ಮಡಿಕೇರಿ, ಡಿ. ೩: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‌ಟಿಇಟಿ-೨೦೨೫)ಯು ತಾ. ೭ ರಂದು ಮೊದಲನೇ ಅಧಿವೇಶನ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ ಗಂಟೆ ಹಾಗೂ ೨ನೇ ಅಧಿವೇಶನ ೨ ಗಂಟೆಯಿAದ ೪.೩೦ ರವರೆಗೆ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಪರೀಕ್ಷಾ ಕೇಂದ್ರಗಳಾದ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು (ಬ್ಲಾಕ್-೧) (ಅಭ್ಯರ್ಥಿಯ ಸಂಖ್ಯೆ ಬೆಳಗ್ಗೆ ೨೨೮, ಮಧ್ಯಾಹ್ನ ೨೭೬), ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ (ಬ್ಲಾಕ್-೨) (ಅ.ಸಂ.ಬೆಳಗ್ಗೆ ೨೨೮, ಮಧ್ಯಾಹ್ನ ೨೭೬), ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಅ.ಸಂ. ಮಧ್ಯಾಹ್ನ ೨೩೬), ಮಡಿಕೇರಿ ಸಂತ ಮೈಕಲರ ಪ್ರೌಢಶಾಲೆ (ಅ.ಸಂ.ಬೆಳಗ್ಗೆ ೨೨೭, ಮಧ್ಯಾಹ್ನ ೨೭೬) ಹಾಗೂ ಮಡಿಕೇರಿ ಸಂತ ಮೈಕಲರ ಪದವಿಪೂರ್ವ ಕಾಲೇಜು (ಅ.ಸಂ.ಮಧ್ಯಾಹ್ನ ೨೩೯) ಒಟ್ಟು ಅಭ್ಯರ್ಥಿಗಳ ಸಂಖ್ಯೆ ಬೆಳಗ್ಗೆ ೬೮೩ ಮತ್ತು ಮಧ್ಯಾಹ್ನ ೧೩೦೩. ಹೆಚ್ಚಿನ ಮಾಹಿತಿಗೆ ಕಚೇರಿಯ ಪರೀಕ್ಷಾ ನೋಡಲ್ ಅಧಿಕಾರಿ ಬಿಂದು ಕೆ.ಆರ್. ಅವರ ಮೊ.ಸಂ.೯೬೧೧೭೨೦೩೨೦ ಹಾಗೂ ಸಹಾಯವಾಣಿ ಸಂಖ್ಯೆ ಉಪ ನಿರ್ದೇಶಕರು(ಆಡಳಿತ) ೯೪೪೮೯೯೯೩೪೪ನ್ನು ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ತಿಳಿಸಿದ್ದಾರೆ.