನಾಟಕದಿಂದ ಶಿವಮೊಗ್ಗ ದವರಾದ ಪಿ.ಬಿ. ಸುನಿಲ್ ಮಾತ್ರ ಭಾರತ ತಂಡದಲ್ಲಿರುವ ಏಕೈಕ ಆಟಗಾರ. ೨೦೨೩ರಲ್ಲಿ ನಡೆದ ಜೂನಿಯರ್ ವಿಶ್ವಕಪ್ನಲ್ಲಿ ಕೊಡಗಿನ ಆಟಗಾರ ಚಂದುರ ಬಿ. ಪೂವಣ್ಣ ಹಾಗೂ ಹಾಸನದ ಹೆಚ್.ಎಸ್. ಮೋಹಿತ್ ತಂಡದಲ್ಲಿದ್ದರು. ಈ ಇಬ್ಬರು ಆಟಗಾರರು ಪ್ರಸ್ತುತ ತಮ್ಮ ಸಾಧನೆಯಿಂದಾಗಿ ಭಾರತ ಮುಖ್ಯ ತಂಡದಲ್ಲಿ ಅವಕಾಶ ಪಡೆದಿದ್ದು ಇದೀಗ ಮಲೇಷಿಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ವಿಶ್ವಕಪ್ ಹಾಕಿಯ ಟ್ರೋಫಿ ಅನಾವರಣ ಕಾರ್ಯ ರಾಷ್ಟçದ ಎಲ್ಲಾ ರಾಜ್ಯಗಳಲ್ಲೂ ನಡೆ ದಿದ್ದು ಮೊನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪರವಾಗಿ ಟ್ರೋಫಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಗೋವಿಂದ ರಾಜ್, ಒಲಂಪಿಯನ್ಗಳಾದ ಧನರಾಜ್ ಪಿಳ್ಳೆöÊ, ಕೊಡಗಿನವರಾದ ಡಾ. ಎ.ಬಿ. ಸುಬ್ಬಯ್ಯ, ವಿ.ಆರ್. ರಘು ನಾಥ್, ಅರ್ಜುನ್ ಹಾಲಪ್ಪ, ಕೂತಂಡ ಕೆ. ಪೂಣಚ್ಚ, ವಿಕ್ರಂಕಾAತ್, ಪಾಂಡAಡ ಅಯ್ಯಪ್ಪ ಅವರುಗಳು ಮುಖ್ಯಮಂತ್ರಿಗಳೊAದಿಗೆ ಭಾಗಿಗಳಾಗಿದ್ದರು.
ಕೊಡಗು ಜಿಲ್ಲೆಯ ಕೆಲವಾರು ಪ್ರತಿಭಾನ್ವಿತ ಆಟಗಾರರಿದ್ದರೂ ಸೂಕ್ತ ಪರಿಶ್ರಮ ತೋರದ ಕಾರಣದಿಂದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಆಟಗಾರರು ಈ ಬಗ್ಗೆ ಭವಿಷ್ಯದಲ್ಲಿ ಗಂಭೀರ ಚಿಂತನೆ ನಡೆಸಬೇಕಿದ್ದು ವೃತ್ತಿಪರತೆಯತ್ತ ಗಮನ ಹರಿಸಲೇಬೇಕಿದೆ. ಇಲ್ಲದಿದ್ದಲ್ಲಿ ಮುಂದೆ ಬರುವುದು ಕಷ್ಟಸಾಧ್ಯ ಎಂದು ಡಾ. ಎ.ಬಿ. ಸುಬ್ಬಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. -ಶಶಿ